ಸುದ್ದಿವಿಜಯ, ಜಗಳೂರು: ತಂತ್ರಜ್ಞಾನ ಬೆಳೆದಂತೆ ಮಹಿಳೆಯರು ಯಾಂತ್ರಿಕ ಬದುಕು ಸಾಗಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಚಿತ್ರದುರ್ಗ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಗುರುಭವನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಟ್ರಸ್ಟ್ ವತಿಯಿಂದ ಶನಿವಾರ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೂರ್ವಜರ ಕಾಲದ ಗೃಹಿಣಿಯರು ಅಡುಗೆಮನೆ ಕೆಲಸ ಕೃಷಿ ಚಟುವಟಿಕೆಗಳಲ್ಲಿ ಸದಾ ನಿರತಾಗಿರುತ್ತಿದ್ದರು.ಆದರೆ ಪ್ರಸಕ್ತವಾಗಿ ಮಹಿಳೆಯರು ಯಂತ್ರೋಪಕರಣಗಳ ಮೇಲೆ ಅವಲಂಬಿತರಾಗಿ ಸೋಮಾರಿಗಳಾಗುತ್ತಿರುವುದಲ್ಲದೆ ಆರೋಗ್ಯವಂತರ ಸಂಖ್ಯೆ ಕ್ರಮೇಣ ಕ್ಷೀಣಿಸುತ್ತಿದೆ.ಅಲ್ಲದೆ ಮೊಬೈಲ್, ಟಿವಿ, ಮಹಿಳೆಯರ ಮಕ್ಕಳ ಸುಂದರ ಬದುಕನ್ನು ಕಸಿದುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರು ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮೈಗೋಡಿಸಿಕೊಳ್ಳಿ,ಮಕ್ಕಳನ್ನು ಮೊಬೈಲ್ ನಿಂದ ದೂರವಿಟ್ಟು ಪುಸ್ತಕ ಅಭ್ಯಾಸ ರೂಢಿಸಬೇಕು ಹಾಗೂ ತಾಯಂದಿರ ಕಷ್ಟಗಳನ್ನುಮಕ್ಕಳಿಗೆ ಮನವರಿಕೆ ಮಾಡಬೇಕು.ಆತ್ಮಹತ್ಯೆಯತ್ತ ಮುಖಮಾಡುವುದನ್ನು ತಡೆಗಟ್ಟಬೇಕು ಎಂದು ಕಿವಿಮಾತು ಹೇಳಿದರು.
ಆತ್ಮವಿಶ್ವಾಸ ಗಳಿಸಲು ಸಜ್ಜನರ ಸಹವಾಸ ಮಾಡಿ ಕುಟುಂಬದ ಸದಸ್ಯರನ್ನು,ನೆರೆಹೊರೆಯವರನ್ನು ಪ್ರೀತಿಸುವ ಗುಣ ಮೈಗೂಡಿಸಿಕೊಂಡು ಸರಳ ಜೀವನ ಸಾಗಿಸಿದಾಗ ಮಹಿಳಾ ಸಬಲೀಕರಣ ಸಾಧ್ಯ.ಧರ್ಮಸ್ಥ ಗ್ರಾಮೀಣಾಭಿವೃದ್ದಿ ಸಂಘದಿಂದ ಸಾಲ ಸೌಲಭ್ಯ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಿ ಆರ್ಥಿಕ ಸ್ವಾವಲಂಬಿಗಳಾಗಿ ಎಂದು ಸಲಹೆ ನೀಡಿದರು.

ಉಪನ್ಯಾಸಕಿ ಸ್ವಪ್ನ ಸಂಸ್ಕøತಿ ಮತ್ತು ಸಂಸ್ಕಾರ ವಿಷಯ ಕುರಿತು ಉಪನ್ಯಾಸ ನೀಡಿ,ಸಮಾಜದಲ್ಲಿ ಉತ್ತಮ ನಡತೆಯಿಂದ ಪರಿಶ್ರಮದಿಂದ ಪರಿಪಕ್ವತೆಪಡೆದು ಮಾನವನಾದರೆ ಅದು ಸಂಸ್ಕೃತಿ.ಜೀವನದಲ್ಲಿ ಅನುಕರಣೆ ತೊರೆದು ಧರ್ಮದ ಮೂಲ ತತ್ವಗಳನ್ನು ಅಳವಡಿಸಿಕೊಂಡರೆ ಅದೇ ಸಂಸ್ಕೃತಿ ಎಂದು ಪ್ರತಿಪಾದಿಸಿದರು.
ಕಾನೂನು ಸಲಹೆಗಾರ್ತಿ ಎಂ.ಎನ್.ಮಧುರಾ ಮಾತನಾಡಿ,ಜಿಲ್ಲೆಯಲ್ಲಿ ಜಗಳೂರಿನಿಂದ ಹೆಚ್ಚು ಫೆÇಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ.ಮಹಿಳೆಯರು ಮಕ್ಕಳ ಬಗ್ಗೆ ಕಾಳಜಿವಹಿಸಬೇಕು.ಜ್ಞಾನ ವಿಕಾಸ ಕಾರ್ಯಕ್ರಮದ ವಿಷಯಗಳು ಮಕ್ಕಳಿಗೂ ಅನ್ವಯವಾಗಬೇಕು.ಮಹಿಳೆಯರು ವಿಚ್ಛೇದನದ ಬಗ್ಗೆ ಚಿಂತಿಸದೆ ಕೌಟುಂಬಿಕವಾಗಿ ಹೊಂದಾಣಿಕೆ ಜೀವನ ನಡೆಸಬೇಕು.ಲೈಂಗಿಕ ದೌರ್ಜನ್ಯಗಳಿಂದ ಜಾಗೃತರಾಗಬೇಕು ಕಾನೂನು ಅರಿವು ಅಗತ್ಯ ಎಂದರು.
ಇದೇ ವೇಳೆ ವೇದಿಕೆಯಲ್ಲಿ ಕುಂಭಗಳ ಅಲಂಕೃತ,ಸಿರಿಧಾನ್ಯ ಪ್ರದರ್ಶನ,ರಂಗೋಲಿ, ಸಾಂಸ್ಕøತೀಕ ಕಾರ್ಯಕ್ರಮ ಸ್ಪರ್ಧೆ ವಿಜೇತರಿಗೆ ,ಉತ್ತಮ ಕೇಂದ್ರ, ವಿಜೇತರಿಗೆ ಪ್ರಶಸ್ತಿ ವಿತರಿಸಿದರು.
ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್,ಜಿಲ್ಲಾ ನಿರ್ದೇಶಕ ಎಸ್.ಜನಾರ್ಧನ್, ಪ್ರಾದೇಶಿಕ ಸಮನ್ವಯ ಅಧಿಕಾರಿ ಅನುಷಾ, ಜಿಲ್ಲಾ ಜಾಗೃತಿ ವೇದಿಕೆ ಉಪಾಧ್ಯಕ್ಷ ಡಾ.ಪಿ.ಎಸ್.ಅರವಿಂದನ್, ಯೋಜನಾಧಿಕಾರಿ ಗಣೇಶ್ ನಾಯ್ಕ, ಪ.ಪಂ ಚೀಫ್ ಆಫೀಸರ್ ಲೊಕ್ಯಾನಾಯ್ಕ, ಫಾದರ್ ವಿಲಿಯಂ ಮಿರಾಂದ,
ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.