ಸುದ್ದಿವಿಜಯ, ಜಗಳೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಭಾನುವಾರ ಪಟ್ಟಣದ ಪತ್ರಿಕಾಭವನದಲ್ಲಿ ಸರ್ವ ಸದಸ್ಯರ ಒಮ್ಮತದ ಮೇರೆಗೆ ಅವಿರೋಧವಾಗಿ ಅಧ್ಯಕ್ಷ, ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಜಿ.ಎಸ್.ಚಿದಾನಂದ ಅವರು ಮೂರನೇ ಬಾರಿಗೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸೈಯದ್ವಾಸೀಂ, ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ ಎಂ, ಕಾರ್ಯದರ್ಶಿಯಾಗಿ ಜಿ.ಒ.ರವಿಕುಮಾರ್, ಖಜಾಂಚಿಯಾಗಿ ಕೆ.ಎಂ. ಜಗದೀಶ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಓ.ಮಂಜಣ್ಣ, ಎಸ್.ಧನ್ಯಕುಮಾರ್, ಎಚ್.ಬಾಬು, ಎಂ.ರಾಜಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಗಳಾಗಿ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಎಚ್.ಚಂದ್ರಶೇಖರ್, ಎಂ. ಗುರುಮೂರ್ತಿ ಕಾರ್ಯನಿರ್ವಹಿಸಿದರು.
ಈವೇಳೆ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಡಿ. ಶ್ರೀನಿವಾಸ್, ತಾಲೂಕು ಪತ್ರಕರ್ತ ಸಂಘದ ಸದಸ್ಯರಾದ ಸೋಮನಗೌಡ ಎಸ್.ಎಂ. ಮಹಾಂತೇಶ್ ಬ್ರಹ್ಮ, ಎಸ್.ತಿಪ್ಪೇಶ್, ಮಾದೇಹಳ್ಳಿ ಮಂಜುನಾಥ್, ರಕೀಬ್, ಮಂಜಯ್ಯ, ಮಾರುತಿ, ವೇದಮೂರ್ತಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.