ಶಾಮನೂರು ಶಿವಶಂಕರಪ್ಪಗೆ ರಾಜಕೀಯ ಜೀವನೋತ್ಸಾಹ ಇನ್ನೂ ಕುಂದಿಲ್ಲ

Suddivijaya
Suddivijaya May 1, 2023
Updated 2023/05/01 at 1:44 PM

ಸುದ್ದಿವಿಜಯ, ಹಿರೇಕೋಗಲೂರು: ಶಾಸಕ ಶಾಮನೂರು ಶಿವಶಂಕರಪ್ಪಗೆ ವಯಸ್ಸು 92 ಆಗಿರಬಹುದು ಆದರೆ ಉತ್ಸಾಹ ಕುಂದಿಲ್ಲ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ, ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಜೆ.ಆರ್.ಷಣ್ಮುಖಪ್ಪ ಹೇಳಿದರು.

ಕುಕ್ಕುವಾಡದ ಸಕ್ಕರೆ ಕಾರ್ಖಾನೆಯಲ್ಲಿ ಸ್ವಸಹಾಯ ಸಂಘಗಳ ಬಹಿರಂಗ ಸಭೆಯಲ್ಲಿ ಮಹಿಳೆಯರ ಸಮಸ್ಯೆ ಆಲಿಸಿ ನಂತರ ಮಾತನಾಡಿ, ಎಲ್ಲರೂ ಶಾಮನೂರು ಶಿವಶಂಕರಪ್ಪಗೆ ವಯಸ್ಸಾಗಿದೆ ಎನ್ನುತ್ತಾರೆ. ಆದರೆ ಅವರು ಈಗಲೂ ಬೆಳಗ್ಗೆ ಎದ್ದು ಮತ ಪ್ರಚಾರಕ್ಕೆ ಹೋಗುತ್ತಾರೆ. ಈಗಾಗಲೇ 25 ವರ್ಷ ಆಡಳಿತ ನಡೆಸಿದ್ದಾರೆ. ಇದು ಅವರಿಗೆ 6 ನೇ ಚುನಾವಣೆಯಾಗಿದ್ದು, ಜನರ ಬಳಿ ಹೋಗುತ್ತಾರೆ.

ಅವರನ್ನು ಗೆಲ್ಲಿಸಲು ಇಡೀ ಕುಟುಂಬ ಓಡಾಟ ನಡೆಸಿದೆ. ಬಿಜೆಪಿ ಸರಕಾರ ಇದ್ದಾಗ ದಾವಣಗೆರೆ ಜನರಿಗೆ ವ್ಯಾಕ್ಸಿನ್ ನೀಡಲಿಲ್ಲ. ಈ ಸಂದರ್ಭದಲ್ಲಿ 6 ಕೋಟಿ ವೌಲ್ಯದ ವ್ಯಾಕ್ಸಿನ್ ನನ್ನು ಜನರಿಗೆ ಉಚಿತವಾಗಿ ನೀಡಿ ಜನರ ಜೀವ ಉಳಿಸಿದರು ಎಂದರು.

ಈಗಾಗಲೇ ಬಿಜೆಪಿ ಸರಕಾರ ನಮ್ಮ ನಂದಿನಿಯನ್ನು ಅಮೂಲ್‍ನಲ್ಲಿ ವಿಲೀನ ಮಾಡಲು ಹೊರಟಿದೆ. ನಮ್ಮ ರೈತರ ಶ್ರಮ ನಂದಿನಿ ಹಾಲಿನಲ್ಲಿದೆ. ಈಗಾಗಲೇ ಬ್ಯಾಂಕ್‍ನ್ನು ವಿಲೀನಗೊಳಿಸಿದ್ದ ಕಾರಣ ಸಾಕಷ್ಟು ಜನರು ನಿರುದ್ಯೋಗಿಗಳು ಆಗಿದ್ದಾರೆ. ಬರೋಡ ಬ್ಯಾಂಕ್‍ನ್ನು ರಾಜ್ಯಕ್ಕೆ ತರುವ ಮೂಲಕ ಮೊದಲ ಭಾಗವಾಗಿ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದ್ದರಿಂದ ಅಭಿವೃದ್ಧಿಗೆ ಮತ ನೀಡಿ ಎಂದು ಹೇಳಿದರು.

