ಸುದ್ದಿವಿಜಯ, ಜಗಳೂರು: ಸರಕಾರದ ಆದೇಶದಂತೆ ಆರಾಧನಾ ಯೋಜನೆಗಳ ಅನುಷ್ಠಾನಕ್ಕಾಗಿ ಶಾಸಕರ ಅಧ್ಯಕ್ಷತೆಯಲ್ಲಿ ಆರಾಧನಾ ಸಮಿತಿ ರಚನೆಗೆ ಅವಕಾಶ ಕಲ್ಪಿಸಲಾಗಿದ್ದು, ಅದರಂತೆ ಜಗಳೂರು ವಿಧಾನಸಭಾ ಕ್ಷೇತ್ರದ ಅಧಿಕಾರ ಮತ್ತು ಅಧಿಕಾರೇತ ಸದಸ್ಯರುಗಳನ್ನೊಳಗೊಂಡ ಆರಾಧನಾ ಸಮಿತಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸಲಾಗಿದೆ.
ಸಮಿತಿ ಅಧ್ಯಕ್ಷರಾಗಿ ಶಾಸಕ ಬಿ.ದೇವೇಂದ್ರಪ್ಪ, ಸದಸ್ಯರಾಗಿ ದಾವಣಗೆರೆ ಜಿಪಂ ಎಇಇ, ತಾಪಂ ಎಇ, ಜಗಳೂರು ತಹಶೀಲ್ದಾರ್ ಅಧಿಕಾರ ಸದಸ್ಯರಾಗಿದ್ದಾರೆ.ಅಧಿಕಾರೇತರ ಸದಸ್ಯರಾಗಿ ಸಾಮಾನ್ಯ ವರ್ಗದಿಂದ ತಾಲೂಕಿನ ಕೊರಟಿಕೆರೆ ಗ್ರಾಮದ ಕೆ.ಗುರುಸಿದ್ದನಗೌಡ, ಮಹಿಳಾ ಕ್ಷೇತ್ರದಿಂದ ಕಲ್ಲೇದೇವರಪುರ ಗ್ರಾಮದ ವಜ್ರಕುಮಾರಿ,
ಪರಿಶಿಷ್ಟ ಜಾತಿ ಸದಸ್ಯರಾಗಿ ದೊಣೆಹಳ್ಳಿ ಗ್ರಾಮದ ಆರ್. ಬಸವರಾಜ್ ಮತ್ತು ಪರಿಶಿಷ್ಟ ಪಂಗಡಗಳ ಸದಸ್ಯರಾಗಿ ಗುರುಸಿದ್ದಾಪುರ ಗ್ರಾಮದ ಗಿರೀಶ್ ಅವರನ್ನು ನೇಮಿಸಿಸರಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ ಮತ್ತು ಧಾರ್ಮಿಕ ಇಲಾಖೆಯ ಕೆ.ಪಿ.ಹೇಮಂತರಾಜು ಆದೇಶಿಸಿದ್ದಾರೆ. ಈ ಸಮಿತಿಯು ಐದು ವರ್ಷಗಳವರೆಗೆ ಅಸ್ಥಿತ್ವದಲ್ಲಿರುತ್ತದೆ.