ಮಹಿಳಾ ಒಕ್ಕೂಟಗಳು ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಿ: ಜಿಪಂ ಸಿಇಓ ಡಾ.ಚನ್ನಪ್ಪ ಸಲಹೆ

Suddivijaya
Suddivijaya December 8, 2022
Updated 2022/12/08 at 3:01 AM

ಸುದ್ದಿವಿಜಯ,ಜಗಳೂರು: ಈಗಾಲೇ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುತ್ತಿರುವ ಮಹಿಳಾ ಒಕ್ಕೂಟಗಳು ಗ್ರಾಮೀಣ ಮಟ್ಟದಲ್ಲಿ ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಇನ್ನೂ ಹೆಚ್ಚಿನ ಸ್ವಾವಂಬನೆ ಸಾಧಿಸುವಲ್ಲಿ ಅನುಮಾನವಿಲ್ಲ ಎಂದು ಜಿಪಂ ಸಿಇಓ ಡಾ.ಚನ್ನಪ್ಪ ಸಲಹೆ ನೀಡಿದರು.

ತಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಗ್ರಾಪಂ ಮಟ್ಟದ ಸ್ವಸಾಯ ಮಹಿಳಾ ಒಕ್ಕೂಟ ಹಾಗೂ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹಿಳಾ ಸಂಘಗಳ ಪದಾಧಿಕಾರಿಗಳಿಗೆ ಸಲಹೆ ನೀಡಿದರು.

ಸರಕಾರ ಕೊಟ್ಟಿರುವ ಹಣ ಬಡ್ಡಿರೂಪದಲ್ಲಿ ಮತ್ತು ಸಹಾಯಧನದ ರೂಪದಲ್ಲಿ ನಿಮ್ಮ ಕೈಲಿದೆ. ಆದರೆ ಮಹಿಳಾ ಸಂಘಗಳ ಸಬಲೀಕರಣವಾಗಬೇಕಾದರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಕನಸು ಈಡೇರಬೇಕಾದರೆ ಮೊದಲು ಗ್ರಾಮೀಣ ಮಟ್ಟದಲ್ಲಿ ಗುಡಿ ಕೈಗಾರಿಕೆಗಳಾದ ಚಮ್ಮಾರಿಕೆ, ಕುಂಬಾರಿಕೆ, ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಪೇರಿ, ಆಹಾರ ಉತ್ಪಾದನೆಗಳ ಮೌಲ್ಯವರ್ಧನೆ ಮಾಡಬೇಕು. ಉದಾಹರಣೆಗೆ ರೈತರೇ ಬೆಳೆಯುವ ರಾಗಿ, ಜೋಳ, ಗೋಧಿ, ಕಡಲೆ, ಬೇಳೆಗಳನ್ನು ಸ್ಥಳೀಯವಾಗಿ ಖರೀದಿಸಿ ಅ ಉತ್ಪನ್ನಗಳಿಗೆ ಪ್ಯಾಕೇಟ್ ರೂಪ ನೀಡಿ ಸ್ಥಳೀಯವಾಗಿ ಮಾರಾಟ ಮಾಡಿದರೆ ಅವುಗಳಿಗೆ ಸಿಗುವ ಧರ ಹೆಚ್ಚಿರುತ್ತದೆ. ನಿರುದ್ಯೋಗ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಮಾಹಿತಿ ನೀಡಿದರು.

