ಸುದ್ದಿವಿಜಯ,ವಿಶೇಷ: ಈ ಪ್ರಪಂಚದಲ್ಲಿ ಒಬ್ಬರ ಥರನೇ ಏಳು ಮಂದಿ ಇರ್ತಾರಂತೆ. ಅದೆಷ್ಟು ಸತ್ಯವೋ ದೇವರೇ ಬಲ್ಲ. ಆದ್ರೂ ಒಮ್ಮೊಮ್ಮೆ ಸತ್ಯ ಅನ್ಸುತ್ತೆ ನೋಡಿ. ಇದ್ರೂ ಇರಬಹುದು ಅಲ್ವೇ? ಅದರಲ್ಲೂ ಸೆಲೆಬ್ರಿಟಿಗಳನ್ನು ಹೋಲುವ ಮುಖಭಾವ ಇದ್ದರಂತೂ ಅವರು ಸಿಕ್ಕಾಪಟ್ಟೆ ಫೇಮಸ್ ಆಗುತ್ತಾರೆ.
ಚಲನಚಿತ್ರ ನಟರು, ಕ್ರೀಡಾಪಟುಗಳು ಮತ್ತು ರಾಜಕಾರಣಿಗಳ ತದ್ರೂಪಿಯಂತೆ ಕಾಣಿಸುವ ವ್ಯಕ್ತಿಗಳು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಾರೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿಚಾರದಲ್ಲೂ ಹೀಗೆಯೇ ಆಗಿದೆ. ದೀಪಿಕಾ ಅವರಂತೆಯೇ ಕಾಣಿಸುವ ರಿಜುತಾ ಘೋಶ್ ದೇವ್ ಅವರು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ರಿಜುತಾ ನೋಡಲು ದೀಪಿಕಾ ಪಡುಕೋಣೆಯಂತೆ ಕಾಣಿಸುತ್ತಿದ್ದು, ಅವರ ಫೋಟೊಗಳು ಇಂಟರ್ನೆಟ್ನಲ್ಲಿ ವೈರಲ್ ಆಗಿವೆ.
ರಿಜುತಾ ಫೋಟೊಗಳಿಗೆ ಜನರು ಸಾಮಾಜಿಕ ತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದು, ದೀಪಿಕಾ 2.0, ನೀವು ದೀಪಿಕಾ ಅವಳಿ–ಜವಳಿನಾ ಎಂದೆಲ್ಲ ಕೇಳುತ್ತಿದ್ದಾರೆ.