ಸುದ್ದಿವಿಜಯ,ಜಗಳೂರು: ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ತಳ ಮಟ್ಟದಿಂದ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜಪ್ಪ ಕರೆ ನೀಡಿದರು.
ಇಲ್ಲಿನ ವಾಲ್ಮೀಕಿ ಭವನದಲ್ಲಿ ಮಂಗಳವಾರ ಜಗಳೂರು ವಿಧಾನ ಸಭಾ ಕ್ಷೇತ್ರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ನವ ಸಂಕಲ್ಪ ಚಿಂತನಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ಪಕ್ಷವನ್ನು ಸಂಘಟಿಸಿ ಮುನ್ನಡೆಸಲಾಗುವುದು. ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಸೋತಿರಬಹುದು ಆದರೆ ಮುಖಂಡರು, ಕಾರ್ಯಕರ್ತರು ಎದೆಗುಂದದೆ ಉತ್ಸಹದಲ್ಲಿದ್ದಾರೆ. ನರೇಂದ್ರ ಮೋದಿ ಎಂಟು ವರ್ಷವಾದರು ದೇಶ ಸುಧಾರಣೆ ಬಂದಿಲ್ಲ.
ಉದ್ಯೋಗ ಕೊಡುವುದು ಸುಳ್ಳು ಭರವಸೆಗಳನ್ನು ನೀಡಿ ಯುವಕರಿಗೆ ಮೋಡಿ ಮಾಡಿದ್ದರು ಆದರೆ ಈ ವರೆಗೂ ಒಂದು ಸಾವಿರ ಉದ್ಯೋಗ ನೀಡಿಲ್ಲ. ಇದರಿಂದ ದೇಶದಲ್ಲಿ ಅಸಮಾಧಾನ ಇದೆ. ಮುಂದಿನ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾಗಲೀ, ಅವರ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲ್ಲಿಸಿಕೊಳ್ಳುವ ಜಬಾವ್ದಾರಿ ಮುಖಂಡರು, ಕಾರ್ಯಕರ್ಯರು ಮೇಲಿದೆ ಭ್ರಷ್ಟ ಬಿಜೆಪಿ ಸರ್ಕಾರವನ್ನು ರಾಜ್ಯ ಮತ್ತು ದೇಶದಲ್ಲಿಬೇರು ಸಹಿತ ಕಿತ್ತಾಕಬೇಕು ಎಂದು ಕರೆ ನೀಡಿದರು.
ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಪಕ್ಷವನ್ನು ಕಡೆಗಣಿಸಿದ್ದ ಜನರಿಗೆ ಮತ್ತೊಮ್ಮೆ ಕಾಂಗ್ರೆಸ್ ಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಹಾಗಾಗಿ ಚುನಾವಣೆ ಸಮೀಪಿಸುತ್ತಿದ್ದು ಎಲ್ಲರು ಮೈ ಕೊಡವಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಭಿನ್ನಾಭಿಪ್ರಾಯ ಬಿಡಿ ಪಕ್ಷ ಸಂಘಟನೆ ಮಾಡಿ:
ಕೆಪಿಸಿಸಿ ಕಾರ್ಯದರ್ಶಿ ಅಸಗೋಡು ಜಯಸಿಂಹ ಮಾತನಾಡಿ, ಐದು ವರ್ಷದಲ್ಲಿ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ತುಂಬ ಅನ್ಯಾಯವಾಗಿದೆ. ಸಿದ್ದರಾಮಯ್ಯವವರು ಕೊಟ್ಟ ಕಾರ್ಯಕ್ರಮಗಳು ಎಂದು ಮರೆಯಲು ಸಾದ್ಯವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಬಕೊಟ್ಟಿದ್ದು ಕಾಂಗ್ರೆಸ್ ಆದರೆ ಕೇವಲ ಎಂಟು ವರ್ಷ ಆಳಿದ ಬಿಜೆಪಿ ಸರ್ಕಾರದಿಂದ ಸ್ವಾತಂತ್ರ್ಯಕ್ಕೆ ದಕ್ಕೆಯುಂಟಾಗಿದೆ. ಚುನಾವಣೆಯಲ್ಲಿ ಗೆಲುವು ಪಡೆಯಲೇ ಬೇಕಾಗಿದೆ. ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬಲ ತುಂಬ ಬೇಕು ಎಂದರು.
22ಕ್ಕೆ ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ:
ಮಾಜಿ ಶಾಸಕ ಎಚ್.ಪಿ ರಾಜೇಶ್ ಮಾತನಾಡಿ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್ ಮೂರು ಬಾಗಿಲು, ಅಲ್ಲ ಒಂದೆ ಬಾಗೀಲು ಆದರೆ ಬಿಜೆಪಿಯಲ್ಲಿ ಏಕೈಕ ವ್ಯಕ್ತಿ ಟಿಕೇಟ್ ಕೇಳುವವರಿಲ್ಲ. ಅದೊಂದು ಸೋಲುವ ಪಕ್ಷವಾಗಿದೆ.ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಲಿದೆ.
ಪಕ್ಷದ ಸಂಘಟನೆಯಾಗಬೇಕು. ರಾಜ್ಯದಲ್ಲಿ ಯಾವುದೇ ಭ್ರಷ್ಟಚಾರವಿಲ್ಲದೇ ಉತ್ತಮ ಆಡಳಿತ ನೀಡಿದ ಸಿದ್ದರಾಮಯ್ಯನವರ ಹುಟ್ಟು ಹಬ್ಬವನ್ನು ಆಚರಿಸಲಾಗುವುದು. ಆ. 5 ರಂದು ಪಾದಯಾತ್ರೆ ಮೂಲಕ ದಾವಣಗೆರೆಗೆ ತೆರಳಲಾಗುವುದು. ಕೇಂದ್ರದ ತನಿಖಾ ಸಂಸ್ಥೆಗಳಿಂದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಮೇಲೆ ತನಿಖೆ ಸೂಚಿಸಿರುವ ಕೇಂದ್ರ ಸರಕಾರದ ವಿರುದ್ಧ ಬೃಹತ್ ಜುಲೈ 22 ರಂದು ದಾವಣಗೆರೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ, ಜಗಳೂರು ಕಾಂಗ್ರೆಸ್ ಗೆ ತನ್ನದೇಯಾದ ಕೊಡುಗೆ ನೀಡಿದೆ. ರಾಜ್ಯದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸಾರಥ್ಯದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.ವರಿಷ್ಠರ ತೀರ್ಮಾನಕ್ಕೆ ಬದ್ದರಾಗಿ ನಿಲ್ಲುತ್ತವೆ. ಕಾಂಗ್ರೆಸ್ ಐದು ವರ್ಷ ವನವಾಸ ಅನುಭವಿಸಿದೆ, ಹಾಗಾಗಿ ರಾಜ್ಯಕ್ಕೆ ಜನನಾಯಕನ್ನು ಆಯ್ಕೆ ಮಾಡಬೇಕು.
ಡಿ.ಬಸವರಾಜ್ , ಕೆಪಿಸಿಸಿ ಶಿವಮೂರ್ತಿನಾಯ್ಕ, ಎಂ.ಸಿ ವೇಣುಗೋಪಾಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಪಿ. ಪಾಲಯ್ಯ, ಕಲ್ಲೇಶ್‍ರಾಜ್ ಪಾಟೀಲ್, ಮಂಜುನಾಥ್, ಡಿ.ಬಸವರಾಜ್, ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಉಪಸ್ಥಿತರಿದ್ದರು.