ಜಗಳೂರು: ಮಕ್ಕಳಿಗೆ ಹಾಲು ಕುಡಿಸಿ ಮಾನವ ಬಂಧುತ್ವ ವೇದಿಕೆಯಿಂದ ವಿಭಿನ್ನವಾಗಿ ಬಸವ ಪಂಚಮಿ ಆಚರಣೆ

Suddivijaya
Suddivijaya August 21, 2023
Updated 2023/08/21 at 12:08 PM

ಸುದ್ದಿವಿಜಯ, ಜಗಳೂರು: ಸಮಾಜದಲ್ಲಿ ಮೂಢ ನಂಬಿಕೆಗಳು ತೊಲಗಬೇಕು ಮತ್ತು ವೈಜ್ಞಾನಿಕ ಚಿಂತನೆಗಳು ಜನರಲ್ಲಿ ಮೂಡಿಸಬೇಕಾದರೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾಂಪ್ರದಾಯಿಕ ಆಚರಣೆಗಳಲ್ಲಿ ವೈಜ್ಞಾನಿಕ ಆಲೋಚನೆಗಳನ್ನ ಅಳವಡಿಸಿಕೊಳ್ಳುವ ಮೂಲಕ ಮೂಡನಂಭಿಕೆಗಳನ್ನ ಸಾಧ್ಯವಾದಷ್ಟು ದೂರ ತಳ್ಳಬೇಕಿದೆ ಎಂದು ಕೆಪಿಸಿಸಿ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಹೇಳಿದರು.

ಪಟ್ಟಣದ ಲಕ್ಷ್ಮಮ್ಮ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಸೋಮವಾರ ನಾಗರಪಂಚಮಿಯನ್ನು ಬಸವ ಪಂಚಮಿ ಎಂದು ಆಚರಿಸಿ ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ವಿಶೇಷವಾಗಿ ಆಚರಣೆ ಮಾಡಿದರು.

ನಾಗರ ಪಂಚಮಿ ಹಬ್ಬವು ಶ್ರಾವಣ ಮಾಸದಲ್ಲಿ ಆಚರಿಸುತ್ತೇವೆ. ಹಬ್ಬದ ನೆಪದಲ್ಲಿ ಪೌಷ್ಠಿಕ ಅಹಾರವಾದ ಹಾಲು ತುಪ್ಪ ಮೊಸರು ಹಾಗು ಎಳ್ಳುಂಡೆ ಯಂತಹ ಅಮೂಲ್ಯ ಪದಾರ್ಥಗಳನ್ನ ನೈವೇದ್ಯೆ ಹೆಸರಿನಲ್ಲಿ ಪೋಲು ಮಾಡುವ ಬದಲು ಹಸಿವಿನಿಂದ ಅಥವಾ ಅಪೌಷ್ಠಿಕತೆಯಿಂದ ಬಳಲುವಂತಹ ಮಕ್ಕಳಿಗೆ ನೀಡುವ ಮೂಲಕ ಹಬ್ಬವನ್ನ ಸಾರ್ಥಕತೆ ಗೊಳಿಸಬೇಕು ಎಂದರು.

 ಜಗಳೂರು ಪಟ್ಟಣದ ಲಕ್ಷ್ಮಮ್ಮ ಸರಕಾರಿ ಶಾಲೆಯಲ್ಲಿ ಬಸವ ಪಂಚಮಿ ಆಚರಿಸಲಾಯಿತು.
 ಜಗಳೂರು ಪಟ್ಟಣದ ಲಕ್ಷ್ಮಮ್ಮ ಸರಕಾರಿ ಶಾಲೆಯಲ್ಲಿ ಬಸವ ಪಂಚಮಿ ಆಚರಿಸಲಾಯಿತು.

