ಸುದ್ದಿವಿಜಯ, ಜಗಳೂರು: ತಾಲೂಕಿನ ರೈತ ಬಾಂಧವರಿಗೆ ಸಿಹಿ ಸುದ್ದಿ. ನೀವು 2020-21ನೇ ಸಾಲಿನಲ್ಲಿ ಫಸಲ್ ಬೀಮಾ ಯೋಜನೆ ಅಡಿ ನಿಮ್ಮ ಕ್ರಾಪ್ ಇಶ್ಯೂರೆನ್ಸ್ ಕಟ್ಟಿದ್ದರೂ ಹಣ ಬಂದಿಲ್ಲವೇ? ಹಾಗಾದರೆ ಈ ಸುದ್ದಿ ಓದಿ.
2020-21ನೇ ಸಾಲಿನಲ್ಲಿ ಮೂರು ಹಂಗಾಮುಗಳಲ್ಲಿ ಫಸಲ್ ಬೀಮಾ ಯೋಜನೆ ಅಡಿ ವಿಮೆ ಕಟ್ಟಿದೂರ ಹಣ ಬಾರದ ರೈತರಿಗೆ ಮತ್ತೊಮ್ಮೆ ಆಕ್ಷೇಪಣೆ ಸಲ್ಲಿಸಲು ತಾಲೂಕು ಕೃಷಿ ಇಲಾಖೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ. ಹಣ ಬರಲಿಲ್ಲ ಎಂದು ಬೇಸರಗೊಂಡವರಿಗೆ ಇದು ಸುವರ್ಣ ಅವಕಾಶವಾಗಿದೆ.
2020-21 ಸಾಲಿನಲ್ಲಿ ಫಸಲ್ ಬೀಮಾ ಬೆಳೆವಿಮೆ ಕಟ್ಟಿ ಹಣ ಬಾರದ ರೈತರ ಪಟ್ಟಿಯನ್ನು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಿಥುನ್ ಕಿಮಾವತ್ ಪ್ರಕಟಣೆಸಿದ್ದಾರೆ.

ರೈತರು ಸಲ್ಲಿಸಿದ್ದ ಪ್ರಸ್ತಾವನೆಗಳು ಹಾಗೂ ಬೆಳೆ ಸಮೀಕ್ಷೆಯ ದತ್ತಾಂಶಗಳೊಂದಿಗೆ ಹೋಲಿಕೆ ಮಾಡಿ ತಾಳೆ ನೋಡಲಾಗಿದೆ. ವಿಮಾ ಸಂಸ್ಥೆಯವರು ಪ್ರಸ್ತಾವನೆಗಳನ್ನು ಪರಿಶೀಲಿಸಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 109 ರೈತರ ಮತ್ತು ಹಿಂಗಾರು ಹಂಗಾಮಿನಲ್ಲಿ ಎರಡು ರೈತರ ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗಿದೆ.
ತಿರಸ್ಕøತಗೊಂಡ ರೈತರ ಪ್ರಸ್ತಾವನೆಗಳ ಮಾಹಿತಿಯನ್ನು ಕಸಬ, ಸೊಕ್ಕೆ, ಬಿಳಿಚೋಡು, ಹೊಸಕೆರೆ ಸೇರಿದಂತೆ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಹೀಗಾಗಿ 2020-21ನೇ ಸಾಲಿನಲ್ಲಿ ಮೂರು ಹಂಗಾಮುಗಳಲ್ಲಿ ವಿಮೆ ಕಟ್ಟಿದ ರೈತರು ತಮ್ಮ ಮರು ಅರ್ಜಿಸಲ್ಲಿಸಲು ಅವಕಾಶ ನೀಡಲಾಗಿದೆ. ತಿರಸ್ಕøತ ಗೊಂಡ ರೈತರು ಆಯಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಆಕ್ಷೇಪಣೆ ಸಲ್ಲಿಸಿ ಮಾಹಿತಿ ಪಡೆಯಬಹುದು ಎಂದು ಕೃಷಿ ಇಲಾಖೆ ಎಡಿ ಮಿಥುನ್ ಕಿಮಾವತ್ ಸುದ್ದಿವಿಜಯ ವೆಬ್ ನ್ಯೂಸ್‍ಗೆ ಮಾಹಿತಿ ನೀಡಿದ್ದಾರೆ.