ಜಗಳೂರು ಪಟ್ಟಣದ 40 ಕಡೆ ಸಿಸಿಟಿವಿ ಅಳವಡಿಕೆ, ಹೇಗಿದೆ ಗೊತ್ತಾ ಪೊಲೀಸ್ ಪ್ಲಾನ್!

Suddivijaya
Suddivijaya October 23, 2022
Updated 2022/10/23 at 1:21 PM

ಸುದ್ದಿವಿಜಯ,ಜಗಳೂರು: ಪಟ್ಟಣದಲ್ಲಿ 40 ಕಡೆ ಸಿಸಿಟಿವಿ ಅಳವಡಿಕೆಗೆ ಶಾಸಕ ಎಸ್.ವಿ.ರಾಮಚಂದ್ರ ನೇತೃತ್ವದಲ್ಲಿ ಭಾನುವಾರ ಸಭೆ ನಡೆಯಿತು. ಇತ್ತೀಚೆಗೆ ಪಟ್ಟಣದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಎಚ್ಚೆತ್ತ ಪೊಲೀಸ್ ಇಲಾಖೆ ಪಟ್ಟಣದ 40 ಕಡೆಗಳಲ್ಲಿ ಸುಧಾರಿತ ಸಿಸಿಟಿವಿಗಳನ್ನು ಅಳವಡಿಸಲು ನಿರ್ಧಾರ ಮಾಡಿದೆ.

ಹೀಗಾಗಿ ಶಾಸಕ ಎಸ್.ವಿ.ರಾಮಚಂದ್ರ ಅವರೊಂದಿಗೆ ತಾಲೂಕು ಕಚೇರಿಯಲ್ಲಿ ಸಭೆ ನಡೆಯಿತು. ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಪಿಎಸ್‍ಐ ಮಹೇಶ್ ಹೊಸಪೇಟ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಿಬ್ಬಂದಿ ಅಂಬರೀಷ್ ಅವರೊಂದಿಗೆ ಶಾಸಕರು ಚರ್ಚೆ ನಡೆಸಿದರು.

ಎಟಿಎಂ ಕಳ್ಳತನ, ಬೈಕ್ ಕಳ್ಳತನ, ಅಪಘಾತ ಪ್ರಕರಣಗಳು, ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ತಾಂತ್ರಿಕವಾಗಿ ಅಪರಾಧಿಗಳನ್ನು ಪತ್ತೆ ಹಚ್ಚಲು ಮತ್ತು ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಎಸ್‍ಪಿ ಸಿ.ಬಿ.ರಿಷ್ಯಂತ್ ಹಾಗೂ ಐಪಿಎಸ್ ಅಧಿಕಾರಿ ಕನ್ನಿಕಾ ಸಿಕ್ರಿವಾಲ್ ಅವರು ಇಲಾಖೆ ವತಿಯಿಂದ 40 ಕಡೆ ಸುಧಾರಿತ ಸಿಸಿಟಿವಿಗಳನ್ನು ಅಳವಿಡಿಸಲು ಮುಂದಾಗಿದ್ದಾರೆ.

ಎಲ್ಲೆಲ್ಲಿ ಸಿಸಿಟಿವಿ ಅಳವಡಿಕೆ:
ಖಾಸಗಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣದ ತಿರುವು ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್, ತಾಲೂಕು ಕಚೇರಿ, ಮಹಾತ್ಮಾ ಗಾಂಧಿ ವೃತ್ತ, ಚಳ್ಳಕೆರೆ-ಕೊಟ್ಟೂರು ವಿಭಜಕ ರಸ್ತೆ, ಸರಕಾರಿ ಆಸ್ಪತ್ರೆ, ಚಳ್ಳಕೆರೆ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ, ಜಗಳೂರು ಕೆರೆ ರಸ್ತೆ, ರಾಮಾಲಯ ರಸ್ತೆ, ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣ, ವೈಭವ ಹೋಟೆಲ್ ಹತ್ತಿರ, ಮರೇನಹಳ್ಳಿ ರಸ್ತೆ, ಗೊಲ್ಲರಹಟ್ಟಿ ರಸ್ತೆ, ಉಸ್ಮಾನಿಯಾ ಮಸೀದಿ ಹತ್ತಿರ, ರಾಜೇಂದ್ರ ಪ್ರಸಾದ್ ರಸ್ತೆ, ಜೀವಜಲ ಚರ್ಚ್ ಹತ್ತಿರ, ನಲಂದಾ ಕಾಲೇಜು, ದಾವಣಗೆರೆ ರಸ್ತೆ, ವಿದ್ಯಾನಗರ ಪಾರ್ಕ್ ಜಂಕ್ಷನ್, ಮಹಾತ್ಮಾ ಗಾಂಧಿ ವೃತ್ತ, ರಂಗಮಂದಿರ ಹತ್ತಿರ, ವಾಲ್ಮೀಕಿ ಸಮುದಾಯ ಭವನದ ಹತ್ತಿರ, ತಾಲೂಕು ಕ್ರೀಡಾಂಗಣ, ದೊಣೆಹಳ್ಳಿ ಕ್ರಾಸ್ ಮತ್ತು ಕಾನನಕಟ್ಟೆ ಟೋಲ್ ಸೇರಿದಂತೆ ವಿವಿಧ 40 ಕಡೆ ಸಿಸಿಟಿವಿ ಅಳವಡಿಸಲು ಪೊಲೀಸ್ ಇಲಾಖೆ ಜಾಗಗಳನ್ನು ಗುರುತು ಮಾಡಿದೆ.

 

ಇತ್ತೀಚೆಗೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸಿಸಿಟಿವಿ ಕಣ್ಗಾವಲಿನಲ್ಲಿ ಅಪರಾಧ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದೇವೆ. ಜನರ ಸುರಕ್ಷತೆ ದೃಷ್ಟಿಯಲ್ಲಿ ನಗರವನ್ನು ಸುರಕ್ಷತವಾಗಿಡುವುದು ನಮ್ಮ ಉದ್ದೇಶವಾಗಿದೆ. ಎರಡು ಟ್ರಾಫಿಕ್ ಸಿಗ್ನಲ್‍ಗಳ ಅವಶ್ಯಕತೆಯಿದ್ದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದಷ್ಟು ಬೇಗ ಅಳವಡಿಸಲಾಗುವುದು.

-ಎಸ್.ವಿ.ರಾಮಚಂದ್ರ, ಶಾಸಕರು, ಜಗಳೂರು
 

ಪಟ್ಟಣದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು ಅವುಗಳನ್ನು ನಿಯಂತ್ರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ 40 ಸಿಸಿಟಿವಿ ಕ್ಯಾಮರಾಗಳನ್ನು ಅಳವಿಡಿಸಲು ಎಸ್‍ಪಿ ಸಿ.ಬಿ.ರಿಷ್ಯಂತ್ ಅವರು ಸೂಚನೆ ನೀಡಿದ್ದು ಶೀಘ್ರವೇ ಕ್ಯಾಮಾರ ಅಳವಡಿಸುತ್ತೇವೆ.

-ಕನ್ನಿಕಾಸಿಕ್ರಿವಾಲ್, ಐಪಿಎಸ್ ಅಧಿಕಾರಿ, ಜಗಳೂರು

Share this Article
Leave a comment

Leave a Reply

Your email address will not be published. Required fields are marked *

error: Content is protected !!