ಸುದ್ದಿವಿಜಯ, ದಾವಣಗೆರೆ: ಸಹಕಾರ ಕ್ಷೇತ್ರದಲ್ಲಿ ಜಾತಿ, ಧರ್ಮ, ಪಕ್ಷಬೇದ ಯಾವುದು ಇಲ್ಲ ನಾವೆಲ್ಲ ಸಹಕಾರಿಗಳು ಎಂಬ ಭಾವನೆ ರೂಡಿಸಿಕೊಳ್ಳಬೇಕು ಎಂದು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಹಿರಿಯ ಧುರೀಣ ಡಾ.ಜೆ.ಆರ್.ಷಣ್ಮುಖಪ್ಪ ಹೇಳಿದರು.
ನಗರದ ಸದ್ಯೋಜ್ಯಾತ ಹಿರೇಮಠದಲ್ಲಿ ಜಿಲ್ಲೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಶಾಸಕರು ಮತ್ತು ಸಚಿವರನ್ನು ಆತ್ಮೀಯವಾಗಿ ಅಬಿನಂದಿಸುವ ಸಲುವಾಗಿ ಕೈಗೊಳ್ಳಬಹುದಾದ ಸಿದ್ಧತೆಗಳ ಕುರಿತು ಜಿಲ್ಲಾ ಸಹಕಾರ ಒಕ್ಕೂಟ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲರನ್ನೂ ಸನ್ಮಾನಿಸಿ ಸಹಕಾರಕೇತ್ರದ ಕುಂದು ಕೊರತೆಗಳ ಬಗ್ಗೆ ಮನವರಿಕೆ ಮಾಡಿಕೊಡುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಲ್ಲದೇ ಜಿಲ್ಲೆಯ ಸಹಕಾರಕ್ಷೇತ್ರದ ಅಭಿವೃದ್ದಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇದಕ್ಕಾಗಿ ಎಲ್ಲರೂ ಒಂದಾಗಬೇಕು.
ನಾವೆಲ್ಲ ಸಹಕಾರಿಗಳು, ಇದರಲ್ಲಿ ಯಾವುದೇ ಧರ್ಮ, ಬೇಧ, ಜಾತಿ ಇಲ್ಲ ಎಂದರು. ಶಾಸಕರು, ಸಚಿವರಿಗೆ ಸನ್ಮಾನ ಸಮಾರಂಭ ಮಾಡಲು ಯಾವ ಸ್ಥಳ ಮತ್ತು ದಿನಾಂಕ ನಿಗದಿಪಡಿಸಬೇಕಾಗಿದೆ.
ಅದಕ್ಕಾಗಿ ಸಂಪನ್ಮೂಲವನ್ನು ಕ್ರೋಢೀಕರಿಸಿ ಜಿಲ್ಲೆಯಎಲ್ಲಾ ಸಹಕಾರಿಗಳನ್ನು ಒಂದೆಡೆ ಸೇರಿಸುವ ಮುಖಾಂತರ ಸಮಾರಂಭವನ್ನು ಅತ್ಯಅತ ಯಶಸ್ವಿಯಾಗಿ ಜರುಗಿಸಲು ಮುಕ್ತವಾಗಿ ಚರ್ಚಿಸುವಂತೆ ಎಲ್ಲಾ ಸಹಕಾರಿಗಳಲ್ಲಿ ಕೋರಿದರು.
ಇತ್ತೀಚೆಗೆ ದೆಹಲಿಯಲ್ಲಿ ಜರುಗಿದ ಸಹಕಾರ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರದ ಸಹಕಾರ ಸಚಿವ ಅಮಿತ್ ಷಾ ಹೇಳಿರುವಂತೆ ಎಲ್ಲ ಸರ್ಕಾರದ ಸವಲತ್ತುಗಳನ್ನು ಸಹಕಾರ ಕೇತ್ರದ ಮುಖಾಂತರ ತಲುಪಿಸುವ ಮುಖ್ಯ ಧ್ಯೇಯವನ್ನು ಹೊಂದಿದೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಹಾಗೂ ಶಿವಮೊಗ್ಗ ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಜಗದೀಶಪ್ಪ ಬಣಕಾರ್ ಮಾತನಾಡಿ, ಸಹಕಾರಿಗಳೆಲ್ಲ ಒಂದೇಜಾತಿ, ಅದುವೇ ಸಹಕಾರ ಜಾತಿ. ಜಿಲ್ಲೆಯ ಹಿರಿಯ ಸಹಕಾರಿಯಾದ ಜೆ.ಆರ್ ಷಣ್ಮುಖಪ್ಪ ನವರ ನೇತೃತ್ವದಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸುವುದು ಸೂಕ್ತ.
