ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಶುರು, ಕ್ಷೇತ್ರದ ಇನ್‍ಸೈಡ್ ರಿಪೋಟ್

Suddivijaya
Suddivijaya March 19, 2023
Updated 2023/03/19 at 11:10 AM

ಸುದಿವಿಜಯ, ಜಗಳೂರು(ವಿಶೇಷ): ಇಡೀ ಏಷ್ಯಾ ಖಂಡದಲ್ಲೇ ಎಲ್ಲೂ ಇಲ್ಲದ ಅಪರೂಪ ಪ್ರಭೇದದ ಕೊಂಡು ಕುರಿ ಇರುವ ಏಕೈಕ ಕ್ಷೇತ್ರ ಎಂದರೆ ಅದು ಜಗಳೂರು. ಹಾಗಾಗಿ ಈ ಕ್ಷೇತ್ರವನ್ನು ಕೊಂಡುಕುರಿನಾಡು ಎಂದೇ ಫೇಮಸ್ ಆಗಿರುವ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ರಿಂಗಣಿಸಲು ಆರಂಭವಾಗಿದೆ. ಇಲ್ಲಿ ಏನಿದ್ದರೂ ಕಾಂಗ್ರೆಸ್, ಬಿಜೆಪಿ ಮಧ್ಯೆ ಹಣಾಹಣಿ. ಜೆಡಿಎಸ್ ನಾಯಕರು ಕಾದು ನೋಡವ ತಂತ್ರದಲ್ಲಿದ್ದಾರೆ.

ಬಿಜೆಪಿ ಅಭ್ಯರ್ಥಿಯಿಂದ ಅಭಿವೃದ್ಧಿ ಜಪ:

ಶಾಸಕರು ಆಗಿರಿರುವ ರಾಜ್ಯ ವಾಲ್ಮೀಕಿ ನಿಗದಮ ಅಧ್ಯಕ್ಷ ಎಸ್.ವಿ.ರಾಮಚಂದ್ರ ಅವರು ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಈಗಾಗಲೇ ಭದ್ರಾಮೇಲ್ದಂಡೆ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ಎರಡು ಬಾರಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಕರೆಸಿ ಯಾರೂ ಮಾಡದಂತ ಅದ್ಧೂರಿ ಕಾರ್ಯಕ್ರಮ ಮಾಡಿ ಜನ ಮಾನಸದಲ್ಲಿ ಬಿಜೆಪಿ ಸರಕಾರದ ಸಾಧನೆಗಳನ್ನು ಬಿತ್ತಿ ಮತ ಭಿಕ್ಷೆಗೆ ರೆಡಿಯಾಗಿದ್ದಾರೆ.

57 ಕೆರೆ ತುಂಬಿಸುವ ಯೋಜನೆಗೆ ಹೆಚ್ಚು ಹಣ ಸರಕಾರದಿಂದ ತಂದವನು ಈ ಜಗಳೂರಿನ ಹೆಮ್ಮೆಯ ಮಗ ಎಂದು ಕಾರ್ಯಕ್ರಮದಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಜೊತೆಗೆ ಬಹುಗ್ರಾಮ ಕುಡಿಯುವ ನೀರಿನ 482 ಕೋಟಿ ರೂಗಳ ಯೋಜನೆ ತಂದು ಮನೆ ಮನೆಗೆ ಗಂಗೆ ಹರಿಸುತ್ತೇನೆ ಎಂದು ವಚನ ನೀಡುವ ಮೂಲಕ ಜನರನ್ನು ಆಕರ್ಷಿಸುವ ಮಾತುಗಳು ಶಾಸಕರಿಂದ ಬರುತ್ತಿವೆ.

ರಸ್ತೆ, ನೀರು, ಸೂರು, ಸಾರಿಗೆ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಹೇಳಿ ಮತ ಕೇಳಲು ರೆಡಿಯಾಗಿರುವ ಶಾಸಕರಿಗೆ ಎದುರಾಳಿ ಕಾಂಗ್ರೆಸ್‍ನ ಆರು ಬಾಣಗಳು ರಾಮ ಬಾಣದಂತೆ ಪುಂಕಾನುಪುಂಕವಾಗಿ ಟಾಂಟ್ ಕೊಡಲು ರೆಡಿಯಾಗಿವೆ.