ವೈಜ್ಞಾನಿಕವಾಗಿ ಹಾವು ಹಾಲು ಕುಡಿಯುವುದಿಲ್ಲ ಕುಡಿದರೆ ಸಾವನ್ನಪ್ಪುತ್ತದೆ. ಹಾವು ಮಾಂಸಹಾರಿ ಅದಕ್ಕಾಗಿ ವಿನಾಕಾರಣ ಹಾವಿಗೆ ಹಾಲೆರೆಯಬದಲು ಮಕ್ಕಳಿಗೆ ನೀಡಿ ಎಂದು ನಿಮ್ನ ಪೋಷಕರಿಗೆ ತಿಳಿಸಿ ಎಂದು ಮಕ್ಕಳಿಗೆ ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಸವರಾಜ್ ಮಾತನಾಡಿ, ಮಾನವ ಬಂದುತ್ವ ವೇದಿಕೆ ಅಡಿಯಲ್ಲಿ ಸಂಸ್ಥಾಪಕರಾದ ಸತೀಶ್ ಜಾರಕಿಹೊಳೆ ಅವರು ಬುದ್ದ ಬಸವಣ್ಣ ಅಂಬೇಡ್ಕರ್ ವಿಚಾರದಾರೆಗಳು ಜೊತೆಗೆ ಮೂಡನಂಬಿಕೆ ಕಂದಾಚಾರಗಳ ಆಚರಣೆಗಳ ವಿರುದ್ದ ಜಾಗೃತಿ ಮೂಡಿಸುತ್ತ ಬಂದಿದ್ದಾರೆ. ಜನರು ಜಾಗೃತಿಗೊಂಡು ವೈಚಾರಿಕತೆ ಪ್ರಜ್ಞೆ ಬೆಳಿಸಿಕೊಳ್ಳಬೇಕು ಎಂದರು

ಗ್ರಾ.ಪಂ.ಮಾಜಿ ಉಪಾಧ್ಯಕ ಎಂ.ಎಸ್.ನಜೀರ್ ಅಹಮದ್ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ಕಳೆದ ಏಳು ವರ್ಷಗಳಿಂದ ಬಸವ ಪಂಚಮಿ ಆಚರಿಸಿಕೊಂಡು ಬರುತ್ತಿದ್ದೇವೆ ಶಾಲಾ ಮಕ್ಕಳು ಅಂಗನವಾಡಿ ಮಕ್ಕಳು ಹಾಗು ಸಾರ್ವಜನಿಕ ಸ್ಥಳಗಳಲ್ಲಿ ಬಸವ ಪಂಚಮಿ ಆಚರಿಸುತ್ತೇವೆ.ಈ ವರ್ಷವೂ ಸಹ ಶ್ರಾವಣ ಮಾಸ ತಿಂಗಳು ಪೂರ್ತಿ ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು.

 ಜಗಳೂರು ಪಟ್ಟಣದ ಲಕ್ಷ್ಮಮ್ಮ ಸರಕಾರಿ ಶಾಲೆಯಲ್ಲಿ ಬಸವ ಪಂಚಮಿ ಆಚರಿಸಲಾಯಿತು.
 ಜಗಳೂರು ಪಟ್ಟಣದ ಲಕ್ಷ್ಮಮ್ಮ ಸರಕಾರಿ ಶಾಲೆಯಲ್ಲಿ ಬಸವ ಪಂಚಮಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರು ಪರಮೇಶ್ವರಪ್ಪ, ಶಿಕ್ಷಕರಾದ ಪ್ರಕಾಶ್, ಶಶಿಕಲಾ, ಕೃಷ್ಣಪ್ಪ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಟಿ.ಬಡಯ್ಯ, ನಿವೃತ್ತ ನೌಕರ ಮಹಬೂಬು ಆಲಿ ಮಾನವ ಬಂದುತ್ವ ವೇದಿಕೆ ಜಿಲ್ಲಾ ಮುಖಂಡ ಧನ್ಯಕುಮಾರ್, ತಾಲೂಕು ಸಂಚಾಲಕ ಗೋಗುದ್ದು ತಿಪ್ಪೇಸ್ವಾಮಿ,

ಡಿ.ಎಸ್.ಎಸ್. ಸಂಚಾಲಕ ಸತೀಶ್, ವಕೀಲರಾದ ಮರೇನಹಳ್ಳಿ ತಿಪ್ಪೇಸ್ವಾಮಿ, ಸಿ.ಎಂ.ಹೊಳೆ ತಿಪ್ಪೇಸ್ವಾಮಿ, ನಾಗೇಶ್, ಮುಖಂಡರಾದ ಓಬಳೇಶ್, ಗೊಲ್ಲರಹಟ್ಟಿ ರಮೇಶ್, ಅನ್ವರ್ ಆಲಿ, ದಾನಿ ಸಾಬ್ ಸೇರಿದಂತೆ ಹಲವರು ಇದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!