ಸುದ್ದಿವಿಜಯ, ಜಗಳೂರು:ತಾಲೂಕಿನ ಗುರುಸಿದ್ದಾಪುರ ಗ್ರಾಪಂ ನೂತನ ಅಧ್ಯಕ್ಷರಾಗಿ ಶನಿವಾರ ಗೌಡಿಕಟ್ಟೆಯ ಗ್ರಾಪಂ ಸದಸ್ಯರಾದ ಕೆ.ಬೋಮ್ಮಪ್ಪ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಅವರೊಬ್ಬರೆ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸಲು ಮಧ್ಯಾಹ್ನ 1 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿತ್ತು. ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದ ಜಿಪಂ ಎಇಇ ಪುಟ್ಟಸ್ವಾಮಿ ಅವರು ಕೆ.ಬೋಮ್ಮಪ್ಪ ಅವರ ಆಯ್ಕೆಯನ್ನು ಮಧ್ಯಹ್ನ 1.10ಕ್ಕೆ ಘೋಷಿಸಿದರು. ಅವರ ಆಯ್ಕೆಯಾಗುತ್ತಿದ್ದಂತೆ ಗ್ರಾಮದಲ್ಲಿ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಗಾಂಧಿ ಕಂಡ ಕನಸು ನನಸಾಗಲು ಶ್ರಮಿಸುವೆ
ಈ ವೇಳೆ ಪ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ನೂತನ ಅಧ್ಯಕ್ಷ ಕೆ.ಬೋಮ್ಮಪ್ಪ, ಗ್ರಾಪಂ ಒಳಪಡುವ ಎಲ್ಲ ಗ್ರಾಮಗಳಿಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಶುದ್ಧ ಕುಡಿಯುವ ನೀರು, ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಗ್ರಾಮ ಭಾರತದ ಅಭಿವೃದ್ಧಿಗೆ ಕನಸು ಕಂಡ ಮಹಾತ್ಮ ಗಾಂಧೀ ಅವರ ಕನಸನ್ನು ನನಸು ಮಾಡಲು ನಾವೆಲ್ಲ ಒಟ್ಟಾಗಿ ಶ್ರಮಿಸುತ್ತೇವೆ ಎಂದರು. ಅಧ್ಯಕ್ಷರಾಗಿ ಆಯ್ಕೆಯಾಗುವ ವೇಳೆ ಸದಸ್ಯರಾದ ನಾಗಮ್ಮ ಮತ್ತು ಕೆ.ಸಿ.ಗುರುಸ್ವಾಮಿ ಸೇರಿದಂತೆ ಮೂರು ಜನ ಸದಸ್ಯರು ಗೈರಾಗಿದ್ದರು.
ಈ ವೇಳೆ ಸದಸ್ಯರಾದ ಚಂದ್ರಮ್ಮ, ಚೌಡಪ್ಪ, ರಮೇಶ್, ಪದ್ಮ, ಮಂಜಮ್ಮ, ಕರಿಬಸಮ್ಮ, ಪ್ರಮಿಳಮ್ಮ, ಆರ್ ಸತೀಶ್ ನಾಯ್ಕ್, ಕೆ.ಎಚ್.ಮಂಜಪ್ಪ, ಮಾರಕ್ಕ, ಗಂಗಮ್ಮ, ಆರ್.ಆನಂದ್ ಮತ್ತು ಪಿಡಿಒ ವಾಸುದೇವ್ ಉಪಸ್ಥಿತರಿದ್ದರು.
ಅಹಿತರಕ ಘಟನೆಗಳಾಗದಂತೆ ಬಿಳಿಚೋಡು ಪೊಲೀಸ್ ಠಾಣೆಯ ಸಿಪಿಐ ಸತ್ಯನಾರಾಯಣ ಸೇರಿದಂತೆ ಅನೇಕ ಪೊಲೀಸರು ಗ್ರಾಪಂ ಕಚೇರಿಯಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು.