ಸುದ್ದಿವಿಜಯ, ಜಗಳೂರು: ಜಮೀನಿನಲ್ಲಿ ಶೇಂಗಾ ಕೀಳುವ ವೇಳೆ ಮಹಿಳೆಯ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಬುಧವಾರ ಮದ್ಯಾಹ್ನ ನಡೆದಿದೆ.
ಕೆಳಗೋಟೆಯ ಸಂಜೀವಮ್ಮ (50) ಗಾಯಗೊಂಡ ಮಹಿಳೆ.
ತಮ್ಮ ಜಮೀನಿನಲ್ಲಿ ಪತಿ ಏಕಾಂತಣ್ಣ, ಮಗ ನಾಗರಾಜ್ ಜತೆಯಾಗಿ ಸಂಜೀವಮ್ಮ ಶೇಂಗಾ ಕಿತ್ತು ರಾಶಿ ಹಾಕುತ್ತಿದ್ದರು. ಈ ವೇಳೆ ಎತ್ತಲಿಂದಲೋ ಬಂದ ಕರಡಿ ಮಹಿಳೆಯ ಮೇಲೆ ದಿಢೀರ್ ಎರಗಿದೆ.
ನೋಡು ನೋಡುತ್ತಿದ್ದಂತೆ ತನ್ನ ಉಗುರುಗಳಿಂದ ಮಹಿಳೆಯ ಕಾಲಿಗೆ ಎಳೆದಿದೆ. ಅಲ್ಲದೇ ಬಾಯಿಯಿಂದ ಕಚ್ಚಿದೆ, ಕರಡಿಯ ಆರ್ಭಟದಿಂದ ಕಿರುಚಾಡಿದ್ದಾಳೆ. ದೂರದಲ್ಲಿದ್ದ ಪತಿ, ಮಗ ಇಬ್ಬರು ಧಾವಿಸಿ ಕರಡಿಯನ್ನು ಎದುರಿಸಿ ಓಡಿಸಿದ್ದಾರೆ.
ರಕ್ತಸಿಕ್ತ ಗಾಯದಿಂದ ಬಿದ್ದಿದ್ದ ಮಹಿಳೆಯನ್ನು ಕೂಡಲೇ ಜಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಮಯಕ್ಕೆ ಸರಿಯಾಗಿ ಧಾವಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಹಾಡು ಹಗಲೇ ಕರಡಿ ದಾಳಿ ನಡೆಯುತ್ತಿದ್ದು ಅರಣ್ಯ ಇಲಾಖೆ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.
” ರಂಗಯ್ಯನ ದುರ್ಗ ಅರಣ್ಯ ಪ್ರದೇಶಕ್ಕೆ ಕೆಳಗೋಟೆ ಗ್ರಾಮ ಹೊಂದಿಕೊಂಡಿದ್ದು, ಸುತ್ತಮುತ್ತಲು ಕರಡಿ, ಹಂದಿ, ಕಿರುಬ ಇತರೆ ಪ್ರಾಣಿಗಳು ಹೆಚ್ಚಾಗಿರುವುದು ಜನ ಸಾಮಾನ್ಯರು ಒಂಟ್ಟಿಗರಾಗಿ ಓಡಾಡುವುದು ಕಷ್ಟವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಕಾಡುಪ್ರಾಣಿಗಳ ಹಾವಳಿ ತಪ್ಪಿಸಿ ಸುತ್ತಲು ಸೋಲಾರ್ ತಡೆಗೋಡೆ ನಿರ್ಮಿಸಬೇಕು”
– ನಾಗರಾಜ್, ಗಾಯಾಳು ಪುತ್ರ.