ಸುದ್ದಿವಿಜಯ,ಜಗಳೂರು: ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಜಗಳೂರು ಪಟ್ಟಣದಲ್ಲಿ ಅಮೃತ ವನಿತಾ ಸಮರಕಲೆ ಉಚಿತ ಸಮರ ಕಲೆ ಶಿಬಿರವನ್ನು ಸೋಮವಾರ ದಿಂದ ಶನಿವಾರದವರೆಗೆ ಆಯೋಜಿಸಲಾಗಿದೆ.
ಜಿಲ್ಲಾ ಪೊಲೀಸ್ ಇಲಾಖೆ, ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸರಕಾರಿ ಆಸ್ಪತ್ರೆ, ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ದಾವಣಗೆರೆಯ ಕರಾಟೆ ಕೇಸರಿ ಮಾರ್ಷಲ್ ಆಟ್ರ್ಸ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಪಟ್ಟಣದ ವಿವಿಧ ಶಾಲಾ,ಕಾಲೇಜುಗಳ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಪ್ರತಿನಿತ್ಯ 8 ರಿಂದ 9ಗಂಟೆಯವರೆಗೆ ಉಚಿತ ಕರಾಟೆ ಮತ್ತು ಆತ್ಮರಕ್ಷಣೆ ಕಲೆಯ ಬಗ್ಗೆ ತರಬೇತಿಯನ್ನು ನೀಡೆಯಲಿದೆ.
ಸೋಮವಾರ (ಆ.29)ಕಾರ್ಯಕ್ರಮ ಉದ್ಘಾಟನೆಯಿದ್ದು, ಶಾಸಕ ಎಸ್.ವಿ.ರಾಮಚಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ತಾಪಂ ಇಒ ವೈ.ಎಚ್.ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಕರಾಟೆ ಕೇಸರಿ ಅಸೋಸಿಯೇಷನ್ ಕಾರ್ಯದರ್ಶಿ ಕುಬೇರ್ ನಾಯ್ಕ್, ವೈದ್ಯಾಧಿಕಾರಿ ಡಾ.ನೀರಜ್, ಸಿಪಿಐ ಕೆ.ಸತ್ಯನಾರಾಯಣ, ಪೊಲೀಸ್ ಇಸ್ಪೆಕ್ಟರ್ ಮಂಜುನಾಥ್ ಪಂಡಿತ್, ಪ್ರಾಂಶುಪಾಲ ಜಗದೀಶ್, ಪಪಂ ಅಧ್ಯಕ್ಷರಾದ ಸಿ.ವಿಶಾಲಾಕ್ಷಿ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ಎಸ್.ಚಿದಾನಂದ, ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಡಿ.ಡಿ.ಹಾಲಪ್ಪ ಭಾಗವಹಿಸಲಿದ್ದಾರೆ.
ಶನಿವಾರ (ಸೆ.3)ಸಮಾ ರೋಪ ಸಮಾರಂಭ ನಡೆಯಲಿದ್ದು, ಮಾಜಿ ಶಾಸಕ ಎಚ್.ಪಿ.ರಾಜೇಶ್, ದಾಣವೆರೆ ಮಾಜಿ ಮೇಯರ್ ಬಿ.ಟಿ, ಅಜಯ್‍ಕುಮಾರ್, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಭಾರತಿ ಅಕ್ಕ, ಕೆ.ಪಿ.ಪಾಲಯ್ಯ, ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ.ಕಲ್ಲೇರುದ್ರೇಶ್, ಪಿಎಸ್‍ಐ ಮಹೇಶ್ ಹೊಸಪೇಟ, ಹಿರಿಯ ಪತ್ರಕರ್ತರಾದ ಡಿ.ಶ್ರೀನಿವಾಸ್, ಬಿ.ಪಿ.ಸಭಾನ್ ಸಾಬ್, ಸರಕಾರಿ ನೌರಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್.ಚಂದ್ರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.