ಇಷ್ಟು ದಿನ ಕ್ಷೇತ್ರದಲ್ಲಿ ರಾಮಚಂದ್ರ ಅವರಿಗೆ ಸ್ವಪಕ್ಷದಲ್ಲಿ ಟಿಕೆಟ್ ಕೇಳುವ ಯಾವೊಬ್ಬ ಅಭ್ಯರ್ಥಿ ಹುಟ್ಟಿಕೊಂಡಿರಲಿಲ್ಲ. ಈಗ ಪೊಲೀಸ್ ಅಧಿಕಾರಿಯಾಗಿದ್ದ ಕಲ್ಲೇಶಪ್ಪ ಅವರು ಬಿಜೆಪಿ ವರಿಷ್ಠರನ್ನು ಟಿಕೆಟ್ ಕೇಳಿ ತಿಳಿಯಾದ ಕೊಳದಲ್ಲಿ ‘ಕಲ್ಲೆಸೆದು’ ಅಲೆಗಳನ್ನು ಸೃಷ್ಟಿಸಿದ್ದಾರೆ.

ಆದರೆ ಅವರಿಗೆ ಟಿಕೆಟ್ ಸಿಗುತ್ತದೋ ಬಿಡುತ್ತದೋ ವರಿಷ್ಠರಿಗೆ ಬಿಟ್ಟವಿಚಾರ. ಇನ್ನು ಎಸ್.ವಿ.ರಾಮಚಂದ್ರ ಅವರು ಟಿಕೆಟ್ ತಂದೇ ತರುತ್ತೇನೆ ಎಂಬ ಧೈರ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ.

ಶತಾಯ ಗತಾಯ ಗೆಲ್ಲಲು ಕಾಂಗ್ರೆಸ್ ಸಿದ್ದ:
ಇನ್ನು ಕಾಂಗ್ರೆಸ್‍ನಲ್ಲಿ ಆರು ಜನ ನಾಕರು ಟಿಕೆಟ್ ಬೇಡಿಕೆಯಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಟಿಕೆಟ್‍ಗಾಗಿ ಅರ್ಜಿಸಲ್ಲಿಸಿದವರ ಮುಂಚೂಣೆಯಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಮೊದಲಿಗರು. ಎರಡನೆಯ ವ್ಯಕ್ತಿ ಟಿಕೆಟ್‍ಗಾಗಿ ಪಟ್ಟುಹಿಡಿದು ಕುಳಿತವರಲ್ಲಿ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ, ಕೆಪಿಸಿಸಿ ಎಸ್‍ಟಿ ಘಟಕದ ಅಧ್ಯಕ್ಷ ಪಾಲಯ್ಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸೋತ ಸೇಡನ್ನು ತೀರಿಸಿಕೊಳ್ಳಲು ಕಂಕಣಬದ್ಧರಾಗಿದ್ದಾರೆ.

ಜನಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ ಬಂದು ಮಾತನಾಡುವ ವೇದಿಕೆಯಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಸೇರಿ ಎಲ್ಲರನ್ನೂ ಒಟ್ಟಿಗೆ ವೇದಿಕೆ ಮೇಲೆ ನಿಲ್ಲಿಸಿ ನಾವು ಯಾರಿಗೆ ಟಿಕೆಟ್ ಕೊಟ್ಟರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಸೂಚಿಸಿದ್ದರು. ಅದು ಎಷ್ಟು ಪರಿಪಾಲನೆಯಾಗುತ್ತದೋ ಕಾದು ನೋಡಬೇಕು.

