ಸುದ್ದಿವಿಜಯ ಜಗಳೂರು: ಶಿಕ್ಷಣದಿಂದಲೇ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತುಗಳನ್ನು ಶಿರಸಾ ಪಾಲಿಸಿಕೊಂಡು ಬಂದಿರವ ಇಲ್ಲಿನ ಅಂಬೇಡ್ಕರ್ ಶಾಲಾ ಮಕ್ಕಳ ಸಾಧನೆ ಶ್ಲಾಘನೀಯ ಎಂದು ತಾಲೂಕು ಬಿಇಒ ಬಿ. ಉಮಾದೇವಿ ಹೇಳಿದರು.
ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ಶಾಲೆಯಲ್ಲಿ 20020-01ನೇ ಸಾಲಿನಲ್ಲಿ ವಿದ್ಯಾಭ್ಯಾಸ ಕಲಿತ ಹಳೆಯ ವಿದ್ಯಾರ್ಥಿಗಳು ಶುಕ್ರವಾರ ಆಯೋಜಿಸಿದ್ದ ಗುರುವಂದನಾ ಹಾಗೂ ಸಹಪಾಟಿಗಳ ಸ್ನೇಹ ಸಮ್ಮಿಲನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ದೇಶ- ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಶಾಲೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಾರೆ ಎಂದು ಮುಚ್ಚುಗೆ ವ್ಯಕ್ತಪಡಿಸಿದರು.
ಈ ಹಿಂದೆ ಶಿಕ್ಷಣ ಕಲಿಸಿದ ಗುರುಗಳನ್ನು ಮರೆಯದೇ ಇಪ್ಪತ್ತೊಂದು ವರ್ಷಗಳ ನಂತರ ವಂದನೆ ಕಾರ್ಯಕ್ರಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಕಲಿತ ವಿದ್ಯಾರ್ಥಿಗಳ ಶಾಲೆಯ ಅಭಿವೃದ್ದಿಗೆ ಕೈ ಜೋಡಿಸಿ ಮುಂದಿನ ಪೀಳಿಗೆಗೆ ಮಾದರಿಯಾಗಿ ಎಂದು ಸಲಹೆ ನೀಡಿದರು.
ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್. ಸಂದೀಪ್ ಮಾತನಾಡಿ, ಇತ್ತೀಚಿನ ಶೈಕ್ಷಣಿಕ ಕ್ಷೇತ್ರದಲ್ಲಿ ಗುರು-ಶಿಷ್ಯರ ಸಂಬಂಧ ಅಷ್ಟೊಂದು ಚನ್ನಾಗಿಲ್ಲ, ಆಧುನಿಕ ಶಿಕ್ಷಣ ಪದ್ದತಿಯಿಂದ ಕೇವಲ ಪಠ್ಯಕ್ಕೆ ಮತ್ತು ಅಂಕ ಗಳಿಕೆಗೆ ವಿದ್ಯಾರ್ಥಿಗಳು ಸೀಮಿತವಾಗಿದ್ದಾರೆ. ಆದರೆ ಎರಡು ದಶಕಗಳ ಹಿಂದೆ ಕಲಿತ ವಿದ್ಯಾರ್ಥಿಗಳು ಗುರುಗಳ ಋಣ ತೀರಿಸಲು ಒಗ್ಗಟ್ಟಾಗಿ ಕೂಡಿ ಬಂದಿರುವುದು ಅವಿಸ್ಮರಣಿಯ, ಈ ಕಾರ್ಯಕ್ರಮ ಮತ್ತೊಂದು ಶಾಲೆಗೆ ಮಾದರಿಯಾಗಿರಲಿ ಎಂದರು.
