ಸುದ್ದಿವಿಜಯ, ಜಗಳೂರು: ಚಿತ್ರದುರ್ಗ ನಗರದ ಸರಕಾರಿ ವಿಜ್ಞಾನ ಕಾಲೇಜ್ ಆವರಣದಲ್ಲಿ ಡಿ.18 ರಂದು ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಛಲವಾದಿ ಸಮಾದ ಗೌರವಾಧ್ಯಕ್ಷ ಸಿ. ಲಕ್ಷ್ಮಣ ಮನವಿ ಮಾಡಿದರು.
ಪಟ್ಟಣ ಪತ್ರಿಭಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸರಕಾರದಿಂದ ವೀರ ವನಿತೆ ಒನಕೆ ಓಬವ್ವ ಜಯಂತೋತ್ಸವ ಆಚರಿಸಲಾಗುತ್ತಿದೆ. ಸಮಾಜದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ. ಅಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅವರೊಂದಿಗೆ ಸಂಪುಟದ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಸೇರಿದಂತೆ ಸಮಾಜದ ಮಠಾದೀಶರು, ವಿವಿಧ ಪಕ್ಷಗಳಿಂದ ಚುನಾಯಿತರಾದ ಛಲವಾದಿ ಸಮಾದ ರಾಜಕಾರಣಿಗಳು ನಾಯಕರು ಭಾಗವಹಿಸಲಿದ್ದಾರೆ. ಆದ್ದರಿಂದ ಜಗಳೂರು ತಾಲೂಕಿನ ಛಲವಾದಿ ಸಮಾಜ ಹಾಗು ಸಹೋದರ ಸಮಾಜಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದರು.
ಎಚ್.ಬಿ.ನಿಜಲಿಂಗಪ್ಪ ಮಾತನಾಡಿ, ರಾಜ್ಯದ ವೀರ ವನಿತೆ ಒನಕೆ ಓಬವ್ವ ಅವರ ಶೌರ್ಯ ತ್ಯಾಗ ಬಲಿದಾನ ಇತಿಹಾಸ ಪುಟದಲ್ಲಿ ಸೇರಿದೆ ಅಂತಹ ಮಹಾನ್ ಚೇತನಾ ನಮ್ಮ ಸಮಾಜದವರು ಎಂಬ ಹೆಮ್ಮೆ ಇದೆ ಈ ನಿಟ್ಟಿನಲ್ಲಿ ರಾಜ್ಯ ಮಟ್ಟದ ವೀರ ವನಿತೆ ಒನಕೆ ಓಬವ್ವ ಜಯಂತೋತ್ಸವ ವನ್ನ ಮಧ್ಯ ಕರ್ನಾಟಕ ಭಾಗವಾದ ಚಿತ್ರದುರ್ಗದಲ್ಲಿ ಆಯೋಜಿಸಿದ್ದು ತಾಲ್ಲೂಕಿನಿಂದ 10 ಬಸ್ ಗಳಲ್ಲಿ ಸಮಾಜದ ಬಂದುಗಳು ತೆರಳಿದ್ದಾರೆ ಎಲ್ಲರೂ ಆಗಬೇಕು ಎಂದು ಮನವಿ ಮಾಡಿದರು.
ಈ ವೇಳೆ ಛಲವಾದಿ ಸಮುದಾಯದ ಮುಖಂಡ ಧನ್ಯಕುಮಾರ್, ಜಿಲ್ಲಾ ಉಪಾಧ್ಯಕ್ಷರು ಕೆ.ಟಿ.ವೀರಸ್ವಾಮಿ, ಬರಮಸಮುದ್ರ ಕುಮಾರ್ ಮತ್ತಿತರರು ಇದ್ದರು.