ಮಹಿಳಾ ಸಂಘಟನೆಗಳಿಗೆ ಶಕ್ತಿ ತುಂಬುವುದರಿಂದ ಆರ್ಥಿಕವಾಗಿ ಮಹಿಳೆಯರು ಸ್ವಾವಲಂಬಿಗಳಾಗುತ್ತಾರೆ. ಹಣದ ವಹಿವಾಟು ಹೆಚ್ಚು ವಿಸ್ತಾರವಾಗುತ್ತದೆ. ಮಹಿಳಾ ಒಕ್ಕೂಟಗಳಲ್ಲಿ ಆರ್ಥಿಕ ಸಬಲತೆ ಕಾಣುತ್ತಿದೆ. ವೃತ್ತಿ ಆಧಾರಿತ ಕಾರ್ಯಗಳನ್ನು ಮಾಡಬೇಕು. ಇತ್ತೀಚೆಗಂತೂ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಸಾಕಷ್ಟು ಯೋಜನೆಗಳು ಬಂದಿವೆ. ಹಿಟ್ಟಿನ ಗಿರಣಿ, ಎಣ್ಣೆಗಾಣ, ಕ್ಯಾಂಡಲ್ ತಯಾರಿಕೆ, ಊದುಬತ್ತಿ ತಯಾರಿಕೆ, ಬೇಳೆಕಾಳು ಸಂಸ್ಕರಣೆ ಮತ್ತು ಎಲ್ಲ ಆಹಾರ ಉತ್ಪನ್ನಗಳನ್ನು ಪ್ಯಾಕಿಂಗ್ ಮಾಡುವ ಮೂಲಕ ಸ್ಥಳೀಯವಾಗಿ ಮೌಲ್ಯವರ್ಧನೆ ಮಾಡಲು ಅವಕಾಶವಿದೆ. ಈ ರೀತಿಯ ಗುಡಿ ಕೈಗಾರಿಕೆಗಳಲ್ಲಿ ಸ್ವಾವಲಂಬನೆ ಸಾಧಿಸಿದರೆ ಮಾತ್ರ ಮಹಿಳೆಯರು ಆರ್ಥಿಕವಾಗಿ ಪುರುಷರಷ್ಟೇ ಸಮನಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಮೊದಲೆಲ್ಲಾ ಹಳ್ಳಿಗಳೇ ಆರ್ಥಿಕ ವಹಿವಾಟು ಕೇಂದ್ರಗಳಾಗಿದ್ದವು. ಇತ್ತೀಚೆಗೆ ಹಳ್ಳಿಯ ಹಾಲು ಪತ್ತೆ ಪ್ಯಾಕೇಟ್ ರೂಪದಲ್ಲಿ ಹಳ್ಳಿಗೆ ಸೇರುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ರೋಗಗಳು ಹೆಚ್ಚಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಆಹಾರ ಉತ್ಪನ್ನಗಳಾದ ತೊಗರಿ, ಕಡಲೆ, ಜೋಳ ಮತ್ತಿತರ ವಸ್ತುಗಳನ್ನು ನೀವೇ ಒಕ್ಕೂಟದಲ್ಲಿ ಖರೀದಿಸಿ ನಂತರ ಹಿಟ್ಟಿನ ಗಿರಣಿಯನ್ನು ನಡೆಸಿ ಅಲ್ಲೇ ಉತ್ಪಾದನೆ ಮಾಡಿ ಬ್ರಾಂಡ್ ಮಾಡಿ, ಅದಕ್ಕೆ ಸರಕಾರ ಬೆಂಬಲಿಸುತ್ತದೆ. ಬೇಕಾಗುವ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡುತ್ತದೆ. ಉತ್ಪಾದನೆಯಾಗುವ ವಸ್ತುಗಳಿಗೆ ನೀವೇ ಲೇಬಲ್ ಹಾಕಿ ಮಾರಾಟ ಮಾಡಿದರೆ ಹೆಚ್ಚು ಮಹಿಳಾ ಸಂಘಗಳಿಗೆ ಅನುಕೂಲವಾಗುತ್ತದೆ. ಹಳ್ಳಿಗಳಲ್ಲೇ ಉತ್ಪಾದನೆ ಆದ ವಸ್ತುವನ್ನೂ ಪೇಟೆ ಪಟ್ಟಣಗಳಿಗೆ ತಂದು ಮಾರಾಟ ಮಾಡಿದರೆ ಮಹಿಳಾ ಒಕ್ಕೂಟಗಳು ಸಬಲ ವಾಗುತ್ತವೆ. ಸರಕಾರ ಇಂತಹ ಮೈಕ್ರೋಫೈನಾನ್ಸ್ ಮೇನೇಜ್ ಮೆಂಟ್‍ಗಾಗಿ ಅಭಿವೃದ್ಧಿಗಾಗಿ ಸಾಕಷ್ಟು ಸಬ್ಸಿಡಿ ನೀಡುತ್ತದೆ. ಉತ್ಪಾದಿತ ಚಟುವಟಿಕೆಗಳಿಗೆ ಕ್ರೀಯಾಶೀಲವಾಗಿ ಯೋಚಿಸಬೇಕು. ಗ್ರಾಮೀಣ ಜನರು ಸ್ವವಲಂಬೀ ಜೀವನ ಆಗಬೇಕಾದರೆ ಒಕ್ಕೂಟ ವ್ಯವಸ್ಥೆ ಬಲಗೊಳ್ಳಬೇಕು ಎಂದು ಕರೆ ನೀಡಿದರು.

