ಸುದ್ದಿವಿಜಯ, ಜಗಳೂರು:ತಾಲೂಕಿನ ಗುರುಸಿದ್ದಾಪುರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲೇಶಪ್ಪ,ಉಪಾಧ್ಯಕ್ಷರಾಗಿ ಬಿ. ಹನುಮಂತಪ್ಪ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಹರೀಶ್ ಘೋಷಿಸಿದರು.
ಬಸವನಕೋಟೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ಕಾರ್ಯವ್ಯಾಪ್ತಿಯಿಂದ ಬೇರ್ಪಡೆಗೊಂಡು ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಆರಂಭವಾಗಿದ್ದು.ಒಟ್ಟು 12 ಜನ ನಿರ್ದೇಶಕರನ್ನು ಆಯ್ಕೆಮಾಡಲಾಗಿತ್ತು.ಇಂದು ಅಧ್ಯಕ್ಷ ಸ್ಥಾನಕ್ಕೆ ಒಬ್ಬರು ಉಪಾಧ್ಯಕ್ಷರ ಸ್ಥಾನಕ್ಕೆ ಒಬ್ಬರು ನಾಮಪತ್ರ ಸಲ್ಲಿಸಿದ್ದರು.
ಯಾರೊಬ್ಬರೂ ಸ್ಪರ್ಧಿಸದ ಕಾರಣ ಆದ್ದರಿಂದ ಮದ್ಯಾಹ್ನ 3 ಗಂಟೆಗೆ ಆಯ್ಕೆಮಾಡಿ ಘೋಷಣೆ ಮಾಡಿದರು.
12 ಜನ ನಿರ್ದೇಶಕರಲ್ಲಿ 9 ಜನ ನಿರ್ದೇಶಕರುಗಳು ಸರ್ವಾನುಮತದಿಂದ ಅಧ್ಯಕ್ಷ ಉಪಾಧ್ಯಕ್ಷರಿಗೆ ಬೆಂಬಲಿಸಿದರು.
ಸಂದರ್ಭದಲ್ಲಿ ನಿರ್ದೇಶಕರಾದ ಓಬಳೇಶ್ ,ಗಿರೀಶ್, ಓಬಳೇಶ್,ಕವಿತಾ,ದೆವೇಂದ್ರನಾಯ್ಕ,ಆರ್ಮಿಮಲ್ಲೇಶ್,ರಮೇಶ್,ಗ್ರಾ.ಪಂ ಮಾಜಿ ಅಧ್ಯಕ್ಷೆ ನಾಗಮ್ಮ ಪತಿ ಮಲ್ಲೇಶಪ್ಪ,ಗ್ರಾ.ಪಂ ಸದಸ್ಯೆ ಮಂಜಮ್ಮ ಪತಿ ಮೂಗಪ್ಪ,ಗ್ರಾ.ಪಂ ಉಪಾಧ್ಯಕ್ಷೆ ಚಂದ್ರಮ್ಮ ಪತಿ ರೇವಣ್ಣ, ಮುಖಂಡರಾದ ಕಾಡಪ್ಪ,ಮಾಗಡಿ ಎಂಸಿ ಹನುಮಂತಪ್ಪ ,ಕೆಂಚಪ್ಳ ಹನುಮಂತಪ್ಪ ,ರಮೇಶ್,ಗ್ರಾಮಪಂ ಸಿಬ್ಬಂದಿ ಶಿವಕುಮಾರ ,ಓಬಳೇಶ್ (ರಾಣ)ಮೂಗಪ್ಪ,ಸೇರಿದಂತೆ ಇದ್ದರು.