ಪ್ರಬಾರ ಕ್ಷೇತ್ರ ಸಮನ್ವಯಾಧಿಕಾರಿ ಡಿ.ಡಿ ಹಾಲಪ್ಪ ಮಾತನಾಡಿ,ಗುರುಸ್ಥಾನವನ್ನು ಪಡೆದ ಶಿಕ್ಷಕರೆಲ್ಲರು ಧನ್ಯರು, ಮಕ್ಕಳು ಜೀವನದಲ್ಲಿ ಬೆಳೆಸಿಕೊಳ್ಳುತ್ತಿರುವ ಮೌಲ್ಯಗಳು, ಶೈಕ್ಷಣಿಕ ಪ್ರಗತಿಗಳ ಹಿಂದೆ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ವಿದ್ಯಾರ್ಥಿಗಳು ಹೂವುಗಳಾಗಿ ಬೇರೆ ಬೇರೆ ಸ್ಥಳಗಳಲ್ಲಿ ಅಲಂಕರಿಸಿದರೆ, ಬಳ್ಳಿಯಾಗಿರುವ ಶಿಕ್ಷಕರು ಯಾವಾಗಲೂ ಒಂದೇ ಸ್ಥಳದಲ್ಲಿದ್ದು ಆನಂದಪಡುತ್ತಾರೆ ಎಂದರು.
ಮುಖ್ಯೋಪಾಧ್ಯಾಯರು ಎಸ್.ಎನ್ ಬಾಬು ರೆಡ್ಡಿ ಮಾತನಾಡಿ, ಬದುಕಲ್ಲಿ ಎಷ್ಟೆ ಕಷ್ಟವಿದ್ದರು ನಗು ನಗುತಾ ಮಕ್ಕಳಿಗೆ ಆಟ, ಪಾಠಗಳನ್ನು ಕಲಿಸುವುದೇ ಶಿಕ್ಷಕನ ನಿಜವಾದ ಸೇವೆಯಾಗಿದೆ, ಶಾಲೆ ಆರಂಭದಲ್ಲಿ ಯಾವುದೇ ಭೌತಿಕ ಸೌಲಭ್ಯಗಳಿಲ್ಲದೇ ಆರಂಭಿಸಿ 37 ವರ್ಷಗಳನ್ನು ಪೂರೈಸಿ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಬೆಳಕು ನೀಡಿದೆ. ಉನ್ನತ ಸ್ಥಾನದಲ್ಲಿರುವ ಹಳೆ ವಿದ್ಯಾರ್ಥಿಗಳನ್ನು ಕಂಡಾಗ ತುಂಬ ಸಂತೋಷವಾಗುತ್ತದೆ ಎಂದರು.
ಹಳೆ ವಿದ್ಯಾರ್ಥಿ ಎಸ್. ಸಂಜಯ್‍ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡರು. ನಿವೃತ್ತ ಶಿಕ್ಷಕ ಎಸ್.ಕೆ ನಾಗರಾಜು, ಜೆ.ಪಿ ವಿನಯ್‍ಕುಮಾರ್, ಶಿಕ್ಷಕರಾದಎಲ್.ಟಿ ಬಸವರಾಜ್, ಕೆ. ಬಸವರಾಜ, ಪಿ ತಿಪ್ಪೇಸ್ವಾಮಿ, ಎಂ. ಸಾಯಿನಾಥ್, ಪುಟ್ಟಣ್ಣರೆಡ್ಡಿ, ಎ.ಕೆ ಚಂದ್ರಮ್ಮ, ಎಸ್. ಮಂಜುನಾಥ್ ಇವರನ್ನು ಹಳೆ ವಿದ್ಯಾರ್ಥಿಗಳು ಸನ್ಮಾನಿಸಿ ಗುರು ವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಎಸ್. ಸಂಜಯ್‍ಕುಮಾರ್, ಎಂ.ಜಿ ಕರಿವೀರಬಾಬು, ಸಿ.ಎನ್ ಲಕ್ಷ್ಮೀಪತಿ, ಶರಣೇಶ್, ಏಳುಕೋಟೆ, ಎಂ.ರಮೇಶ್, ರಾಮಪ್ಪ, ಸಿ. ಕರಿಬಸಜ್ಜಯ್ಯ, ಎಸ್. ನಿಜಲಿಂಗಪ್ಪ, ಪಿ.ಸುರನೀತಾಮ ಚಂದ್ರ ಗೋಸಾಯಿ, ಲೋಕೇಶ್, ಸಿಬ್ಬಂದಿಗಳಾದ ವಿ. ಮಲ್ಲೇಶ್, ಎಂ.ಒ ನಾಗೇಂದ್ರಪ್ಪ, ಟಿ.ವೈ ಶಿವಣ್ಣ ಎಂ.ಬಿ ಹನಮಂತಪ್ಪ ಇದ್ದರು.