ಅವರಿಗೆ ಎಲ್ಲಾರೀತಿಯ ಸಹಕಾರ ಸಂಘಗಳಿಗೆ ಹೆಚ್ಚು ಹೊರೆಯಾಗದಂತೆ ಹಣ ಕ್ರೋಢೀಕರಿಸಿ ಜಿಲ್ಲೆಯ ಎಲ್ಲಾ ಸಹಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿಸುವುದು ಸೂಕ್ತವೆಂದು ತಿಳಿಸಿದರು.
ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಎಸ್.ಬಿ ಶಿವಕುಮಾರ್ ಮಾತನಾಡಿ, ಜೆ.ಆರ್ ಷಣ್ಮುಖಪ್ಪರಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಹೆಚ್ಚು ಸಂಪನ್ಮೂಲ ಕ್ರೋಢೀಕರಿಸಲು ಶಕ್ತಿ ಇದೆ. ಆದ್ದರಿಂದ ಅವರ ನೇತೃತ್ವದಲ್ಲಿ ಸಮಾರಂಭವನ್ನುಜರುಗಿಸುವುದು ಸೂಕ್ತವೆಂದು ತಿಳಿಸಿದರು.
ಶಾಮನೂರು ಲಿಂಗರಾಜ್, ಎನ್.ಜಿ ಪುಟ್ಟಸ್ವಾಮಿ ಅವರು ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈ ಜೋಡಿಸಬೇಕೆಂದು ಹೇಳಿದರು.
ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಅಧ್ಯಕ್ಷತೆವಹಿಸಿ ಮಾತನಾಡಿ, ಜಿಲ್ಲೆಯ ಸಹಕಾರ ಕ್ಷೇತ್ರದ ಮಾತೃ ಸಂಸ್ಥೆಯಾಗಿರುವ ಜಿಲ್ಲಾ ಸಹಕಾರ ಒಕ್ಕೂಟಕ್ಕೆ ಜಿಲ್ಲೆಯ ಹಲವು ಸಹಕಾರಿಗಳ ಶ್ರಮದಿಂದಾಗಿ ನಗರಾಭಿವೃದ್ದಿ ಪ್ರಾಧಿಕಾರದಿಂದ ನಿವೇಶನ ಮಂಜೂರು ಆಗಿದೆ.
ಜಿಲ್ಲೆಯ ಎಲ್ಲಾ ಸಹಕಾರ ಸಂಸ್ಥೆಗಳಿಗೆ, ಸಹಕಾರಿಗಳಿಗೆ ಅನುಕೂಲವಾಗುವಂತೆ ಕಟ್ಟಡ ನಿರ್ಮಾಣ ಮಾಡುವ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಮ್ಮೆಲ್ಲರ ಸಹಕಾರ ಬೇಕೆಂದು ಕೋರಿದರಲ್ಲದೇ ಅಭಿನಂದನಾಕಾರ್ಯಕ್ರಮವನ್ನು ತಮ್ಮಲ್ಲರ ಸಹಕಾರದೊಂದಿಗೆ ಅದ್ದೂರಿಯಾಗಿ ಆಚರಿಸೋಣ ಎಂದು ಶುಭಕೋರಿದರು.
ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ಉಪಾಧ್ಯಕ್ಷ ಎಚ್.ಕೆ.ಬಸಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಜೆ.ಎಸ್ ವೇಣುಗೋಪಾಲರೆಡ್ಡಿ, ದಾವಣಗೆರೆಜಿಲ್ಲಾ ಸಹಕಾರಒಕ್ಕೂಟದ ನಿರ್ದೇಶಕ ಆರ್.ಜಿ ಶ್ರೀನಿವಾಸಮೂರ್ತಿ,ನಿರ್ದೇಶಕ ಎಚ್.ಕೆ ಪಾಲಾಕ್ಷಪ್ಪ, ಕರ್ನಾಟಕರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜಯಕರಶೆಟ್ಟಿ ಇಂದ್ರಾಳಿ ಮಾತನಾಡಿ, ಇದೊಂದು ಸ್ತುತ್ಯಾರ್ಹ ಕಾರ್ಯಕ್ರಮ ಎಂದರು.
ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ
ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ : ಸಹಕಾರವೇ ಸುಖ ಜೀವನದ ಅಡಿಪಾಯ, ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ ಎಂಬುದು ಸಹಕಾರದ ಧ್ಯೇಯ. ದಾವಣಗೆರೆ ಜಿಲ್ಲೆಯಲ್ಲಿ ಸಾಕಷ್ಟು ಹಿರಿಯ ಧುರೀಣರು ಸಹಕಾರಕ್ಷೇತ್ರವನ್ನು ಬಲಿಷ್ಟವಾಗಿ ಬೆಳೆಸಿದ್ದಾರೆ.
ಅವರ ಮಾರ್ಗದರ್ಶನದಲ್ಲಿ ನಮ್ಮಜಿಲ್ಲೆಯ ಸಹಕಾರ ಕ್ಷೇತ್ರವು ಅಭಿವೃದ್ದಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಹೇಳಿದರು.