ಸುದ್ದಿವಿಜಯ,ಜಗಳೂರು: ತಾಲೂಕಿನ ಚಿಕ್ಕಅರಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಸವನಗೌಡ ಹಾಗೂ ಉಪಾಧ್ಯಕ್ಷರಾಗಿ ಕೆ. ಪರಮೇಶ್ವರ ನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಜಿ.ಎಸ್.ಸುರೇಂದ್ರ ಶುಕ್ರವಾರ ಘೋಷಿಸಿದರು.
ಸಂದರ್ಭದಲ್ಲಿ ಡಿ.ಎಸ್. ಬಸವನಗೌಡ, ಬಿ.ಎಂ.ಚನ್ನಬಸಪ್ಪ, ಸಿ.ಜಿ. ಪ್ರಕಾಶ್, ಜಿ.ಬಿ.ನಾಗನಗೌಡ,ಕೆ.ಜಿ. ಚನ್ನನಗೌಡ, ಕೆ.ಸಿ. ಶೋಭಾ, ಜಿ.ಬಿ.ಸುವರ್ಣಮ್ಮ, ಬಿ.ಕಲ್ಲೇಶ್ವರಪ್ಪ, ಆರ್.ತಿಪ್ಪೇಸ್ವಾಮಿ, ಕೆ.ಪರಮೇಶ್ವರ ನಾಯ್ಕ್, ಪಿ.ಎಚ್.ಚಂದ್ರಪ್ಪ, ಕೆ.ಸುರೇಶ್ ಆಯ್ಕೆಯಾಗಿರುತ್ತಾರೆ ಎಂದು ತಿಳಿಸಿದರು. ಈವೇಳೆ ವಿಎಸ್‍ಎಸ್‍ಎನ್ ಕಾರ್ಯದರ್ಶಿ ಪರಮೇಶ್ವರಪ್ಪ,ಸಿಬ್ಬಂದಿ ಕರಿಬಸಪ್ಪ ಸೇರಿ ಅನೇಕರು ಇದ್ದರು.