ಸುದ್ದಿವಿಜಯ,ಜಗಳೂರು: ದೇಶದ ಅಭಿವೃದ್ಧಿಗೆ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣವನ್ನು ಹೆಚ್ಚಿಸುವ, ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಹೆಲ್ಪ್ 100 ಟ್ರಸ್ಟ್ ಸ್ಥಾಪಿಸಿದ್ದು, ಈ ನಿಟ್ಟಿನಲ್ಲಿ ನಮ್ಮ ಕೈಲಾದಷ್ಟು ನೆರವನ್ನು ನೀಡಲಾಗುತ್ತಿದೆ ಎಂದು ಹೆಲ್ಪ್ 100 ನ ಸ್ಥಾಪಕರಾದ ಸುಜಯ್ ಅವರು ತಿಳಿಸಿದರು.
ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 100 ಮಕ್ಕಳಿಗೆ ವಿಷಯವಾರು ನೋಟ್ ಬುಕ್ ಗಳು, ಜಾಮೆಟ್ರಿ ಬಾಕ್ಸ್, ಲೇಖನ ಸಾಮಗ್ರಿಗಳು ಹಾಗೂ ಬ್ಯಾಗ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಜಯ್ ಅವರು ಹೆಲ್ಪ್ 100 ಮೂಲಕ ಪಡೆದ ಸಾಮಗ್ರಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ತಿಳಿಸಿದರು.
ಶಾಲೆಯ ಮುಖ್ಯ್ಯೊಪಾಧ್ಯಯರಾದ ಗೋಪಿನಾಯ್ಕ್ ಅವರು ಅತಿಥಿಗಳನ್ನು ಸ್ವಾಗತಿಸಿ, ಹೆಲ್ಪ್ 100 ನ ದಾನಿಗಳಿಗೆ ಅಭಿನಂದನೆ ಸಲ್ಲಿಸಿ,ಅವರ ಕಾರ್ಯ ಚಟುವಟಿಕೆಗಳನ್ನು ಪ್ರಶಂಸಿಸಿದರು.
ಹೆಲ್ಪ್ 100 ನವರನ್ನು ಶಾಲೆಗೆ ಕರೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಶಿಕ್ಷಕರಾದ ಸತೀಶ್ ಬಿ ಕೆ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವುದು, ಈ ಮೂಲಕ ಪ್ರೇರಣೆ ನೀಡುತ್ತಿರುವುದು ಮಾದರಿ ಕೆಲಸವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್, ಮುಂದಿನ ದಿನಗಳಲ್ಲಿ ಇನ್ನಷ್ಟು ನೆರವು ಹೆಲ್ಪ್ 100 ನಿಂದ ನಮ್ಮ ಶಾಲೆಯ ಮಕ್ಕಳಿಗೆ ಸಿಗಲಿ ಎಂದು ಕೋರಿದರು.
ಈ ಕಾರ್ಯಕ್ರಮದಲ್ಲಿ ಹೆಲ್ಪ್ 100 ನ ಶ್ರೀಮತಿ ಚೇತನಾ, ವಿನೀತ್, ನೀಲ್, ಸದಸ್ಯರಾದ ಸಿದ್ದಣ್ಣ, ನಾಗಣ್ಣ, ಕೊಟ್ರೇಶ್, ಶಿಕ್ಷಕರಾದ ಚಂದ್ರಮ್ಮ,ವನಜಾಕ್ಷಿ, ರೇಣುಕಮ್ಮ, ರಾಧಮ್ಮ ಉಪಸ್ಥಿತರಿದ್ದರು.
ಗೋಪಿನಾಯ್ಕ್ ಸ್ವಾಗತಿಸಿದರು, ಚಂದ್ರಮ್ಮ ವಂದಿಸಿದರು, ಸತೀಶ್ ಕಾರ್ಯಕ್ರಮ ನಿರೂಪಿಸಿದರು.