ಸುದ್ದಿವಿಜಯ, ಜಗಳೂರು: ಖಚಿತ ಭರವಸೆಗಳೊಂದಿಗೆ ಜನಸಾಮಾನ್ಯರ ಹಿತ ಬಯಸುವಂತ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ನಾವೆಲ್ಲರೂ ಶ್ರಮಿಸಬೇಕು ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಹೇಳಿದರು
ತಾಲ್ಲೂಕಿನ ಅಣಬೂರು ದೊಣ್ಣೆಹಳ್ಳಿ ಜಿಪಂ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಹಾಗು ಖಚಿತ ಭರವಸೆ ಪ್ರಣಾಳಿಕೆ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಬಿ.ಪಿ.ಎಲ್. ಕುಟುಂಬಕ್ಕೆ ತಲಾ 10 ಕೆ.ಜಿ. ಉಚಿತ ಅಕ್ಕಿ , 200 ಯುನಿಟ್ ಉಚಿತ ವಿದ್ಯುತ್, ಹಾಗು ಕುಟುಂಬದ ಮಹಿಳೆಗೆ 2 ಸಾವಿರ ಸಹಾಯ ಧನ ಎಂಬ ಮೂರು ಪ್ರಮುಖ ಸೌಲಭ್ಯಗಳನ್ನ ನೀಡಲು ಪ್ರತಿ ಮನೆ ಮನೆಗೂ ಗ್ಯಾರಂಟಿ ಕಾರ್ಡ್ ವಿತರಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನ ತಳಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತರಲಾಗುವುದು ಎಂದರು.
ಜಗಳೂರು ಪಟ್ಟಣಕ್ಕೆ ಇದೇ 10 ರಂದು ಜನಪ್ರಿಯ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪ್ರಜಾ ಧ್ವನಿ ಕಾರ್ಯಕ್ರಮಕ್ಕಾಗಿ ಸಂಜೆ 6 ಗಂಟೆಗೆ ಆಗಮಿಸಲಿದ್ದಾರೆ. ಅಣಬೂರು ಹಾಗು ದೊಣ್ಣೆಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿ ಗೊಳಿಸಿ ಎಂದು ಮನವಿ ಮಾಡಿದರು.
2013 ರಲ್ಲಿ ನಾನು ಶಾಸಕರಾಗಿದ್ದ ಅವದಿಯಲ್ಲಿ 57 ಕೆರೆ ನೀರು ತುಂಬಿಸುವ ಯೋಜನೆಗೆ ಬಜೆಟ್ ನಲ್ಲಿ ಹಣವನ್ನ ಘೋಷಣೆ ಮಾಡಿಸಿ ಜಾರಿ ಮಾಡಿಸಲಾಗಿತ್ತು ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಸೂಕ್ತ ಮಾರ್ಗ ನಿಗದಿ ಮಾಡಲು ಸರಕಾರದಿಂದ ಉಪ ಸಮಿತಿ ರಚಿಸಲಾಗಿತ್ತು. ಇದರ ಜೊತೆಗೆ 15 ಸಾವಿರ ವಸತಿಗಳು 1200 ಭೂಮಿ ಹಕ್ಕು ಪತ್ರ, ಪಶುಭಾಗ್ಯ ಕೃಷಿಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನ ತಂದು ಅಬಿವೃದ್ದಿ ಪಡಿಸಿದ್ದೆ ಎಂದರು.
ಕ್ಷೇತ್ರದ ಹಾಲಿ ಶಾಸಕ ಎಸ್.ವಿ.ರಾಮಚಂದ್ರ ಸುಳ್ಳಿ ಹೇಳುವ ಮೂಲಕ ಪ್ರಮುಖ ಯೋಜನೆಗಳಿಗೆ ಎಳ್ಳು ನೀರು ಬಿಟ್ಟಿದ್ದಾರೆ. ಐದು ವರ್ಷ ಕಳೆದರೂ ಯಾವೊಂದು ಕೆರೆಗೆ ನೀರು ಬರಲಿಲ್ಲ. ಭದ್ರಾ ಯೋಜನೆ ಮಾರ್ಗವೂ ಸಹ ನಿಗದಿಯಾಗಿಲ್ಲ. ಒಂದೇ ಒಂದು ಮನೆ ಕೊಡಲಾಗಿಲ್ಲ. ಜಲಜೀವನ್ ಮಿಷನ್ ಯೋಜನೆಯಡಿ ಒಂದೇ ಒಂದು ಹನಿ ನೀರು ಬಂದಿಲ್ಲ. ವಸತಿ ಯೋಜನೆ ಸಹ ಇಲ್ಲ. ಕೇವಲ ಸುಳ್ಳಿ ಹೇಳಿ ಕ್ಷೇತ್ರದ ಜನರನ್ನ ವಂಚಿಸಿದ್ದಾರೆ ಎಂದು ಕುಟುಕಿದರು.
ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಮಾತನಾಡಿ, ಸುಳ್ಳುನ ಮನೆಯಲ್ಲಿಯೇ ವಾಸ ಮಾಡುವ ಬಿಜೆಪಿ ಪಕ್ಷದದವರು ಪ್ರದಾನ ಮಂತ್ರಿಯಿಂದ ಕಾರ್ಯ ಕರ್ತರವರಿಗೂ ಬರೀ ಸುಳ್ಳು ಹೇಳುವುದೇ ಇವರ ದೊಡ್ಡ ಕಾಯಕ ಹೊರಗಿನಿಂದ ಬಂದವರು ನಮ್ಮ ಕ್ಷೇತ್ರದ ಜನತೆಗೆ ಭದ್ರಾ ನೀರು ಕುಡಿಸುತ್ತೇನೆ ಎಂದವರು.
ಕೆ.ಪಿ.ಪಾಲಯ್ಯ, ಕೆಪಿಸಿಸಿ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್ , ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಎಸ್.ಕೆ.ರಾಮರೆಡ್ಡಿ ,ಮಾಜಿ ತಾ.ಪಂ.ಸದಸ್ಯ ಎಸ್ .ಬಿ.ಕುಬೇಂದ್ರಪ್ಪ ,
ಅಣಬೂರು ಗ್ರಾ.ಪಂ.ಅಧ್ಯಕ್ಷೆ ಕವಿತಾ ರೇಣುಕೇಶ್ ಹಿರೇಮಲ್ಲನಹೊಳೆ ಗ್ರಾ.ಪಂ.ಉಪಾಧ್ಯಕ್ಷ ಅನೂಪ್ ರೆಡ್ಡಿ , ಪಂಚಾಯತಿ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರಹ್ಲಾದ್ ಗೌಡ , ಚಿತ್ತಪ್ಪ , ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕೆಂಚೋಳ್ , ಮಹಿಳಾ ಕಾರ್ಯದರ್ಶಿ ಸಾವಿತ್ರಮ್ಮ , ಪಲ್ಲಾಗಟ್ಟೆ ಶೇಖರಪ್ಪ , ಸಿ.ತಿಪ್ಪೇಸ್ವಾಮಿ ಸೇರಿದಂತೆ ಹಲವು ಮುಖಂಡರು ಇದ್ದರು.