ನಿಮ್ಮ ಕ್ರಿಯಾಶೀಲ ಉದ್ಯಮಕ್ಕೆ ಸರಕಾರ ಮೂರು ಲಕ್ಷ ಹಣ ನೀಡುತ್ತಿದೆ. ಎನ್‍ಆರ್‍ಇಜಿ ಅಡಿ ಪೌಷ್ಟಿಕ ಕೈ ತೋಟಕ್ಕೆ ಅವಕಾಶವಿದೆ. ಮಹಿಳಾ ಒಕ್ಕೂಟಗಳು ಸಭೆ ಸೇರಲು ಎನ್‍ಆರ್‍ಎನ್‍ಎಂ ಯೋಜನೆ ಅಡಿ ಶೆಡ್ ನಿರ್ಮಾಣಕ್ಕೆ 17 ಲಕ್ಷ ಹಣ ನೀಡುತ್ತಿದ್ದೇವೆ. ಸಮುದಾಯ ಸಹಭಾಗಿತ್ವದಲ್ಲಿ ತಾವು ಭಾಗವಹಿಸಿ ಸ್ವಾಲಂಭನೆ ಸಾಧಿಸಿ ಎಂದು ಕರೆ ನೀಡಿದರು.
ಜಿಪಂ ಕಾರ್ಯದರ್ಶಿ ಮಲ್ಲಾನಾಯ್ಕ ಮಾತನಾಡಿ, ಮಹಿಳಾ ಒಕ್ಕುಟಗಳ ಸ್ವಾವಲಂಭೆಗೆ ಸರಕಾರದ ಹಣವನ್ನು ಕಟ್ಟುನಿಟ್ಟಾಗಿ ಬಳಸಿ ಪಿಡಿಒಗಳು ಇವರ ನೆರವಿಗೆ ಸದಾ ಸಿದ್ದರಾಗಿ ಎಂದರು ಸಲಹೆ ನೀಡಿದರು.

ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್ ಮಾತನಾಡಿ, ವ್ಯಕ್ತಿಗತವಾಗಿ ಮತ್ತು ಮಹಿಳಾ ಸಂಘಟನೆಗಳಿಗೆ ಕಿರು ಸಂಸ್ಕರಣ ಘಟಕ ತೆರೆಯಲು 15 ಲಕ್ಷ ರೂ ಹಣ ಸಬ್ಸಿಡಿ ಪಡೆಯಬಹುದು. ಯೋಜನಾ ವರದಿಯನ್ನು ಆನ್‍ಲೈನ್ ನಲ್ಲಿ ಸಲ್ಲಿಸಿದರೆ ಸರಕಾರವೇ ಸಮಗ್ರವಾಗಿ ಪರಿಶೀಲಿಸಿ ನಿಮ್ಮ ಉತ್ಪಾದನೆಗಳಿಗೆ ಸಾಕಷ್ಟು ನೆರವು ನೀಡುತ್ತದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ತಾಪಂ ಇಓ ಚಂದ್ರಶೇಖರ್, 22 ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ವಿವಿಧ ಮಹಿಳಾ ಒಕ್ಕೂಟಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!