ಮೂರ್ನಾಲ್ಕು ವರ್ಷಗಳಿಂದ ಸ್ಥಗಿತಗೊಂಡ ಆರ್ ಓ ಘಟಕ, ಸರ್ಕಾರದ ಲಕ್ಷಾಂತರ ರೂಗಳು ವ್ಯರ್ಥ

Suddivijaya
Suddivijaya April 22, 2023
Updated 2023/04/22 at 9:28 AM

Suddivijaya|Kannada News |22-04-2023

ಸುದ್ದಿವಿಜಯ ವಿಶೇಷ ಜಗಳೂರು.ಕುಡಿಯುವ ನೀರು ಪೂರೈಕೆಗಾಗಿ ಪಟ್ಟಣದ ವಿವಿಧ ಬಡಾವಣೆಯಲ್ಲಿ ನಿರ್ಮಿಸಿದ್ದ ಶುದ್ದಕುಡಿಯುವ ನೀರಿನ ಘಟಕಗಳು ಮೂರ‍್ನಾಲ್ಕು ವರ್ಷಗಳಿಂದ ಬಳಕೆಯಾಗದೇ ಸ್ಥಗಿತಗೊಂಡಿದ್ದು, ಲಕ್ಷಾಂತರ ಬೆಲೆಯ ಯಂತ್ರಗಳು ತುಕ್ಕು ಹಿಡಿಯುತ್ತಿವೆ.

ಪಟ್ಟಣ ಪಂಚಾಯಿತಿಯೂ 2013-14ನೇ ಸಾಲಿನಲ್ಲಿ ಸ್ಥಳಿಯ ಪ್ರದೇಶಾಭಿವೃದ್ದಿ ಯೋಜನೆಯಡಿ ತಲಾ 10 ಲಕ್ಷ ವೆಚ್ಚದಲ್ಲಿ ವಿದ್ಯಾನಗರದ ಉದ್ಯಾನವನ, ಮಂಜುನಾಥ ಬಡವಾಣೆಯ ಹಟ್ಟೇರ್ ಕಲ್ಯಾಣ ಮಂಟಪ ಸಮೀಪದ ಉದ್ಯಾನವನ, ಸರ್ಕಾರಿ ಪದವಿಪೂರ್ವ ಕಾಲೇಜು ಬಳಿ ಸೇರಿದಂತೆ ನಾಲ್ಕು ಕಡೆ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿತ್ತು. ಆದರೆ ಯಾವುದೊಂದು ಸರಿಯಾಗಿಲ್ಲ.

ಸದಾ ಫ್ಲೋರೈಡ್ ನೀರು ಕುಡಿದು ವಿವಿಧ ರೋಗಗಳಿಂದ ಬಳಲುತ್ತಿದ್ದ ಪಟ್ಟಣದ ನಿವಾಸಿಗಳಿಗೆ ಆರ್‌ಒ ಘಟಕ ನಿರ್ಮಾಣದಿಂದ ತುಸು ನೆಮ್ಮದಿ ತಂದಿತು. ಆದರೆ ಒಂದೆರಡು ವರ್ಷ ಚನ್ನಾಗಿ ನಡೆದ ಆರ್‌ಒ ಘಟಕಗಳು ನಿರ್ವಾಹಣೆಯ ಕೊರತೆಯಿಂದ ಒಂದೊಂದಾಗಿಯೇ ಸ್ಥಗಿತಗೊಂಡು ಅನಾಥವಾಗಿ ಬಿದ್ದಿವೆ.

ವಿದ್ಯಾನಗರದ ಆರ್‌ಒ ಘಟಕದಿಂದ ಅಂಗನವಾಡಿ ಕೇಂದ್ರದ ಮಕ್ಕಳಿಗೆ, ಜೆಸಿಆರ್ ಬಡಾವಣೆ, ವಿದ್ಯಾನಗರ, ಕ್ಯಾಂಪ್ ಜನರಿಗೆ ತುಂಬ ಅನುಕೂಲವಾಗಿತ್ತು. ಒಮ್ಮೆ ದುರಸ್ಥಿಗೊಂಡ ಯಂತ್ರವನ್ನು ಸರಿಪಡಿಸದೇ ಅಧಿಕಾರಿಗಳು ತೋರಿದ ಸಣ್ಣ ನಿರ್ಲಕ್ಷದಿಂದ ಇಂದು ಹಾಳುಬಿದ್ದಿದೆ. ಇದರಲ್ಲಿರುವ ಯಂತ್ರಗಳು ಕಣ್ಮರೆಯಾಗಿವೆ. ಕಿಡಿಗೇಡಿಗಳು ಕಿಟಕಿ ಗಾಜು, ಬಾಗಿಲು ಮುರಿದು ಹಾಕಿದ್ದಾರೆ. ಇನ್ನು ಮಂಜುನಾಥ ಬಡಾವಣೆಯ ಆರ್‌ಓ ಘಟಕ ಅದೇ ದಾರಿ ಹಿಡಿದಿದೆ. ಸರ್ಕಾರಿ ಪದವಿಪೂರ್ವ ಕಾಲೇಜು ಬಳಿಯಲ್ಲಿ ದೂಳು ತುಂಬಿಕೊಂಡು ಸುತ್ತಲು ಗಿಡಮರಗಳು ಬೆಳೆದಿದೆ, ಮುಂದೆ ಬೀದಿ ವ್ಯಾಪಾರಿಗಳು ಅಂಗಡಿ ಹಾಕಿಕೊಂಡಿರುವುದರಿಂದ ಅಲ್ಲಿರುವ ಆರ್‌ಒ ಘಟಕ ಯಾರ ಕಣ್ಣಿಗೆ ಕಾಣುತ್ತಿಲ್ಲ. 30ಲಕ್ಷಕ್ಕೂ ಅಧಿಕ ಅನುದಾನ ದುರುಪಯೋಗದಿಂದ ಸರ್ಕಾರದ ಹಣ ಪೋಲಾಗುತ್ತಿದೆ, ಈ ಬಗ್ಗೆ ಯಾವೊಬ್ಬ ಜನಪ್ರತಿನಿದಿಗಳು ಚಕಾರ ಎತ್ತುತ್ತಿಲ್ಲವೆಂದು ಸಾರ್ವಜನಿಕರ ಆರೋಪವಾಗಿದೆ.

