ಜಗಳೂರು: ಕಡಲೆಗೆ ಪೋಷಕಾಂಶಗಳ ನಿರ್ವಹಣೆ ಕಡೆ ಗಮನ ಹರಿಸಿ!

Suddivijaya
Suddivijaya December 22, 2022
Updated 2022/12/22 at 2:41 PM

ಸುದ್ದಿವಿಜಯ, ಜಗಳೂರು: ಬಯಲು ಸೀಮೆಯ ಜಗಳೂರು ತಾಲೂಕಿನಲ್ಲಿ ಈ ಭಾರಿ ಹಿಂಗಾರು ಹಂಗಾಮಿನಲ್ಲಿ ಅತ್ಯುತ್ತಮ ಕಡಲೆ ಬೆಳೆ ಉತ್ಕøಷ್ಟವಾಗಿ ಬಂದಿದ್ದು, ಶೇ.50ರಷ್ಟು ಹೂವಾಡುವ ಸಂದರ್ಭದಲ್ಲಿ ಪೋಷಕಾಂಶಗಳ ನಿರ್ವಹಣೆ ಕಡೆ ಗಮನ ಹರಿಸಬೇಕು ಎಂದು ಕೆವಿಕೆ ಬೇಸಾಯ ತಜ್ಞ ಡಾ.ಬಿ.ಓ.ಮಲ್ಲಿಕಾರ್ಜುನ ಹೇಳಿದರು.

ಬಿದರಕೆರೆ ತಳಬಾಳು ಅಮೃತ ರೈತ ಉತ್ಪಾಕದ ಕಂಪನಿ (ಎಫ್‍ಪಿಓ)ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಕಟ್ಟಿಗೆಹಳ್ಳಿ ಗ್ರಾಮದಲ್ಲಿಉಚಿತವಾಗಿ 50 ಜನ ರೈತರಿಗೆ ನೀಡಲಾಗಿರುವ ಕಡಲೆ ಬೀಜ ಬಿತ್ತನೆಯಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಗುರುವಾರ ಪ್ರಾತ್ಯಕ್ಷತೆ ನೀಡಿದರು.

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯ ಗುಚ್ಚ ಗ್ರಾಮಗಳ ಮುಂಚೂಣಿ ಪ್ರಾತ್ಯಕ್ಷಿಕೆಯಲ್ಲಿ ಅತ್ಯುತ್ತಮವಾಗಿ ಕಡಲೆ ಬಿತ್ತನೆಯಾಗಿದೆ. ರೈತರು ತಾವು ಬಿತ್ತಿರುವ ಕಡೆಲೆಯ ಬೆಳೆಯ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಬೇಕು.

 ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಕೆವಿಕೆ ಬೇಸಾಯ ತಜ್ಞ ಮಲ್ಲಿಕಾರ್ಜುನ್ ಅವರು ಕಡಲೆ ಬೆಳೆ ನಿರ್ವಹಣೆ ಬಗ್ಗೆ ರೈತರಿಗೆ ಪ್ರಾತ್ಯಕ್ಷತೆ ನೀಡಿದರು.
 ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಕೆವಿಕೆ ಬೇಸಾಯ ತಜ್ಞ ಮಲ್ಲಿಕಾರ್ಜುನ್ ಅವರು ಕಡಲೆ ಬೆಳೆ ನಿರ್ವಹಣೆ ಬಗ್ಗೆ ರೈತರಿಗೆ ಪ್ರಾತ್ಯಕ್ಷತೆ ನೀಡಿದರು.

ಬೆಳೆಯು ಶೇ. 50ರಷ್ಟು ಹೂವಾಡುವ ಸಂದರ್ಭದಲ್ಲಿ ಚಿಕ್ ಮ್ಯಾಜಿಕ್ 7.5 ಗ್ರಾಂ ಪ್ರತಿ ಲೀ ನೀರಿನಲ್ಲಿ ಕರಗಿಸಿ ಜೊತೆಗೆ ಸಸ್ಯ ಪ್ರಚೋದಕ 0.4 ಎಂಎಲ್ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.

ಈ ಚಿಕ್ ಪಿ ಮ್ಯಾಜಿಕ್ ಪ್ರಧಾನ ಹಾಗೂ ಲಘು ಪೆÇೀಷಕಾಂಶಗಳ ಮಿಶ್ರಣವಾಗಿದ್ದು ಇದನ್ನು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಬೆಳಗ್ಗೆ 8 ರಿಂದ 10 ಗಂಟೆ ಒಳಗೆ ಅಥವಾ ಸಂಜೆ ನಾಲ್ಕರ ನಂತರ ಸಿಂಪರಣೆ ಮಾಡುವುದು ಸೂಕ್ತ ಎಂದರು.

ಸಸ್ಯ ಸಂರಕ್ಷಣಾ ತಜ್ಞರಾದ ಡಾ. ಅವಿನಾಶ್ ಟಿ.ಜಿ., ಕಾಯಿ ಕೊರಕದ ನಿರ್ವಹಣೆಗಾಗಿ ಇಮಾಮೆಕ್ಟಿನ್ ಬೆಂಜೋಟೆ 0.5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು ಎಂದರು.

ಆಯ್ದ ಮುಂಚೂಣಿ ಪ್ರತ್ಯಕ್ಷತೆ ರೈತರಿಗೆ ಔಷಧ ಮತ್ತು ಚಕ್‍ಪಿ ಮ್ಯಾಜಿಕ್ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಎನ್.ಎಸ್.ಸೋಮನಗೌಡರು, ಮಂಜುನಾಥ್, ನಾಗರಾಜ್ ಇತರರು ಭಾಗವಹಿಸಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!