ಜಗಳೂರು: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ, ಕಚೇರಿಗೆ ಮುತ್ತಿಗೆ

Suddivijaya
Suddivijaya February 10, 2023
Updated 2023/02/10 at 1:33 PM

ಸುದ್ದಿವಿಜಯ, ಜಗಳೂರು: ಬೇಸಿಗೆ ಬಿಸಿಲಿನಿಂದ ಬಸವಳಿಯುತ್ತಿರುವ ಬೆಳೆಗಳಿಗೆ ಸರಿಯಾದ ವಿದ್ಯುತ್ ಮತ್ತು ಟಿಸಿ ನೀಡಿದ ಬೆಸ್ಕಾಂ ಅಧಿಕಾರಿಗಳು ಎಎಇ ಗಿರೀಶ್ ನಾಯ್ಕ್ ವಿರುದ್ಧ ರೈತರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿ ಕಚೇರಿಗೆ ನುಗ್ಗಿ ಧಿಕ್ಕಾರ ಕೂಗಿದರು.

ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಟಿಸಿ ಸುಟ್ಟು 15 ದಿನಗಳಾದರೂ ದುರಸ್ಥಿಪಡಿಸಿದೇ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆಂದು ಆರೋಪಿಸಿ ಶುಕ್ರವಾರ ಕರ್ನಾಟಕ ರೈತ ಸಂಘ ಇವರ ನೇತೃತ್ವದಲ್ಲಿ ಯರಲಕಟ್ಟೆ, ನಿಬಗೂರು, ಬಿಸ್ತುವಳ್ಳಿ, ಕಟ್ಟಿಗೆಹಳ್ಳಿ ಗ್ರಾಮದ ರೈತರ ಬೆಸ್ಕಾಂ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.

ಬೇಸಿಗೆಯಲ್ಲಿ ತುಂಬ ಬಿಸಿಲಿನಿಂದ ಬೆಳೆಗಳು ಸುಡುತ್ತಿವೆ. ಇದರ ನಡುವೆ ಪದೇಪದೆ ಸುಡುವ ಟಿಸಿಗಳು ಸುಡುತ್ತಿರುವುದು ಮತ್ತಷ್ಟು ಬೆನ್ನಿನ ಮೇಲೆ ಬರೆ ಎಳೆದಂತಾಗುತ್ತಿದೆ. ನಮ್ಮ ಜಮೀನಿನಲ್ಲಿ ಟಿಸಿ ಸುಟ್ಟು ಎರಡು ವಾರಗಳಾದರೂ ಇದಕ್ಕೆ ಸಂಬಂಧಿಸಿದ ಎಸ್‍ಓ ಆಗಲೀ ಅಥವಾ ಎಇಇ ಆಗಲೀ ಯಾರೋಬ್ಬರು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.

ಏನಾದರು ಕೇಳಿದರೇ ಒಬ್ಬರ ಮೇಲೋಬ್ಬರು ಹೇಳಿಕೊಂಡು ಕಾಯುಸುತ್ತಾರೆ. ಇವರ ನಿರ್ಲಕ್ಷದಿಂದಾಗಿ ಜಮೀನಿನಲ್ಲಿ ಬೆಳೆಗಳೆಲ್ಲಾ ಬಾಡುತ್ತಿವೆ. ಹಾಗಾಗಿ ನಮಗೆ ಪರಿಹಾರ ನೀಡಬೇಕು ಎಂದು ಯರಲಕಟ್ಟೆ ಸಂದೀಪ್ ಆರೋಪಿಸಿದ್ದರು.

  ಜಗಳೂರು ಪಟ್ಟಣದ ಬೆಸ್ಕಾಂ ಎಇಇ ಕಚೇರಿಗೆ ರೈತರು ನುಗ್ಗಿ ಪ್ರತಿಭಟನೆ ನಡೆಸಿದರು.
  ಜಗಳೂರು ಪಟ್ಟಣದ ಬೆಸ್ಕಾಂ ಎಇಇ ಕಚೇರಿಗೆ ರೈತರು ನುಗ್ಗಿ ಪ್ರತಿಭಟನೆ ನಡೆಸಿದರು.

