ಜಗಳೂರು: ಮಡ್ರಹಳ್ಳಿ ಚೌಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಪೂರ್ವಭಾವಿ ಸಭೆ

Suddivijaya
Suddivijaya March 7, 2023
Updated 2023/03/07 at 4:40 PM

ಸುದ್ದಿವಿಜಯ, ಜಗಳೂರು: ಮಾರ್ಚ್ 10 ರಂದು ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವವನ್ನು ಯಾವುದೇ ಅಡಚಣೆಯಾಗದಂತೆ ಅಗತ್ಯ ಸಕಲ ಸಿದ್ದತೆಗೊಳಿಸಿ ಯಶಸ್ವಿಗೊಳಿಸಬೇಕು ಎಂದು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಸೂಚಿಸಿದರು.

ತಾಲೂಕಿನ ಗುರುಸಿದ್ದಾಪುರ ಸಮುದಾಯ ಭವನದಲ್ಲಿ  ಮಡ್ರಹಳ್ಳಿ ಚೌಡೇಶ್ವರಿ ಜಾತ್ರಾಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ನೆರೆಹೊರೆಯ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಕ್ತಿದೇವತೆ‌ ಭಕ್ತಸಮೂಹ ಆಗಮಿಸುವ ನಿರೀಕ್ಷೆಯಿದೆ ಆದ್ದರಿಂದ ಗ್ರಾಮಪಂಚಾಯಿತಿ,ಆರೋಗ್ಯ,ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಜನಜಾನುವಾರುಗಳಿಗೆ ಕುಡಿಯುವ ನೀರಿನ ಪೂರೈಕೆ, ವಾಹನ ನಿಲುಗಡೆಗೆ ಸ್ಥಳಾವಕಾಶ, ವಿದ್ಯುತ್ ಪೂರೈಕೆ, ಅಗ್ನಿಶಾಮಕದಳ ವಾಹನ, ಸ್ವಚ್ಛತೆ,ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು.ಭಕ್ತಾದಿಗಳ ದರ್ಶನ ರಥೋತ್ಸವ ಸುಗಮವಾಗಿ ನಡೆಸಬೇಕು ಎಂದು ಹೇಳಿದರು.

ಮಾರ್ಚ್ 10 ರಂದು ರಥೋತ್ಸವ,11 ರಂದು ರಂಗಯ್ಯನ ಬೆಟ್ಟಕ್ಕೆ ಹೋಗುವುದು,12 ಗಂಗೆಪೂಜೆ,13 ರಂದು ಗುಡಿತುಂಬುವ ಕಾರ್ಯಕ್ರಮಗಳನ್ನು ದೇವಸ್ಥಾನ ಸಮಿತಿ ಅವರು ಹಮ್ಮಿಕೊಳ್ಳಲಾಗಿದ್ದು, ಕಾರ್ಯನಿಮಿತ್ತವಾಗಿರುವ ಶಾಸಕರ ಅನುಪಸ್ಥಿತಿಯಲ್ಲಿ ಅವರ ಸಲಹೆಯಂತೆ ಪೂರ್ವಭಾವಿ ಸಭೆ ನಡೆಸಲಾಗಿದೆ.ಎಲ್ಲರೂ ಸಹಕರಿಸಬೇಕು ಎಂದರು.

ಟಿಎಚ್.ಓ ಡಾ.ನಾಗರಾಜ್ ಮಾತನಾಡಿ,ಜಾತ್ರಾಮಹೋತ್ಸವ ಮುಕ್ತಾಯದವರೆಗೆ ವೈದ್ಯರುಹಾಗೂ ಸುಶ್ರೂಷಕಿಯರ ನಿಯೋಜನೆ,ಅಂಬ್ಯುಲೆನ್ಸ್,ಆರೋಗ್ಯ ಸೇವೆಗೆ ಸಿದ್ದತೆಗೊಳಿಸಲಾಗುವುದು. ಮೆಡಿಸನ್ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಮಾತನಾಡಿ,ಜಾತ್ರೆಯ ಸಂದರ್ಭದಲ್ಲಿ ಮೌಢ್ಯತೆ ಆಚರಣೆ ಮಾಡಬಾರದು,ದೇವದಾಸಿ ಪದ್ದತಿಯಿಂದ ಹೊರಬರಬೇಕು. ಸಾಂಪ್ರದಾಯಿಕ ಪೂಜೆ ರಥೋತ್ಸವ, ಆಚರಣೆಗಳನ್ನು ಮಾತ್ರ ಅನುಸರಿಸಬೇಕು ಎಂದು ಜಾಗೃತಿ ಮೂಡಿಸಿದರು.

ಅರಣ್ಯ ಇಲಾಖೆ ಅಧಿಕಾರಿ ಗೈರು:ಕೊಂಡಕುರಿ ವನ್ಯಧಾಮದ ಹೃದಯ ಭಾಗದಲ್ಲಿರುವ ಚೌಡೇಶ್ವರಿ ದೇವಿ ನೆಲೆಸಿದ್ದು.ಅರಣ್ಯ ಇಲಾಖೆವರು ಜಾತ್ರಾಮಹೋತ್ಸವ ನಿರ್ವಹಣೆ ಸಂದರ್ಭದಲ್ಲಿ ಜವಾಬ್ದಾರಿವಹಿಸಬೇಕಾದ ಅಧಿಕಾರಿ,ತಹಶೀಲ್ದಾರ್ ನೇತೃತ್ವದ ಪೂರ್ವಭಾವಿ ಸಭೆಯಲ್ಲಿ ಗೈರಾಗಿದ್ದು ಸಿಬ್ಬಂದಿ ಕಳುಹಿಸಿದ್ದು. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಸಂದರ್ಭದಲ್ಲಿ ಗುರುಸಿದ್ದಾಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಗೌಡಿಕಟ್ಟೆ ಬೊಮ್ಮಪ್ಪ,ಪಿಎಬ್ಲೂ ಡಿ ಎಇಇ ರುದ್ರಪ್ಪ,ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್,ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಸಾಧಿಕ್ ಉಲ್ಲಾ,ತೋಟಗಾರಿಕೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ಬಿಳಿಚೋಡು ಪಿಎಸ್ ಐ ಸೋಮಶೇಖರ್,ಪಿಡಿಓ ವಾಸುದೇವ,ಮಾಗಡಿ ಮಂಜಣ್ಣ,ಮಲ್ಲೇಶಪ್ಪ,ಪ್ರಕಾಶ್,ದಳಪತಿ ಬಸೆಟೆಪ್ಪ,ಗಿರಿಯಪ್ಪ,ಪೊಲೀಸ್ ಮಂಜಣ್ಣ,ಸೇರಿದಂತೆ ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!