ರೈತರಿಂದ ರೈತರಿಗಾಗಿ ಎಫ್‍ಪಿಓಗಳ ಬಲವರ್ಧನೆ

Suddivijaya
Suddivijaya July 25, 2022
Updated 2022/07/25 at 12:45 PM

ಸುದ್ದಿವಿಜಯ,ಜಗಳೂರು: ಸೊರಗಿರುವ ರೈತ ಸಂಕುಲಕ್ಕೆ ಶಕ್ತಿಯಾಗಿ ರೈತರಿಂದ ರೈತರಿಗಾಗಿ ರೈತರಿಗೋಸ್ಕರವೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತ ಉತ್ಪಾದಕ ಕಂಪನಿಗಳು (ಎಫ್‍ಪಿಓ)ಗಳು ಆರ್ಥಿಕ ಹಾಗೂ ತಾಂತ್ರಿಕ ಶಕ್ತಿ ತುಂಬಲು ಜನ್ಮತಾಳಿವೆ ಎಂದು ದಾವಣಗೆರೆ ಜಿಲ್ಲಾ ಜಂಟಿ ಕೃಷಿ ಉಪನಿರ್ದೇಶಕ ಆರ್.ತಿಪ್ಪೇಸ್ವಾಮಿ ಹೇಳಿದರು.

ತಾಲೂಕಿನ ಹಿರೇಅರಕೆರೆ ಗ್ರಾಮದಲ್ಲಿ ಸೋಮವಾರ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ, ಕೃಷಿ ಇಲಾಖೆ ಹಾಗೂ ಕೆವಿಕೆ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ರೈತ ತರಬೇತಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಎಫ್‍ಪಿಓಗಳ ಬಲವರ್ಧನೆಗೆ ಕೇಂದ್ರ ಹಾಗೂ ರಾಜ್ಯ ಸರಕಾಗರಳು ಸಾಕಷ್ಟು ಆರ್ಥಿಕ ನೆರವು ನೀಡುತ್ತವೆ.

ಮಧ್ಯವರ್ತಿಗಳ ಕಾಟ ತಪ್ಪಿಸಿ ರೈತರಿಗೆ ಆರ್ಥಿಕವಾಗಿ ಸದೃಢರನ್ನಾಗಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಮತ್ತು ಕೇಂದ್ರ ಸರಕಾರದ ಸಂಪನ್ಮೂಲಕ ಸಂಸ್ಥೆಯಾದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಟ್ಟು 18 ಕಂಪನಿಗಳನ್ನು ಸ್ಥಾಪಿಸಿ ರೈತರು ತಾವು ಬೆಳೆದ ಬೆಳೆಗಳಿಗೆ ಮೌಲ್ಯವರ್ಧನೆ ಮತ್ತು ನೇರ ಮಾರುಕಟ್ಟೆ ಕಲ್ಪಿಸುವ ಮೂಲಕ ತಾಂತ್ರಿಕವಾಗಿ ಕೃಷಿಮಾಡುವ ವಿಧಾನಗಳನ್ನು ಪ್ರತ್ಯಕ್ಷತೆ ಮೂಲಕ ಕಲ್ಪಿಸಲು ಶ್ರಮಿಸುತ್ತಿರುವುದು ಅದ್ಭುತ ಕಾರ್ಯ ಎಂದರು.

ತಾಲೂಕು ಹಿರಿಯ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್‍ಮೂರ್ತಿ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ತೋಟಗಾರಿಕಾ ಎಫ್‍ಪಿಓ ಕಾರ್ಯಾರಂಭ ಮಾಡಿದ್ದು, ಜಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಡಕೆ, ಬಾಳೆ, ಪಪ್ಪಾಯ, ದಾಳಿಂಬೆ, ನುಗ್ಗೆ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳಿಗೆ ಸರಕಾರದಿಂದ ಬರುವ ಸಬ್ಸಿಡಿ ಮತ್ತು ಪೂರಕವಾದ ಉಪಕರಣಗಳನ್ನು ನೀಡಲಾಗುತ್ತಿದೆ.

ಎಸ್‍ಸಿಎಸ್‍ಟಿ ಜನಾಂಗದ ರೈತರಿಗೆ ಹನಿ ನೀರಾವರಿಗೆ ಶೇ.90ರಷ್ಟು ಮತ್ತು ಸಾಮಾನ್ಯ ವರ್ಗಕ್ಕೆ ಶೇ.75 ಸಬ್ಸಿಡಿ ನಈಡಲಾಗುತ್ತಿದೆ. ತೋಟಗಾರಿಕೆ ಬೆಳೆಗಳಿಂದ ಸಮಗ್ರ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದರು.

ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜನ ಮಾತನಾಡಿ, ಇತ್ತೀಚನ ದಿನಗಳಲ್ಲಿ ರೈತರ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಮೌಲ್ಯವರ್ಧನೆ ಮಾಡುವ ಮೂಲಕ ರೈತರು ತಾವು ಬೆಳೆದ ಬೆಳೆಗೆ ಪ್ಯಾಕೇಟ್ ಮಾಡಿ ಬ್ರಾಂಡ್ ಮಾಡಿ ಮಾರಾಟ ಮಾಡಿದರೆ ಅದಕ್ಕೆ ಅಧಿಕ ಲಾಭಗಳಿಸಬಹುದು. ಉತ್ಪಾದನ ವೆಚ್ಚದಲ್ಲಿ ಕಡಿತ, ಎಣ್ಣೆಕಾಳು ಹಾಗೂ ದ್ವಿದಳಧಾನ್ಯಗಳ ಬೆಳೆಗಳ ವಿಸ್ತರಣೆ ಹೆಚ್ಚಾಗಬೇಕು ಎಂದು ರೈತರಿಗೆ ಸಲಹೆ ನೀಡಿದರು.

ತೋಟಗಾರಿಕಾ ತಜ್ಞ ಎಂ.ಜಿ.ಬಸವನಗೌಡ ಮಾತನಾಡಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವಾಗ ಅನುಸರಿಸುವ ವಿಧಾನ ಮತ್ತು ವೈಜ್ಞಾನಿಕ ಕೃಷಿ ಮಾಡುವ ವಿಧಾನಗಳ ಬಗ್ಗೆ ರೈತರಿಗೆ ಪೂರಕ ಮಾಹಿತಿ ನೀಡಿದರು.

ಮಣ್ಣು ವಿಜಯ ತಜ್ಞ ಸಣ್ಣಗೌಡರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಂಪನಿಯ ಅಧ್ಯಕ್ಷ ಮೆದಗಿನಕೆರೆ ಮಂಜುನಾಥ್, ನಿರ್ದೇಶಕರಾದ ಎಚ್.ಜಿ.ಉಮಾಪತಿ, ಸೋಮನಗೌಡ ಅರಶಿಣಗುಂಡಿ ನಾಗರಾಜ್, ಕಲ್ಲೇದೇವರಪುರ ಕೃಷ್ಣಮೂರ್ತಿ, ಗುತ್ತಿದುರ್ಗ ಬಸವನಗೌಡ, ಕವಿತಾಸ್ವಾಮಿ, ಕೃಷಿ ವಿಜ್ಞಾನಿಗಳಾದ ಪವನ್‍ಪಾಟೀಲ್, ಎಫ್‍ಪಿಒ ಸಿಇಒ ಮನೋಜ್‍ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!