ಸುದ್ದಿವಿಜಯ, ಜಗಳೂರು: ಮಹಾತ್ಮಾಗಾಂಧೀ ಜಯಂತಿ ಅಂಗವಾಗಿ ವಿಶ್ವ ಅಹಿಸಾ ದಿನವಾದ ಅಕ್ಟೋಬರ್ 2 ರಂದು ಆಚರಿಸಲಾಗುತ್ತಿದೆ. ಆದರೆ ಜಗಳೂರು ಪಟ್ಟಣದಲ್ಲಿ ಕದ್ದುಮುಚ್ಚಿ ಕೋಳಿ ಮಾಂಸ ಮಾರಾಟ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಸರಕಾರದ ಆಜ್ಞೆ ಉಲ್ಲಂಘಿಸಿ ಕೋಳಿ ಅಂಗಡಿಗಳಲ್ಲಿ ಜೀವಂತ ಕೋಳಿಗಳ ಮಾರಾಟ ಸೇರಿದಂತೆ ಚಿಕನ್‍ಗಳನ್ನು ಶೆಟರ್ ಮುಚ್ಚಿಕೊಂಡು ಕೋಳಿ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ಕೆಲ ನಾಗರಿಕರು ಸುದ್ದಿ ವಿಜಯಕ್ಕೆ ಮಾಹಿತಿ ನೀಡಿದ್ದಾರೆ.
ರಾಜ್ಯ ಸರಕಾರದ ಆಜ್ಞೆಯಂತೆ ಪಶುಪಾಲನಾ ಇಲಾಖೆ ಜಂಟಿ ನಿರ್ದೇಶಕರು ಹೊರಡಿಸಿರುವ ಆದೇಶಕ್ಕೂ ಕಿಮ್ಮತ್ತಿಲ್ಲ. ಪಪಂಗಳ ವ್ಯಾಪ್ತಿಗೆ ಬರುವ ಮಾಂಸದ ಅಂಗಡಿಗಲ್ಲಿ ಮಾಂಸ ಮಾರಾಟ ಮಾರುವುದನ್ನು ನಿಷೃಧಿಸಬೇಕು ಎಂದು ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಕದ್ದುಮುಚ್ಚಿ ಕ್ಯಾರಿ ಬ್ಯಾಗ್‍ಗಳಲ್ಲಿ ಕೆಜಿ ಮತ್ತು ಎರಡು ಕೇಜಿ ಪ್ಯಾಕೇಟ್‍ಗಳನ್ನು ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಬೆಳ್ಳಂಬೆಳಿಗ್ಗೆ ಜಗಳೂರು ಪಟ್ಟಣದ ಪೊಲೀಸರು ಮತ್ತು ಪಪಂ ಆರೋಗ್ಯ ನಿರೀಕ್ಷಕರಾದ ಕಿಫಾಯತ್ ಅಹಮ್ಮದ್ ಸಿಟಿ ರೌಂಡ್ಸ್ ಮಧ್ಯೆಯೂ ಕೋಳಿ ಮಾಂಸ ಮಾರಾಟ ಮಾಡುವ ಅಂಗಡಿ ಮಾಲೀಕರು ಎಗ್ಗಿಲ್ಲದೇ ಮಾರಾಟ ಮಾಡುತ್ತಿದ್ದಾರೆ ಎಂದು ನಾಗರಿಕರು ಪಪಂ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.