ರೈತ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ಹಸಿವು ನೀಗಿಸಬೇಕಾದರೆ ರೈತರ ಬಿತ್ತಿ ಬೆಳೆದರೆ ಮಾತ್ರ ಸಾದ್ಯ. ಅಂತವರಿಗೆ ಟಿಸಿ ಅಳವಡಿಸಲು ತಿಂಗಳ ಗಟ್ಟಲೇ ಅಲೆದಾಡುತ್ತಿರುವುದು ಎಷ್ಟು ಸರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ಟಿಸಿ ಸುಟ್ಟು 24 ತಾಸಿನೊಳಗೆ ದುರಸ್ಥಿಪಡಿಸಿ ಜಮೀನುಗಳಲ್ಲಿ ಅಳವಡಿಸಬೇಕು ಎನ್ನುವುದು ಸರ್ಕಾರದ ಆದೇಶವಿದ್ದರು ಅದನ್ನು ಗಾಳಿಗೆ ತೂರಲಾಗಿದೆ ಎಂದು ಆಪಾಧಿಸಿದರು.

ಯರಲಕಟ್ಟೆಯಲ್ಲಿ ರಾಗಿ ಬೆಳೆ ಒಣಗಿದೆ, ನಿಬಗೂರು ನಾಗಪ್ಪ ಅವರ ಜಮೀನಿನಲ್ಲಿ ರಾಗಿ, ಗೋಧಿ,ಶೇಂಗಾ ನೀರು ಇಲ್ಲದೇ ಒಣಗಿ ಹೋಗಿವೆ. ಬಿಸ್ತುವಳ್ಳಿ ಮಲ್ಲಿಕಾರ್ಜುನ ಎರಡು ಎಕರೆ ಅಡಕೆ, ಒಂದುವರೆ ಎಕರೆ ರಾಗಿ, ಒಂದುವರೆ ಎಕರೆ ಶೆಂಗಾ ಬಾಡಿದೆ ಇವುಗಳಿಗೆಲ್ಲಾ ಅಧಿಕಾರಿಗಳು ಪರಿಹಾರ ನೀಡಬೇಕು ಇಲ್ಲದಿದ್ದರೇ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಐದುವರೆ ಎಕರೆ ಜಮೀನಿನಲ್ಲಿ ಎರಡು ಎಕರೆ ಅಡಕೆ, ಒಂದುವರೆ ಎಕರೆ ರಾಗಿ, ಒಂದುವರೆ ಎಕರೆ ಶೇಂಗಾ ಬೆಳೆಯಲಾಗುತ್ತಿದೆ. ಇದರಲ್ಲಿ ಬೋರ್‍ಗಳಿವೆ. ಈಗಿರುವ 66ಕೆವಿ ಟಿಸಿಯಿಂದ ವೋಲ್ಟೆಜ್ ಕಡಿಮೆ ಇರುವುದರಿಂದ ಬೋರ್ ವೆಲ್ ಚಾಲನೆ ಆಗುತ್ತಿಲ್ಲ. ಬೇರ ಟಿಸಿಯಿಂದ ಸಂಪರ್ಕ ಕಲ್ಪಿಸಿಕೊಡುವಂತೆ ವರ್ಷದಿಂದ ಓಡಾಡಿದರು ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಬಿಸ್ತುವಳ್ಳಿ ಮಲ್ಲಿಕಾರ್ಜುನ ದೂರಿದರು.

2021ನೇ ಸಾಲಿನಲ್ಲಿ ಹಸೊ ಟಿಸಿ ಮಂಜೂರಾತಿಯಾಗಿದೆ. ಇದಕ್ಕೆ ಸಂಬಂಧಿಸಿದ ಸಾಮಾಗ್ರಿ ಬಿಲ್ ಪಾವತಿಯಾಗಿದ್ದರೂ ಟಿಸಿ ಅಳವಡಿಸದೇ ಗುತ್ತಿಗೆದಾರ ಮತ್ತು ಅಧಿಕಾರಿಗಳು ಮೌನವಹಿಸಿದ್ದಾರೆ. ಎರಡು ಬೋರಿನ ಆರ್ ಆರ್ ನಂಬರಿಗೆ ಒಂದುಟಿಸಿ ಕೊಡುವಂತೆ ಐವತ್ತು ಸಾವಿರ ಹಣ ಕಟ್ಟಿ ಎರಡು ವರ್ಷಗಳಾದರು ಅಳವಡಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್, ರೈತರಾದ ಮಂಜುನಾಥ, ಬಸವರಾಜ್, ದುರುಗಪ್ಪ, ಕಟ್ಟಿಗೆಹಳ್ಳಿ ಮಂಜಪ್ಪ, ಮಂಜುನಾಥ್, ಕರಿಬಸಪ್ಪ, ಮಾರುತಿ ಪಟೇಲ್, ಬೆಸ್ಕಾಂ ಎಸ್.ಒ ರಂಗನಾಥ್, ಸೇರಿದಂತೆ ಮತ್ತಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!