ಸುದ್ದಿವಿಜಯ,ಹರಿಹರ: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಬರಹಳ್ಳಿ ಚೆಕ್‌ಪೋಸ್ಟ್ ಬಳಿ ದಾಖಲೆಯಿಲ್ಲದೆ ಮೋಟರ್ ಬೈಕ್‌ನಲ್ಲಿ ಸಾಗಿಸುತ್ತಿದ್ದ ₹2.28 ಲಕ್ಷವನ್ನು ಚುನಾವಣಾ ಕಣ್ಗಾವಲು ತಂಡದವರು ವಶಪಡಿಸಿಕೊಂಡಿದ್ದಾರೆ.
ಹರಿಹರದಿಂದ ಹರಪನಹಳ್ಳಿ ಕಡೆಗೆ ಹೋಗುತ್ತಿದ್ದ ಮೋಟರ್ ಬೈಕ್ ಅನ್ನು ಚೆಕ್‌ಪೋಸ್ಟ್‌ನಲ್ಲಿ ನಿಲ್ಲಿಸಿ ತಪಾಸಣೆ ನಡೆಸಿದಾಗ ಬೈಕ್ ಸವಾರ ನಗರದ ಹೊಸ ಭರಂಪುರ ಬಡಾವಣೆಯ ಎ.ಬಿ. ರಾಚನಗೌಡ ಅವರ ಬಳಿ ಹಣ ಪತ್ತೆಯಾಗಿದೆ.
ಸದರಿ ಮೊತ್ತಕ್ಕೆ ದಾಖಲೆಗಳನ್ನು ಒದಗಿಸದೆ ಇದ್ದುದರಿಂದ ಕಣ್ಗಾವಲು ತಂಡದವರು ಹಣ ವಶಪಡಿಸಿಕೊಂಡಿದ್ದಾರೆ. ಫ್ಲೈಯಿಂಗ್ ಸ್ಕ್ವಾಡ್ ತಂಡದ ನಾಗರಾಜ ಡಿ.ಇ. ಸ್ಥಳಕ್ಕೆ ಬೇಟಿ ನೀಡಿದ್ದರು.