ಸುದ್ದಿವಿಜಯ, ಜಗಳೂರು: ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ 23 ವರ್ಷಗಳ ಬಳಿಕ ದುರ್ಗಾಂಭಿಕಾ ದೇವಿ ಮತ್ತು ಕೊಲ್ಲಪುರಾಂಭಿಕಾದೇವಿ ಜಾತ್ರಾ ಕಾರ್ಯಕ್ರಮ ನಡೆಯುತ್ತಿದ್ದು ಹಿಂದು ಮುಸ್ಲೀಂ ಭಾವೈಕ್ಯತಾ ಜಾತ್ರಾತ್ಸವ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಾಥ ರೆಡ್ಡಿ ಹೇಳಿದರು.
ಸೋಮವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ದುರ್ಗಾಂಭಿಕಾ ದೇವಿ ಮತ್ತು ಕೊಲ್ಲಾಪುರಾಂಭಿಕಾದೇವಿ ಜಾತ್ರೆ ನಡೆದು 23 ವರ್ಷಗಳ ಕಳೆದಿದ್ದು ಈ ಬಾರಿ ಉತ್ತಮ ಮಳೆ ಬೆಳೆ ಯಾಗಿದ್ದು, ಗ್ರಾಮದಲ್ಲಿ ಜಾತ್ರೆಯನ್ನು ಫೆ.7 ರಿಂದ 10 ರವರೆಗೆ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ.
ಫೆ. 7 ರಂದು ಗಂಗಾ ಪೂಜೆ, 8 ರಂದು ಹರಕೆ ತಿರಿಸುವುದು, 9 ರಂದು ಪೊತರಾಜರ ಸೇವೆ , 10 ರಂದು ಗ್ರಾಮದಲ್ಲಿ ದೇವತೆಗಳ ಮೇರವಣಿಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಜಾತ್ರೆಯನ್ನು ಮುಸ್ಲೀಂ ಸಮುದಾಯದವರು ಹಿಂದು ಸಮಾಜದವರೊಂದಿಗೆ ಸೇರಿ ಜಾತ್ರೆಯನ್ನು ಆಚರಿಸುವುದು ವಿಶೇಷವಾಗಿದೆ. ಜಾತ್ರಾ ಮಹೋತ್ಸವಕ್ಕೆ ತಾಲೂಕಿನ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಆಗಮಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂಧರ್ಭದಲ್ಲಿ ಅನೂಪ್ ರೆಡ್ಡಿ, ಹರ್ಷ, ಬಾಬು ರೆಡ್ಡಿ, ನಾಗರಾಜ್, ಸನಾವುಲ್ಲಾ, ಜಂಡಿರಾಮಪ್ಪ, ತಿಮ್ಮಣ್ಣ, ಆತಾವುಲ್ಲಾ ಸೇರಿದಂತೆ ಮತ್ತಿತರರು ಹಾಜರಿದ್ದರು.
ಜಗಳೂರು ಪಟ್ಟಣದ ಪತ್ರಿಕಾಭವನದಲ್ಲಿ ಹುಚ್ಚವ್ವನಹಳ್ಳಿ ಗ್ರಾಮಸ್ಥರು ಸುದ್ದಿಗೋಷ್ಠಿ ನಡೆಸಿದರು.