ಜಗಳೂರು: ಚುನಾವಣಾ ಮತದಾರರ ಜಾಗೃತಿ ತರಬೇತಿಗೆ ಕಾರ್ಯಾಗಾರದಲ್ಲಿ ಬಿಎಲ್‍ಓಗಳ ಅಸಮಾಧಾನ

Suddivijaya
Suddivijaya March 14, 2023
Updated 2023/03/14 at 2:47 PM

ಸುದ್ದಿವಿಜಯ, ಜಗಳೂರು: ಮುಂಬರುವ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದ ಮತದಾರರ ಜಾಗೃತಿ ತರಬೇತಿಗೆ ಸಂಬಂಧಿಸಿದಂತೆ ಮಂಗಳವಾರ ತಾಲೂಕಿನ ಬಿಎಲ್‍ಓಗಳು, ಇಎಲ್‍ಸಿ ಹಾಗೂ ಕಾಲೇಜುಗಳ ಕ್ಯಾಂಪಸ್ ಅಂಬಾಸಡರ್ರ್ಸಗಳ ಸಭೆ ನಡೆಯಿತು.

ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದೊಂದಿಗೆ ಮತದಾರರ ಸಾಕ್ಷರತಾ ಸಂಘಗಳ ಹಾಗೂ ಮತಗಟ್ಟೆ ಅಧಿಕಾರಿಗಳ ತಾಲೂಕು ಮಟ್ಟದ ಹಾಗೂ ಹೋಬಳಿ ಮಟ್ಟದ ತರಬೇತುದಾರರ ಕಾರ್ಯಗಾರವನ್ನು ಎಂದು ಪ್ರಭಾರಿ ಇ ಓ ಚಂದ್ರಶೇಖರ್ ಉದ್ಘಾಟಿಸಿದರು.

ಈ ವೇಳೆ ಅರಸಿಕೆರೆ ಭಾಗದ ಉಚ್ಚಂಗಿದುರ್ಗದ ಶಿಕ್ಷಕ ಶಿವಕುಮಾರ್, ಬಿಎಲ್‍ಓಗಳಿಗೆ ಕಳೆದ ಕೆಲವು ವರ್ಷಗಳಿಂದ ಗೌರವಧನ ನೀಡಿಲ್ಲ. ಸುಮ್ಮನೆ ಕೆಲಸ ಮಾಡಿಸಿಕೊಳ್ಳುತ್ತಿರಿ ಮತ್ತು ಮತದಾರರ ಪರಿಷ್ಕರಣೆ ಮಾಡಿ ಅಂತಿರ ಸ್ಥಳದಲ್ಲಿ ಇಲ್ಲದವರನ್ನು ಹಾಗೂ ವಿವಾಹ ವಾದವರನ್ನು ಡಿಲಿಟ್ ಮಾಡಿದರೆ ನಮ್ಮ ಮೇಲೆ ಜಗಳಕ್ಕೆ ಬರುತ್ತಾರೆ.

ದಯಾಮಾಡಿ ಕೇಳಿ ಕೊಳ್ಳುತ್ತೇವೆ ಈ ಬಿಎಲ್‍ಓ ಗಳಿಗೆ ಬಿಡುಗಡೆ ನೀಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸಭಾಂಗಣದಲ್ಲಿದ್ದ ಸುಮಾರು 262 ಬಿಎಲ್‍ಓಗಳು ಸತ್ ನೀಡಿದರು.

ಜಗಳೂರು : ಮಂಗಳವಾರ ಪಟ್ಟಣದ ಗುರುಭವನದಲ್ಲಿ ಜಗಳೂರು ವಿಧಾನ ಸಭಾ ಕ್ಷೇತ್ರದ 262 ಮತಗಟ್ಟೆ ಕೇಂದ್ರದ ಬಿಎಲ್ ಓಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಗಾರವನ್ನು ತಾ.ಪಂ ನ ಪ್ರಭಾರಿ ಇಓ ಚಂದ್ರಶೇಖರ್ ಉದ್ಘಾಟಿಸಿದರು.
ಜಗಳೂರು ಪಟ್ಟಣದ ಗುರುಭವನದಲ್ಲಿ ಜಗಳೂರು ವಿಧಾನ ಸಭಾ ಕ್ಷೇತ್ರದ 262 ಮತಗಟ್ಟೆ ಕೇಂದ್ರದ ಬಿಎಲ್ ಓಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಗಾರವನ್ನು ತಾ.ಪಂ ನ ಪ್ರಭಾರಿ ಇಓ ಚಂದ್ರಶೇಖರ್ ಉದ್ಘಾಟಿಸಿದರು.

