Suddivijaya| kannada News|08-04-2023
ಸುದ್ದಿವಿಜಯ,ಜಗಳೂರು:ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಕಡೆಗಣಿಸಿದ್ದರಿಂದ ಪ್ರಧಾನಮಂತ್ರಿ ಸ್ಥಾನದಿಂದ ವಂಚಿತರಾದರು ಎಂದು ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಸಂಚಾಲಕ ಮಹೇಂದ್ರ ಕೌತಲ ಟೀಕಿಸಿದರು.
ಜಗಳೂರಿನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಶನಿವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಎಸ್ಸಿ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದರು.
ದಲಿತರ ಸೂರ್ಯ ಅಂಬೇಡ್ಕರ್ ಭಾರತ ಸಂವಿಧಾನ ಬರೆದ ನಂತರವೇ ಎಸ್ಸಿ ಸಮುದಾಯಗಳು ಎಲ್ಲರಂತೆ ಸಮಾನತೆಯಿಂದ ಬದುಕ ಅರ್ಹತೆ ಪಡೆದುಕೊಂಡರು.
ಇಂತಹ ನಾಯಕನಿಗೆ ಕಾಂಗ್ರೆಸ್ ಸಾಥ್ ನೀಡದೇ ಆತನನ್ನೇ ಸೋಲಿಸಿ ಮೋಸ ಮಾಡಿದ್ದಾರೆ ಇಂತವರಿಗೆ ಮತ ಹಾಕುವುದು ಸರಿನಾ ಎಂದು ಪ್ರಶ್ನಿಸಿದರು.
ಪ್ರಧಾನ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಅಂಬೇಡ್ಕರ್ ಅವರು ಹುಟ್ಟಿದ ಸ್ಥಳ, ಸಮಾಧಿ ಸೇರಿದಂತೆ ಆತನ ಎಲ್ಲಾ ಸ್ಥಳಗಳನ್ನು ಅಭಿವೃದ್ದಿ ಪಡಿಸಿ ದೇಶದ ಗಮನ ಸೆಳೆಯುವಂತೆ ಮಾಡಿದ್ದಾರೆ ಎಂದರು.
ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ಸುಮಾರು ವರ್ಷಗಳಿಂದಲೂ ನೆನಗುದಿಯಲ್ಲಿದ್ದ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಯನ್ನು ಎಸ್ಸಿ ಸಮುದಾಯ ಆಶಯದಂತೆಯೇ ನಿರ್ಮಿಸಲಾಗಿದೆ.
ಬಾಬು ಜಗಜೀವನ್ ರಾಂ ಹಾಗೂ ಅಂಬೇಡ್ಕರ್ ಭವನ ನಿರ್ಮಿಸಿದ್ದೇನೆ. ಇದನ್ನು ಯಾವ ಶಾಸಕರು ಮಾಡಿರಲಿಲ್ಲ ಇದು ಬಿಜೆಪಿ ಸರ್ಕಾರದ ಕಾಳಾಜಿ ಎಂದರು.
ಕ್ಷೇತ್ರದಲ್ಲಿ ಯಾರು ಚನ್ನಾಗಿ ಕೆಲಸ ಮಾಡಿದ್ದಾರೆಂದು ಗುರುತಿಸಿ ಮತ ಹಾಕಿ, ಐದು ವರ್ಷಗಳಲ್ಲಿ ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ನೀಡಲಾಗಿದೆ. ಕುಡಿಯುವ ನೀರಿಗೆ ಒತ್ತು ನೀಡಲಾಗಿದೆ.
ಕೆರೆಗಳಿಗೆ ತುಂಬಿಸುವ ಯೋಜನೆ ಜಾರಿಗೆ ತಂದಿದ್ದೇವೆ. 46 ಸಾವಿರ ಎಕರೆ ಪ್ರದೇಶಕ್ಕೆ ಭದ್ರಾ ಮೇಲ್ದಂಡೆಯಿಂದ ನೀರಾವರಿ ಪ್ರದೇಶ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆದ್ದರಿಂದ ಜಗಳೂರು ಕ್ಷೇತ್ರದಿಂದ ನನ್ನ ಮೇಲೆ ನಿಮ್ಮ ಆಶೀರ್ವಾದ ವಿರಲಿ ಎಂದು ಮನವಿ ಮಾಡಿದರು.
