ಸುದ್ದಿವಿಜಯ, ಜಗಳೂರು: ಇಲ್ಲಿಗೆ ಸಮೀಪದ ಮೆದಗಿನಕೆರೆ ಬಳಿ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯಲ್ಲಿ ಸೋಮವಾರ 5 ಗಂಟೆ ಸುಮಾರಿಗೆ ಕಾರೊಂದು ಚರಂಡಿಗೆ ಬಿದ್ದು ಅದರಲ್ಲಿದ್ದ ಚಾಲಕ ಪ್ರಣಾಪಯದಿಂದ ಪಾರಾಗಿದ್ದಾರೆ.
ದಾವಣಗೆರೆಯಿಂದ ಚಳ್ಳಕೆರೆಗೆ ಹೊರಟ್ಟಿದ್ದ ಕಾರು ಚಾಲಕ ನೇಮಿರಾಜ್ ಅವರು ಎದುರಿಗೆ ಬಂದ ಹಸು ತಪ್ಪಿಸಲು ಹೋಗಿ ಆಯ ತಪ್ಪಿ ಕಾರು ಚರಂಡಿಗೆ ಇಳಿದಿದೆ. ಹೀಗಾಗಿ ಕಾರಿನ ಮುಂಭಾಗ ಸ್ವಲ್ಪ ಪ್ರಮಾಣ ಜಖಂ ಗೊಂಡಿದೆ.
ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಈ ಅಪಘಾತ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.