ಸುದ್ದಿವಿಜಯ, ಜಗಳೂರು: ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಕೇಂದ್ರದಲ್ಲಿ ಓಬಿಸಿ ಹಾಗೂ ರಾಜ್ಯದಲ್ಲಿ ಪಂಚಾಮ ಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಹರಿಹರದಲ್ಲಿ ನಡೆಯುವ ಬೃಹತ್ ಜನ ಜಾಗೃತಿ ಸಮಾವೇಶಕ್ಕೆ ತಾಲೂಕಿನಿಂದ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ತಾಲೂಕು ವೀರಶೈವ ಲಿಂಗಾಯಿತ ಪಂಚಾಮಸಾಲಿ ಸಮುದಾಯದ ತಾಲೂಕು ಅಧ್ಯಕ್ಷ ಎನ್.ಸಿ. ಅಜ್ಜಯ್ಯ ನಾಡಿಗಾರ್ ಕರೆನೀಡಿದರು.
ಗುರುವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಭಾರಿ ಹರ ಜಾತ್ರೆಯಲ್ಲಿ ಕುಂಭ ಮೇಳವಿರುವುದಿಲ್ಲ. ರಾಜ್ಯದ ಪ್ರತಿ ತಾಲೂಕಿನಿಂದ 10 ಸಾವಿರ ರೋಟ್ಟಿ ಮತ್ತು ಅನ್ನದ ಬುತ್ತಿಯನ್ನು ತೆಗೆದು ಕೊಂಡು ಹೋಗಲಾವುದು ಎಂದರು.
ಸಮುದಾಯಕ್ಕ ಸಮುದಾಯ ಭವನ ನಿರ್ಮಿಸಲಿಕ್ಕೆ ಶಾಸಕ ಎಸ್.ವಿ. ರಾಮಚಂದ್ರ ಈ ಗಾಗಲೇ ನಿವೇಶನ ನೀಡಿದ್ದಾರೆ. ಜೊತೆಗೆ ಮಠದಲ್ಲಿ ನಡೆಯುವ ನಿತ್ಯ ದಾಸೋಹಕ್ಕೆ ನಿಧಿಗೆ ಶಾಸಕರು 1ಲಕ್ಷ ರೂ ದೇಣಿಗೆ ನೀಡಿದ್ದಾರೆ.

ಮಾಜಿ ಶಾಸಕ ಎಚ್.ಪಿ. ರಾಜೇಶ್, ಕಿತ್ತೂರು ಜಯ್ಯಣ್ಣ, ದೇವೆಂದ್ರಪ್ಪ, ಅಜ್ಜಯ್ಯನಾಡಿಗಾರ್, ಸಿದ್ದೇಶ್, ಕಲ್ಲೇಶಪ್ಪ, ವೀರೇಶ್ , ಹೆಚ್. ನಾಗರಾಜ್ , ರೇವಣ್ಣ ಸಿದ್ದಪ್ಪ ತಲಾ ಒಂದು ಲಕ್ಷ ಹಣ ನೀಡಲಾಗಿದೆ. ರಾಜ್ಯದ್ಯಾಂತ 68 ಜನ ದೇಣಿಗೆ ನೀಡಿದ್ದಾರೆ ಎಂದರು.
ಜ.14,15 ರಂದು ಹರಿಹರದ ಮಠದಲ್ಲಿ ನಡೆಯಲಿದ್ದು ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ, ಹಾಲಿ ಮತ್ತು ಮಾಜಿ ಸಚಿವರು, ಶಾಸಕರು ಕಾರ್ಯಕ್ರಮಕ್ಕೆ ಆಗಮಿಸುವರು. ಜೊತೆಗೆ ರಾಜ್ಯದ ವಿವಿಧ ಮಠಗಳ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ವಾಣಿ, ಹೊಸಕೆರೆ ರಾಜಣ್ಣ, ವಿರೇಶ, ರಾಜಣ್ಣ, ಮುಕುಂದ, ಗಡಿಮಾಕುಂಟೆ ಸಿದ್ದೇಶ್, ಗೌರಮ್ಮ, ಶೋಭಾ, ಸರಿತಾ, ನೇತ್ರವತಿ, ರಾಜಮ್ಮ, ಪಾರ್ವತಿ, ನಾಗರತ್ನ, ಜ್ಯೋತಿ, ಮಂಗಳಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.