ಸುದ್ದಿವಿಜಯ, ಜಗಳೂರು: ಕೂಲಿಕಾರರನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿಯಾಗಿ 9ಕ್ಕೂ ಹೆಚ್ಚು ಮಹಿಳೆಯರು ಗಾಯಗೊಂಡಿರುವ ಘಟನೆ ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದ ಸಮೀಪ ಮಂಗಳವಾರ ನಡೆದಿದೆ.
ಕೂಲಿಕಾರರು ಅಣಬೂರು ಗ್ರಾಮದವರಾಗಿದ್ದು, ಚಿತ್ರದುರ್ಗ ತಾಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಆಟೋದಲ್ಲಿ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬೆಣ್ಣೆಹಳ್ಳಿ ಸಮೀಪ ಅಡ್ಡವಾಗಿ ಬಂದ ಕಾರನ್ನು ತಪ್ಪಿಸಲು ಮುಂದಾಟ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಬಿದ್ದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಶಿಲ್ಪಾ, ಕೆಂಚಮ್ಮ, ರೇಣುಕಮ್ಮ, ಸಾಕಮ್ಮ, ಶೋಭಾ ಇವರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ. ಭಾಗ್ಯಮ್ಮ, ಮಾರಮ್ಮ, ಕಮಲಮ್ಮ, ನಿರ್ಮಲ ಇವರಿಗೆ ಸಣ್ಣ,ಪುಟ್ಟ ಗಾಯಗಳಾಗಿದ್ದು ಜಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.