ಹೊಲಕ್ಕೆ ರೇಷ್ಮೆ ಸೊಪ್ಪು ತರಲು ಹೋದ ರೈತನ ಮೇಲೆ ಕರಡಿ ಭೀಕರ ದಾಳಿ..!

Suddivijaya
Suddivijaya June 24, 2022
Updated 2022/06/24 at 12:43 PM

ಸುದ್ದಿವಿಜಯ, ಜಗಳೂರು:ಹೊಲಕ್ಕೆ ರೇಷ್ಮೆ ಸೊಪ್ಪು ತರಲು ಹೋಗಿದ್ದ ವ್ಯಕ್ತಿಯ ಮೇಲೆ ಶುಕ್ರವಾರ ಕರಡಿ ದಾಳಿ ಮಾಡಿದೆ. ತಾಲೂಕಿನ ಅಣಬೂರು ಗ್ರಾಮದ ಮಳ್ಳಪ್ಪ(24)ಗಂಭೀರ ಗಾಯಗೊಂಡಿದ್ದಾರೆ.

ಶುಕ್ರವಾರ ಬೆಳಿಗ್ಗೆ 8.30ರ ಸುಮಾರಿಗೆ ರೇಷ್ಮೆ ಹೊಲದಲ್ಲಿ ಮಲಗ್ಗಿದ್ದ ಕರಡಿ ಏಕಾಏಕಿ ರೈತನ ಮೈಲೆ ಎಗರಿದೆ. ಕರಡಿಯ ದಾಳಿಯಿಂದ ಮಳ್ಳಪ್ಪನ ತಲೆಯ ಭಾಗಕ್ಕೆ ತೀವ್ರ ಹಾನಿಯಾಗಿದೆ.

ಭುಜ ಮತ್ತು ಮೈಯಲ್ಲಿ ಪರಚಿದ ಗಂಭೀರ ಗಾಯಗಳಾಗಿವೆ. ಕರಡಿ ದಾಳಿಯಿಂದ ಚೀರಾಟದ ದೃಶ್ಯ ಕಂಡು ಗ್ರಾಮಸ್ಥರು ದೊಣ್ಣೆ, ಕಟ್ಟಿಗೆ ತರುತ್ತಿದ್ದಂತೆ ಕರಡಿ ಪರಾರಿಯಾಗಿದೆ.

ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆ ವ್ಯಕ್ತಿಯನ್ನು ತಕ್ಷಣ ಸ್ಥಳೀಯರು ಜಗಳೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!