‘ಫಸಲ್ ಬೀಮಾ’ ಯೋಜನೆ ಆಕ್ಷೇಪಣೆಗೆ ಅವಕಾಶ

Suddivijaya
Suddivijaya July 11, 2022
Updated 2022/07/11 at 12:20 PM

ಸುದ್ದಿವಿಜಯ,ಜಗಳೂರು: ತಾಲೂಲಿನಲ್ಲಿ ಪ್ರಧಾನ ಮಂತ್ರಿ ‘ಫಸಲ್ ಬೀಮಾ’ ಯೋಜನೆಯಡಿಯಲ್ಲಿ 2019ರ ಮೂರು ಹಂಗಾಮುಗಳಲ್ಲಿನ 521 ಜನ ರೈತರ ಅರ್ಜಿಗಳು ತಿರಸ್ಕøತಗೊಂಡಿವೆ.

ತಿರಸ್ಕøತ ಗೊಂಡಿರುವ ಅರ್ಜಿಗಳ ಪ್ರಸ್ತಾವನೆಗಳ ಮಾಹಿತಿಯನ್ನು ತಾಲೂಕಿನ ವಿವಿಧ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಮಿಥುನ್ ಕೀಮಾವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


2019ರಲ್ಲಿ ಮೂರು ಹಂಗಾಮುಗಳಲ್ಲಿ ವಿಮೆ ಮಾಡಿಸಿರುವ ರೈತರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ತಮ್ಮ ತಮ್ಮ ವ್ಯಾಪ್ತಿಗೆ ಬರುವ ರೈತ ಸಂಪರ್ಕ ಕೇಂದ್ರಕ್ಕೆ ಜುಲೈ 20ರ ಒಳಗೆ ಭೇಟಿ ನೀಡಿ ಮಾಹಿತಿ ಪಡೆದು ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!