ಹಗಲು ರಾತ್ರಿ ಎನ್ನದೆ ಕೆಲಸ ಮಾಡಿಸಿಕೊಳ್ಳುತ್ತಿರಿ ಆದರೆ ಗೌರವಧನ ಮಾತ್ರ ಸರಿಯಾಗಿ ನೀಡಿಲ್ಲ. ಚುನಾವಣಾ ಶಾಖೆಗೆ ಅಲೆದು ಅಲೆದು ಸಾಕಗಿಹೋಗಿದೆ. ಜೊತೆಗೆ ಮತದಾರರ ಪರಿಷ್ಕರಣೆ ಮಾಡಿ ಎನ್ನುತ್ತಿರಿ ಆದರೆ ಗರುಡ ಆಪ್‍ನ್ನು ಬಳಸಿ ಸಮರ್ಪಕವಾಗಿ ನೊಂದಾಯಿಸಿದರೂ ಸಹ ಚುಣಾವಣಾ ಶಾಖೆಯವರು ಡೀಲಿಟ್ ಮಾಡುತ್ತಾರೆ. ಸ್ಥಳಿಯವಾಗಿ ಜನರು ನಮ್ಮನ್ನು ಪ್ರಶ್ನಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲಸ ಮಾತ್ರ ಮಾಡಿಸಿಕೊಳ್ಳುತ್ತಿರಿ ಆದರೆ ಗೌರವಧನ ನೀಡಲ್ಲ. ಕೋವಿಡ್ ಸಮಯಲ್ಲಿ ಕೆಲಸ ಮಾಡಿಸಿಕೊಂಡು ಇ ಎಲ್ ಗಳನ್ನು ನೀಡುವುದಿಲ್ಲ. ತಾಲೂಕು ಪಂಚಾಯಿತಿಗೆ ಅಲೆದರು ಪ್ರಯೋಜನವಾಗಿಲ್ಲ ಎಂದು ಶಿಕ್ಷಕ ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ಎಲ್ಲಾ ಸಮಸ್ಯೆಗಳನ್ನು ನಾವು ಬಗೆಹರಿಸುತ್ತೇವೆ ಎಂದು ತಾಪಂ ಇಓ ಚಂದ್ರಶೇಖರ್ ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ತಾಪಂ ಇಓ ಚಂದ್ರಶೇಖರ್, ಚುನಾವಣಾ ಕಾರ್ಯವು ಮಹತ್ವದ್ದಾಗಿದ್ದು ಇದರಲ್ಲಿ ಬಿಎಲ್ ಗಳ ಪಾತ್ರ ಬಹಳ ಮುಖ್ಯವಾದದ್ದು ನೀವು ತಳ ಮಟ್ಟದಲ್ಲಿ ಕೆಲಸ ಮಾಡುವುದರಿಂದ ನಿಮಗೆ ಎಲ್ಲಾ ಮಾಹಿತಿ ಲಭ್ಯ ವಿರುತ್ತದೆ.

ನಿಮ್ಮ ವ್ಯಾಪ್ತಿಯಲ್ಲಿ ನೀವು ಮತದಾರರಿಗೆ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ. ಮತದಾನ ಮಾಡುವ ಪ್ರಮಾಣವನ್ನು ಹೆಚ್ಚಿಸಬೇಕು. ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 73 ರಷ್ಟು ಮಾತ್ರ ಮತದಾನ ನಡೆದಿದೆ. ಅದರಲ್ಲಿ ಜಗಳೂರು ವಿಧಾನ ಸಭಾ ಕ್ಷೇತ್ರದ 10 ಮತಗಟ್ಟೆಗಳಲ್ಲಿ ಶೇ.50ಕ್ಕಿಂತ ಕಡಿಮೆ ಆಗಿದೆ. ಈ ಬಾರಿ ಇದು ನೂರರಷ್ಟು ಆಗುವಂತೆ ಒತ್ತು ನೀಡಬೇಕು ಎಂದು ಹೇಳಿದರು.

ಬಿಆರ್‍ಸಿ ಡಿಡಿ ಹಾಲಪ್ಪ ಮಾತನಾಡಿ, ನಮ್ಮನ್ನಾಳುವ ನಾಯಕರನ್ನು ಆಯ್ಕೆ ಮಾಡಿಕೊಳ್ಳುವಂತ ಶಕ್ತಿಯನ್ನು ಸಂವಿಧಾನ ಮನಗೆ ನೀಡಿದ್ದು ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಪ್ರತಿಯೋಬ್ಬರು ಮತದಾನ ಮಾಡಬೇಕು ಅದ್ದರಿಂದ ಶಾಲಾ ಕಾಲೇಜುಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಈ ಬಾರಿ ಯುವ ಮಯದಾರರ ಸಂಖ್ಯೆ ಹೆಚ್ಚಾಗಿದ್ದು ಅವರಿಗೆ ತಪ್ಪದೆ ಜಾಗೃತಿ ಮೂಡಿಸಬೇಕಾಗಿದೆ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸರಿಯಾಗಿ ಮಾಹಿತಿ ನೀಡುವಂತ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಸಿಡಿಪಿಒ ಬಿರೇಂದ್ರ ಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಚುನಾವಣೆ ಶಿರಾಸ್ತೆದಾರ್ ಚಂದ್ರಪ್ಪ, ಲಂಕೇಶ್, ಪ್ರಾಶಾಶಿ ಸಂಘದ ಅಧ್ಯಕ್ಷ ಹನುಮಂತೇಶ್, ಕಾರ್ಯದರ್ಶಿ ಆಂಜನೇಯ ನಾಯ್ಕ, ಪ್ರಾಶಾಸಶಿ ಸಂ ಜಿಲ್ಲಾ ಸಂಘಟನ ಕಾರ್ಯದರ್ಶಿ ಕಲ್ಲಿನಾಥ್, ಉಪಾಧ್ಯಕ್ಷ ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಬಸವರಾಜ್, ಉಮೇಶ್, ಮಾರಣ್ಣ, ಹಾಲಮ್ಮ, ಶಕುಂತಲ ಸೇರಿದಂತೆ ಮತ್ತಿತರರು ಹಾಜರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!