ಕುಕ್ಕುವಾಡದ ಎಂಡಿ ಎಸ್.ಎಸ್.ಗಣೇಶ್, ಪ್ರಣಾಳಿಕೆಯನ್ನು ಬಿಜೆಪಿ ಸರಕಾರ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ 10 ರೂ.ನೀಡಿದ್ರೆ, ಬಿಜೆಪಿ ಎಂಟಾಣಿ ನೀಡಿದೆ. ಮೂಲ ಸೌಕರ್ಯಗಳನ್ನು ಬಗೆಹರಿಸಲಾಗುವುದು. ಇನ್ನು ಸ್ವಸಹಾಯ ಸಂಘಗಳು ಸಾಲ ಪಡೆದು ಆರ್ಥಿಕವಾಗಿ ಸಭಲಗೊಳ್ಳಿಸಿ. ಆದರೆ ಬಡ್ಡಿಗೆ ಬಿಡಬೇಡಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಿಮ್ಮ ಸಮಸ್ಯೆಗಳಿಗೆ ಬ್ರೇಕ್ ಬೀಳಲಿದೆ ಎಂದರು.

ಶಾಮನೂರು ಸೊಸೆ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ನಾನು ನಮ್ಮ ಮಾವನರಿಗೆ 92 ವರ್ಷ ಆದರೆ ಅವರ ಅರ್ಧದಷ್ಟು ವಯಸ್ಸು ನನಾಗಿಲ್ಲ. ಅವರಿಗೆ ಅನುಭವ ಹೆಚ್ಚು, ಮನೆಗೆ ಬಂದವರ ಸಂಕಷ್ಟವನ್ನು ಈಗಲೂ ಕೇಳುತ್ತಾರೆ. ಕಷ್ಟ ಬಂದಾಗ ಅವರ ಸಮಸ್ಯೆ ಬಗೆಹರಿಸುತ್ತಾರೆ. ಹೆರಿಗೆ, ಡಯಾಲಿಸಿಸ್, ಕಣ್ಣಿನಪೆÇರೆ ತೆಗೆಸಿಕೊಳ್ಳುವ ಬಡವರಿಗೆ ಉಚಿತ ಚಿಕಿತ್ಸೆಯನ್ನು ಶಾಮನೂರು ಶಿವಶಂಕರಪ್ಪ ಮಾಡಿದ್ದಾರೆ ಎಂದರು.

ಎಸ್‍ಎಸ್ ಗಣೇಶ್ ಸೊಸೆ ಸ್ವಾತಿ ಮಾತನಾಡಿ, ನಾನು ಈ ಮನೆಗೆ ಬಂದು ಐದು ವರ್ಷವಾಯಿತು.ಶಾಮನೂರು ಶಿವಶಂಕರಪ್ಪ ಜಿಲ್ಲೆಯಲ್ಲಿ ಎಷ್ಟು ಕೆಲಸ ಮಾಡಿದ್ದಾರೆ ಎಂಬುದು ನಿಮಗೆಲ್ಲ ಗೊತ್ತಿದೆ. ಕ್ಷೇತ್ರ ಅಭಿವೃದ್ಧಿಗೆ ಅವರ ಕೊಡುಗೆ ಅನನ್ಯವಾಗಿದೆ.

ಅವರಿಗೆ ವಯಸ್ಸಾಗಿಲ್ಲ, ಈಗಲೂ ಚಿರ ಯುವಕನಂತೆ ಓಡಾಡುತ್ತಾರೆ. ಆದ್ದರಿಂದ ಉತ್ತರದಲ್ಲಿ ಎಸ್‍ಎಸ್ ಮಲ್ಲಿಕಾರ್ಜುನ್, ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಗೆಲ್ಲಿಸಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ರೇಖಾ ಗಣೇಶ್, ಅಭಿಜಿತ್, ಹದಡಿ ನಿಂಗಪ್ಪ, ಕುಕ್ಕುವಾಡ ಮಲ್ಲೇಶ್, ಬೇತೂರು ರಾಜಣ್ಣ ಇದ್ದರು. ಸುಮಾರು ಎಂಟನೂರುಕ್ಕೂ ಹೆಚ್ಚು ಸ್ವಸಹಾಯ ಸಂಘದ ಮಹಿಳೆಯರು ಇದ್ದರು. ಕಾಂಗ್ರೆಸ್‍ನಾಯಕಿ ಪ್ರಭಾ ಮಲ್ಲಿಕಾರ್ಜುನ್ ಮಹಿಳೆಯರ ಜತೆ ಕೆಲ ಕಾಲ ಸಂವಾದ ನಡೆಸಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!