ಚಕ್ರಕಟ್ಟಿಕೊಂಡವರೆಂತೆ ಕ್ಷೇತ್ರ ಸುತ್ತುತ್ತಿರುವ ನಾಯಕರು:
ಬಿಜೆಪಿ ಶಾಸಕ ಎಸ್.ವಿ.ರಾಮಚಂದ್ರ, ಮಾಜಿ ಶಾಸಕ ಎಚ್.ಪಿ.ರಾಜೇಶ್, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಕೆ.ಪಿ.ಪಾಲಯ್ಯ ಸೇರಿದಂತೆ ಎಲ್ಲ ಅಭ್ಯರ್ಥಿಗಳು ಮತ ಭಿಕ್ಷೆ ಕೇಳಲು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಕ್ಷೇತ್ರದಾದ್ಯಂತೆ ಸುತ್ತುತ್ತಿದ್ದಾರೆ. ತಮ್ಮ ಹಕ್ಕುನ್ನು ಯಾರಿಗೆ ಕೊಡಬೇಕು ಎಂದು ಮತದಾರರು ಇನ್ನೂ ಗೊಂಲದಲ್ಲಿದ್ದಾರೆ.

ವೋಟ್ ಬ್ಯಾಂಕ್‍ನಲ್ಲಿ ಅರಸಿಕೆರೆ ಹೋಬಳಿಯ 7 ಗ್ರಾಪಂಗಳೇ ನಿರ್ಣಾಯಕ ಎಂಬ ಸತ್ಯ ಎಲ್ಲ ಪಕ್ಷಗಳ ಅಭ್ಯರ್ಥಿಗೆ ತಿಳಿದ ವಿಷಯ. ಹೀಗಾಗಿ ಎಲ್ಲ ಗ್ರಾಪಂಗಳಾದ ಅನಜೀಗೆರೆ, ಉಚ್ಚಂಗಿದುರ್ಗ, ಚಟ್ನಳ್ಳಿ, ತೌಡೂರು, ಪುಣಭಗಟ್ಟ, ಅರಸೀಕೆರೆ ಗ್ರಾಪಂಗಳಲ್ಲಿ ಮದುವೆ, ತಿಥಿ, ಜಾತ್ರೆ, ನಾಟಕ ಈಗೆ ಏನೇ ಸಮಾರಂಭಗಳಾದರೂ ಚುನಾವಣೆ ಹೊಸ್ತಿಲಲ್ಲಿರುವುದರಿಂದ ಅಲ್ಲಿ ಎಲ್ಲ ಪಕ್ಷಗಳ ನಾಯಕರು ಹಾಜರಿದ್ದು ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿದ್ದಾರೆ.

           

ಜೆಡಿಎಸ್ ಕಾದು ನೋಡುವ ತಂತ್ರ:
ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಯಾವುದೇ ಅಭ್ಯರ್ಥಿಯನ್ನು ಇನ್ನೂ ಸೂಚಿಸಿಲ್ಲ. ವರಿಷ್ಠರು ಕಾದು ನೋಡುವ ತಂತ್ರದಲ್ಲಿದ್ದಾರೆ. ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್ ಸಿಗದ ಅಭ್ಯರ್ಥಿಗಳ ಅಸಮಾಧಾನ ಸ್ಪೋಟಗೊಂಡರೆ ಅವರಿಗೆ ಟಿಕೆಟ್ ಕೊಟ್ಟು ನಿಲ್ಲಿಸುವ ತಂತ್ರದಲ್ಲಿದ್ದಾರೆ.

ಇನ್ನು ರಾಷ್ಟ್ರೀಯ ಪಕ್ಷವಾಗಿರುವ ಆಮ್ ಆದ್ಮಿ ಪಕ್ಷದಿಂದ ಗೋವಿಂದರಾಜು ಅವರು ಸದ್ದಿಲ್ಲದೇ ತಮ್ಮ ಪಕ್ಷದ ಅಜೆಂಡಾಗಳನ್ನು, ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಇತ್ತೀಚೆಗೆ ದಾವಣಗೆರೆ ಜಿಲ್ಲೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಗಮಿಸಿ ಯುವ ಪಡೆಯಲ್ಲಿ ವಿದ್ಯುತ್ ಸಂಚಲನ ಮೂಡಿಸಿದ್ದರು. ರಾಜ್ಯ ಸರಕಾರ ಕೇಂದ್ರ ಸರಕಾರದ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನು ಕೇವಲ ಏಳು ದಿನಗಳ ಒಳಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಯಿದೆ. ಈಗಾಗಲೇ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರದಾದ್ಯಂತ ಸಂಚಾರ ಚುನಾವಣಾ ಪ್ರಚಾರದ ಮುನ್ನುಡಿಯಾಗಿದೆ.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!