‘ನೋಟಾ’ದಿಂದ ನನಗೆ ಹಿನ್ನಡೆ, ಕ್ಷೇತ್ರದ ಅಭಿವೃದ್ಧಿಗಾಗಿ ಹೋರಾಟ ನಿರಂತರ!

Suddivijaya
Suddivijaya May 14, 2023
Updated 2023/05/14 at 11:28 AM

ಸುದ್ದಿವಿಜಯ,ಜಗಳೂರು: ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಮತದಾರರು ನನಗೆ 49442 ಮತಗಳನ್ನು ನೀಡಿ ಗೆಲುವಿನ ಸನಿಹಕ್ಕೆ ತಂದರು. ಅದರೆ ನನ್ನ ಕ್ರಮ ಸಂಖ್ಯೆ 11, ಅದರ ಕೆಳಗೆ ನೋಟಾ ಇದ್ದ ಕಾರಣ ಮತದಾರರು ಗೊಂದಲಕ್ಕೀಡಾಗಿ ನೋಟಗಾ ಬಟನ್ ಒತ್ತಿದ ಕಾರಣ 2241 ಮತಗಳು ಚದುರಿ ಹೋದವು. ಹೀಗಾಗಿ ನಾನು ಸೋಲು ಅನುಭವಿಸಬೇಕಾಯಿತು ಎಂದು ಪರಾಜಿತ ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಹೇಳಿದರು.

ಭಾನುವಾರ ಪಟ್ಟಣದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ನನಗೆ ಎಲ್ಲ ಸಮುದಾಯ, ಜಾತಿ, ಧರ್ಮಗಳ ಜನರು ಮತ ಹಾಕಿದ್ದಾರೆ. ಅವರಿಗೆ ನನ್ನ ಅನಂತ ಕೃತಜ್ಞತೆಗಳು.

 ಜಗಳೂರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಎಚ್.ಪಿ.ರಾಜೇಶ್ ಸುದ್ದಿಗೋಷ್ಠಿ ನಡೆಸಿದರು.
 ಜಗಳೂರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಎಚ್.ಪಿ.ರಾಜೇಶ್ ಸುದ್ದಿಗೋಷ್ಠಿ ನಡೆಸಿದರು.

ಟಿಕೆಟ್ ಸಿಗದೇ ಹೋದರು ಎಲ್ಲರೂ ಜಾತ್ಯತೀತವಾಗಿ ಬೆಂಬಲಿಸಿದರು. ನಾನು ಅಂಕಿ ಅಂಶಗಳಿಂದ ಸೋತಿರಬಹುದು ಆದರೆ ಜನರ ಹೃದಯದಲ್ಲಿ ಗೆದ್ದಿದ್ದೇನೆ. ಮತ ಹಾಕಿದವರ ಮಧ್ಯೆಯೇ ಇನ್ನು ಮುಂದಿನ ಹೋರಾಟ ನಿರಂತರವಾಗಿರುತ್ತದೆ. ಸಮಾಜ ಸೇವೆ ಮಾಡುವ ಮೂಲಕವೇ ಕ್ಷೇತ್ರದ ಅಭಿವೃದ್ಧಿಗೆ ಹೋರಾಡುತ್ತೇನೆ. ನನ್ನ ಹಿಂದೆ ಅನೇಕ ಅಭಿಮಾನಿಗಳಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಗೆಲ್ಲಬೇಕಾದರೆ ಒಂದು ಪಕ್ಷವನ್ನು ನಾನು ಮತ್ತು ನನ್ನ ಬೆಂಬಲಿಗರು ಸೇರಲೇ ಬೇಕು. ಮುಂದಿನ ದಿನಗಳಲ್ಲಿ ಬೆಂಬಲಿಗರ ಸಭೆ ಕರೆದು ಚರ್ಚೆ ನಡೆಸಿ ಶೀಘ್ರವೇ ನಮ್ಮ ನಿರ್ಧಾರವನ್ನು ಕೈಗೊಳ್ಳುತ್ತೇವೆ. 15 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದವನು ನಾನು ಮತ್ತು ನಮ್ಮ ಕಾರ್ಯಕರ್ತರು. ಈಗ ಗೆದ್ದಿರುವ ಶಾಸಕರನ್ನು ನಾನೇ ಪಕ್ಷಕ್ಕೆ ಕರೆತಂದೆ.

ಆದರೆ ನನ್ನ ಹಣೆಬರಹದಲ್ಲಿ ಸೋಲು ಬರೆದಿತ್ತು ಎಂದು ಕಾಣುತ್ತದೆ. ಸೋತ ಮಾತ್ರಕ್ಕೆ ಕೈ ಕಟ್ಟಿ ಕೂರುವುದಿಲ್ಲ. ಚುನಾವಣೆಯಲ್ಲಿ ಹಣ ಕೆಲಸ ಮಾಡಿಲ್ಲ. ಎಲ್ಲರಿಗಿಂತ ಹೆಚ್ಚು ಹಣ ಕೊಟ್ಟವರೇ ಸೋತಿದ್ದಾರೆ. ಜನರು ನನ್ನನ್ನು ಬೆಂಬಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೋರಾಡುತ್ತೇನೆ. ನನಗೆ ಮತ ಹಾಕಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು. ಈ ವೇಳೆ ಬಸವಾಪುರ ರವಿಚಂದ್ರ, ಲೋಕೇಶ್ ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!