ಎಸ್ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಹನುಮಂತನಾಯ್ಕ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಕೊಟ್ಟು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದೆ ಎಂದರು.
ರಾಜ್ಯ ಸಂಚಾಲಕಿ ದ್ರಾವಿಡ ಭಾರ್ಗವಿ ಮಾತನಾಡಿ, ಶೌಚಾಲಯ ನೀಡಿ ಮಹಿಳೆಯರನ್ನು ಗೌರವದಿಂದ ಕಾಪಾಡಿದ ಪಕ್ಷ ಬಿಜೆಪಿಯಾಗಿದೆ.
ನೂರಾರು ವರ್ಷಗಳ ಕಾಲ ಆಡಳಿತ ನಡೆಸಿದ ಸರ್ಕಾರ ಬಡವ ಕಷ್ಟಗಳಿಗೆ ಧ್ವನಿಯಾಗದೇ ಸ್ವಾರ್ಥಕ್ಕಾಗಿ ಬದುಕಿದರು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಪ್ರತಿಯೊಬ್ಬರನ್ನು ಸಮಾನತೆಯಿಂದ ತೆಗೆದುಕೊಂಡು ಹೋಗುತ್ತಿದೆ ಎಂದರು.
ಚುನಾವಣಾ ಉಸ್ತುವಾರಿ ಆರುಂಡಿ ನಾಗರಾಜ್ ಮಾತನಾಡಿ,ಅಭಿವೃದ್ದಿ ಪಥದತ್ತ ಕೊಂಡೊಯ್ಯುತ್ತಿರುವ ಬಿಜೆಪಿ ಸರ್ಕಾರವನ್ನು ಬೆಂಬಲಿಸಿ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು. ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಬುದ್ದಿ ಕಲಿಸಬೇಕು ಎಂದರು.
ಮಾಯಕೊಂಡ ಶಾಸಕ ಪ್ರೊ.ಲಿಂಗಪ್ಪ ಮಾತನಾಡಿ, ಅಂಬೇಡ್ಕರ್ ಸಂವಿಧಾನದ ಮೂಲಕ ಕೊಟ್ಟಿರುವ ಮೂಲಭೂತ ಹಕ್ಕು, ಸಮಾತನತೆಯನ್ನು ಪಾಲಿಸಬೇಕು. ಕಾಂಗ್ರೆಸ್ ಪಕ್ಷ ಕೇವಲ ಆಶ್ವಾಸನೆ ನೀಡುತ್ತಾ ಮೂಗಿಗೆ ತುಪ್ಪು ಹಚ್ಚುತ್ತಾ ಬಂದಿದೆ.
ಸಮಾಜಕ್ಕೆ ನ್ಯಾಯ ಕಲ್ಪಿಸುತ್ತಿರುವ ನರೇಂದ್ರ ಮೋದಿ ನಮಗೆ ಅವಶ್ಯಕವಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಎಚ್.ಸಿ ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ನಾಗರಾಜ್, ಉಪಾಧ್ಯಕ್ಷ ಡಿ.ವಿ ನಾಗಪ್ಪ, ಎಸ್ಸಿ ಮೋರ್ಚಾ ತಾಲೂಕಾಧ್ಯಕ್ಷ ರಾಜೇಶ್, ಒಬಿಸಿ ಮೋರ್ಚಾ ಅಧ್ಯಕ್ಷ ಇಂದ್ರೇಶ್, ಮುಖಂಡರಾದ ಬಿಸ್ತುವಳ್ಳಿ ಬಾಬು, ಪ.ಪಂ ಸದಸ್ಯ ದೇವರಾಜ್, ಪೂಜಾರಿ ಸಿದ್ದಪ್ಪ, ಹನುಮಂತಪ್ಪ ಸೇರಿದಂತೆ ಮತ್ತಿತರಿದ್ದರು.