ಸುದ್ದಿವಿಜಯ, ಜಗಳೂರು: ಮಹಿಳೆಯ, ವಿದ್ಯಾರ್ಥಿನಿಯರ ಆತ್ಮಸ್ಥೈರ್ಯ ಹೆಚ್ಚಿಸಲು ಪಟ್ಟಣ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮೂರನೇ ದಿನದ ಸಮರ ಕಲೆಯಲ್ಲಿ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ತರಬೇತಿ ಪಡೆದರು.
ಸಮರ ಕಲೆಯಲ್ಲಿ ಜಪಾನ್ ದೇಶದಲ್ಲಿ 6 Don ಬೆಲ್ಟ್ ಪಡೆದ ದಾವಣಗೆರೆ ನಗರದ ಕರಾಟೆ ಕೇಸರಿ ಅಸೋಸಿಯೇಷನ್ ಕಾರ್ಯದರ್ಶಿ ಕುಬೇರ್ ನಾಯ್ಕ ಮತ್ತು ಬ್ಲಾಕ್ ಬೆಲ್ಟ್ ಪಡೆದಿರುವ ನಾಗರಾಜ್ ನಾಯ್ಕ್ ತಂಡ ವಿದ್ಯಾರ್ಥಿಗಳಿಗೆ ಸಮರ ಕಲೆಯ ವಿಧಾನಗಳಾದ ಮಿಡಲ್ ಪಂಚ್,ಫೇಸ್ ಪಂಚ್, ಸೈಡ್ ಪಂಚ್ ಮಾಡುವ ವಿಧಾನಗಳನ್ನು ಕಲಿಸಿಕೊಟ್ಟರು.
ಈ ವೇಳೆ ಮಾತನಾಡಿದ ಅಸೋಸಿಯೇಷನ್ ಕಾರ್ಯದರ್ಶಿ ಕುಬೇರ್ ನಾಯ್ಕ್, ಸಮರಕಲೆಗೂ ಮುನ್ನ ನಿಮ್ಮ ಆತ್ಮಸ್ಥೈರ್ಯ ಹೆಚ್ಚು ಮಾಡಿಕೊಳ್ಳಬೇಕು, ದೈಹಿಕವಾಗಿ ಬಲವಾದರೆ ಮಾತ್ರ ಎಂತಹ ಕಷ್ಟಗಳನ್ನು ಎದುರಿಸಬಹುದು.
ಪ್ರತಿನಿತ್ಯ ನಿಮ್ಮ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಕರಾಟೆ ಕಲೆಗಳನ್ನು ಕಲೆಯಿರಿ. ಬರುವ ಶನಿವಾರದ ಒಳಗೆ ನಿಮಗೆ ಸಮರ ಕಲೆಯ ಮೂಲಕ ನಿಮ್ಮನ್ನು ನೀವು ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಎಂಬ ಸಂಪೂರ್ಣ ಸಮರ ಕಲೆಯನ್ನು ಹೇಳಿಕೊಡುತ್ತೇವೆ ಎಂದು ಹೇಳಿದರು.
ಬ್ಲಾಕ್ಬೆಲ್ಟ್ ಪಡೆದ ಪರಿಣಿತ ಕರಾಟೆ ತರಬೇತುದಾರ ನಾಗರಾಜ್ ನಾಯ್ಕ್ ಅವರು ವಿದ್ಯಾರ್ಥಿಗಳಿಗೆ ಮಾರ್ಷಲ್ ಆರ್ಟ್ಸ್ ಬಗ್ಗೆ ತರಬೇತಿನೀಡಿದರು.
ಈವೇಳೆ ವಿದ್ಯಾರ್ಥಿ ಪೋಷಕರು, ಸಮರ ಕಲೆ ಶಿಬರದ ಆಯೋಜಕರಾದ ಸುದ್ದಿವಿಜಯ ವೆಬ್ ನ್ಯೂಸ್, ವಿಜಯವಾಣಿ ಪತ್ರಿಕೆಯ ತಾಲೂಕು ವರದಿಗಾರ ಲೋಕೇಶ್ ಎಂ.ಐಹೊಳೆ, ವಿಜಯ ಕರ್ನಾಟಕ ಪತ್ರಿಕೆಯ ತಾಲೂಕು ವರದಿಗಾರರಾದ.ಎಸ್.ಎಂ.ಸೋಮನಗೌಡ ಉಪಸ್ಥಿತರಿದ್ದರು.