ಸುದ್ದಿವಿಜಯ,ಗದಗ: ಬೈಕ್ ಗೆ ಗೂಡ್ಸ್ವಾಹನ ಸಿಕ್ಕಿ ಹೊಡೆದ ಪರಿಣಾಮ ಗುರುಪೌರ್ಣಿಮೆ ದಿನವೇ ಇಬ್ಬರು ಅಧಿಕಾರಿಗಳು ಸ್ಥಳದಲ್ಲೇ ಸಾವಿಗೂಡಾಗಿರುವ ಘಟನೆ ಗದಗ ಜಿಲ್ಲೆಯ ಶಿಹರಟ್ಟಿ ತಾಲೂಕಿನ ಪರಸಾವೂರ ಕ್ರಾಸ್ ಬಳಿ ಬುಧವಾರ ಸಂಜೆ ನಡೆದಿವೆ.
ಶಿರಹಟ್ಟಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ಅಶೋಕ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್ ವಿ.ಎಸ್. ಬೂದಿಹಾಳ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಧಿಕಾರಿಗಳು ಶಿರಹಟ್ಟಿ ಪಟ್ಟಣದಿಂದ ಕಾರ್ಯ ನಿಮಿತ್ತ ಮಾಗಡಿ ಗ್ರಾಮದ ಕಡೆಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತನ ಬಳಿಕೆ ಗೂಡ್ಸ್ ವಾಹನ ಚಾಳಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಸಿಪಿಐ ವಿಕಾಸ ಲಮಾಣಿ ಭೇಟಿ ಪರಿಶೀಲನೆ ನಡೆಸಿದ್ದು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.