ಸುದ್ದಿ ವಿಜಯ,ಜಗಳೂರು: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧಿ ವೃತ್ತ ಸೇರಿದಂತೆ ಮಹಾನ್ ನಾಯಕರ ಪ್ರತಿಮೆಗಳ ಸುತ್ತಲೂ ಅಳವಡಿಸಿದ್ದ ಫ್ಲಕ್ಸ್, ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಪಟ್ಟಣಪಂಚಾಯಿತಿ ಚೀಫ್ ಆಪೀಸರ್ ಲೋಕ್ಯಾನಾಯ್ಕ್ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ತೆರವುಗೊಳಿಸಿತು.
ಶ್ರದ್ಧಾಂಜಲಿ ಮತ್ತು ಶುಭಾಶಯ ಕೋರುವ ಹಾಗೂ ಜಾಹೀರಾತು ಫಲಕಗಳು ಅಂಬೇಡ್ಕರ್ ವೃತ್ತದ ಕಬ್ಬಿಣದ ಗೇಟಿಗೆ ನೇತು ಬಿದ್ದಿದ್ದವು. ಇವುಗಳಿಂದ ಅಂಬೇಡ್ಕರ್ ಸರ್ಕಲ್ ಮರೆಮಾಚುವಂತಾಗಿತ್ತು.
ರಸ್ತೆಯ ಇಕ್ಕೆಲಗಳಲ್ಲಿ ಜಾಹೀರಾತು ಮತ್ತು ಶ್ರದ್ಧಾಂಜಲಿ ಅರ್ಪಣೆಯ ಫ್ಲಕ್ಸ್‌ಗಳು ಮಹಾನ್ ನಾಯಕರಿಗೆ ಅವಮಾನ ಮಾಡುವಂತಿದ್ದವು. ಎಚ್ಚೆತ್ತ ನಾಗರಿಕರು ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ದೂರು ಮೌಕಿಕವಾಗಿ ದೂರು ಸಲ್ಲಿಸಿದ್ದರು. ಹೀಗಾಗಿ ಶುಕ್ರವಾರ ಫೀಲ್ಡಿಗೆ ಇಳಿದ ಚೀಫ್ ಆಫೀಸರ್ ಸುತ್ತಮುತ್ತಲ ಫ್ಲಕ್ಸ್‌ಗಳನ್ನು ನಿಂತಿದ್ದು ತೆರೆವುಗೊಳಿಸಿದರು.
ಈ ವೇಳೆ ಪರ್ತಕರ್ತರೊಂದಿಗೆ ಮಾತನಾಡಿದ ಅವರು, ಪಟ್ಟಣದ ಅಂದಗೆಡಿಸುವ ಫ್ಲಕ್ಸ್‌ಗಳಿಂದ ನಾಯಕರ ಪ್ರತಿಮೆಗಳು ಮರೆಮಾಚುತ್ತಿದ್ದವು. ಹೀಗಾಗಿ ತೆರವುಗೊಳಿಸಲಾಗಿದೆ. ಇನ್ಮುಂದೆ ಯಾರಾದರೂ ಫ್ಲಕ್ಸ್, ಬ್ಯಾನರ್‌ಗಳನ್ನು ಸರ್ಕಲ್‌ಗಳಲ್ಲಿ ಅಳವಿಡಿಸದ್ದು ಕಂಡು ಬಂದರೆ ಅವರ ಮೇಲೆ ಶಿಸ್ತುಕ್ರಮ ಕೈಗೊಂಡು ನೋಟಿಸ್ ಕೊಟ್ಟು ದುಭಾರಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಹಣ್ಣಿನ ವ್ಯಾಪಾರಕ್ಕೆಂದೇ ನಿಗದಿತ ಜಾಗ ಮಾಡಲಾಗಿದೆ. ಆದರೆ ಕೆಲವರು ವೃತ್ತಗಳ ಸುತ್ತಲೂ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಅವರನ್ನು ಸಹ ತೆರವುಗೊಳಿಸಲಾಗಿದೆ ಎಂದರು. ಈ ವೇಳೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಸ್.ಸಿದ್ದಪ್ಪ, ಆರೋಗ್ಯಾಧಿಕಾರಿ ಕಿಫಾಯತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.