ಪಟ್ಟಣದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬ ದೇವಿ ಜಾತ್ರೆ ಏಪ್ರಿಲ್ 25ರಿಂದ 28ರವರೆಗೂ ನಡಯಲಿದೆ. ಬೇಸಿಗೆಯ ಬಿಸಿಲು ಹೆಚ್ಚಾಗಿದೆ. ಈಗ ಕುಡಿಯುವ ನೀರು ತುಂಬ ಅವಶ್ಯಕವಾಗಿದೆ. ಆದರೆ ಒಂದು ಕಡೆಯೂ ಆರ್‌ಓ ಘಟಕಗಳಿಲ್ಲದೇ ಮೂಲೆ ಸೇರಿವೆ. ಜಾತ್ರೆ ಸಮಯದಲ್ಲಾದರೂ ದುರಸ್ಥಿಪಡಿಸಬಹುದಿತ್ತು. ಆದರೆ ಅಧಿಕಾರಿ ಮತ್ತು ಜನಪ್ರತಿನಿಗಳಿಂದ ತುಂಬ ನಿರ್ಲಕ್ಷ ತೋರಿದ್ದಾರೆ. ಶಾಂತಿ ಸಾಗರ ನೀರು ನಮಗೆ ಕನಸ್ಸಾಗಿದೆ. ಕುಡಿಯಲು ಶುದ್ದ ನೀರಿಲ್ಲದೇ ಖಾಸಗಿ ಆರ್‌ಒ ಘಟಕಗಳಲ್ಲಿ ಖರೀದಿಸಿ ನೀರು ಕುಡಿಯಬೇಕು, ಚುನಾವಣೆ ವೇಳೆ ಭರವಸೆ ನೀಡುವ ಚುನಾಯಿತರು ಗೆದ್ದ ಮೇಲೆ ಇತ್ತ ತಿರುಗಿ ನೋಡಿಲ್ಲ”

ಪ್ರಕಾಶ್, ನಿವಾಸಿಗಳು ಮಂಜುನಾಥ ಬಡಾವಣೆ

ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ಆರ್‌ಒ ಘಟಕಗಳ ನಿರ್ವಹಣೆ ಮಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆರ್‌ಒ ಘಟಕಗಳನ್ನು ದುರಸ್ಥಿಪಡಿಸುವಂತೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ, ಇದರಿಂದ ಪಟ್ಟಣದಲ್ಲಿ ಖಾಸಗಿ ಆರ್‌ಒ ಘಟಕಗಳ ಹಾವಳಿ ಹೆಚ್ಚಾಗಿದ್ದು ಅವರು ಹೇಳುವಷ್ಟು ಬೆಲೆಕೊಟ್ಟು ನೀರು ಖರೀದಿ ಮಾಡುವಂತ ಸ್ಥಿತಿ ಇದೆ. ಕ್ಷೇತ್ರದ ಶಾಸಕರು ಇವುಗಳಿಗೆ ಹೆಚ್ಚು ಗಮನಕೊಟ್ಟಿಲ್ಲ”

ಕರಿಬಸಪ್ಪ, ನಿವಾಸಿ

ಪಟ್ಟಣದ ಜಾತ್ರೆ ಇರುವುದರಿಂದ ಕುಡಿಯುವ ನೀರಿಗಾಗಿ ವ್ಯವಸ್ಥೆ ಮಾಡಲಾಗುವುದು, ದುಸ್ಥಿತಿಯಲ್ಲಿರುವ ಆರ್‌ಒ ಘಟಕಗಳು ಸದಸ್ಯಕ್ಕೆ ಸರಿಪಡಿಸಲಾಗುವುದಿಲ್ಲ. ಚುನಾವಣೆ ಮುಗಿದ ನಂತರ ಸಭೆಯಲ್ಲಿ ಚರ್ಚಿಸಿ ಟೆಂಡರ್ ಕರೆದ ದುರಸ್ಥಿಪಡಿಸಲು ಕ್ರಮಕೈಗೊಳ್ಳ¯ಗುವುದು.”

ಲೋಕ್ಯನಾಯ್ಕ. ಮುಖ್ಯಾಧಿಕಾರಿ ಪ.ಪಂ

 

 

.

Share this Article
Leave a comment

Leave a Reply

Your email address will not be published. Required fields are marked *

error: Content is protected !!