ಸುದ್ದಿವಿಜಯ, ಜಗಳೂರು: ಸರಕಾರಿ ಉದ್ಯೋಗಕ್ಕೆ ನಿರ್ಧಿಷ್ಟ ವಯೋಮಿತಿ ಇದೆ. ನಿವೃತ್ತಿಯ ನಂತರ ಪ್ರಯೋಗಶೀಲ ಕಾರ್ಯದಲ್ಲಿ ತೊಡಗಿಕೊಂಡಾಗ ನೆಮ್ಮದಿಯ ಜೊತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಬೆಸ್ಕಾಂ ಎಇಇ ಗಿರೀಶ್ ನಾಯ್ಕ್ ಹೇಳಿದರು.
ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಶನಿವಾರ ನಿವೃತ್ತರಾದ ಮೆಕಾನಿಕ್ ದರ್ಜೆ-2 ಬೆಸ್ಕಾಂ ವತಿಯಿಂದ ವಯೋ ನಿವೃತ್ತಿಯಾಗಿದ್ದ ಕಾರಣ ಸುಧೀರ್ಘ ಸೇವೆ ಸಲ್ಲಿಸಿದ ಬಿ.ಲಕ್ಷ್ಮಪ್ಪ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಸ್ಕಾಂ ಇಲಾಖೆಯಲ್ಲಿ ಕೆಲಸ ಮಾಡುವುದು ಬೆಂಕಿಯ ಜೊತೆ ಸರಸವಾಡಿದಂತೆ. ಜೀವ ಕೈಲಿಡಿದು ಕೆಲಸ ಮಾಡಬೇಕಾಗುತ್ತದೆ. ಅಲ್ಲದೇ ಸಾರ್ವಜನಿಕರಿಂದ ನಿಂದನೆಗಳಿಗೂ ಒಳಗಾಗಬೇಕಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸುವ ಸರಕಾರಿ ನೌಕರರಿಗೆ ನಿವೃತ್ತಿ ಆದ ನಂತರ ಅನೇಕರು ಖಿನ್ನತೆಗೆ ಒಳಗಾಗುತ್ತಾರೆ.
ನಿವೃತ್ತಿಯ ನಂತರ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ವ್ಯಾಯಾಮ, ನಿದ್ದೆ, ಪ್ರವಾಸ ಕೈಗೊಂಡು ಮಾನಸೀಕ ನೆಮ್ಮದಿಯನ್ನು ಕಾಣಬೇಕು. ಪ್ರಯೋಗ ಶೀಲ ಕಾರ್ಯಗಳಲ್ಲಿ ತೊಡಗಿಕೊಂಡರೆ ಮಾತ್ರ ನೆಮ್ಮದಿ ಜೀವನ ನಡೆಸಬಹುದು ಎಂದರು.
ಈ ವೇಳೆ ಬೆಸ್ಕಾಂ ಇಲಾಖೆ ನೌಕರರ ಸಂಘದ ಎಸ್ಸಿಎಸ್ಟಿ ರಾಜ್ಯ ಉಪಾಧ್ಯಕ್ಷ ಜಯಪ್ಪ, ಕೇಂದ್ರ ಸಮಿತ ಸದಸ್ಯ ಮುಕುಂದ್, ವೀರಭದ್ರಪ್ಪ, ಪರಶುರಾಮ, ಸಂಜೀವ್ಕುಮಾರ್, ವಿಶ್ವನಾಥ್, ಶಿವಶಂಕರ್, ಮಂಜುನಾಥ್, ಅಧ್ಯಕ್ಷತೆ ಗಿರೀಶ್ ನಾಯ್ಕ್, ಮಾಳಮ್ಮನಹಳ್ಳಿ ಅಶೋಕ್, ಲೋಕೇಶ್, ಗಿರೀಶ್, ಮುದೇಗೌಡ, ಸಿದ್ದಾನಾಯ್ಕ್ ಸೇರಿದಂತೆ ಲಕ್ಷ್ಮಪ್ಪ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.