ಸುದ್ದಿವಿಜಯ, ಜಗಳೂರು: ವಿದ್ಯಾರ್ಥಿಗಳಿಗೆ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಭವಿಷ್ಯಕ್ಕೆ ಪೂರಕ ಎಂದು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ದೊಣೆಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಲಿಕಾ ಹಬ್ಬದ ಸಮಾರೋಪ ಸಮಾರಂಭ ಹಾಗೂ ನಮ್ಮ ಶಾಲೆ ನನ್ನ ಕೊಡುಗೆ ದಾನಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೋವಿಡ್ ಹಿನ್ನೆಲೆ ಎರಡು ವರ್ಷದ ಶಿಕ್ಷಣ ಚುರುಕುಗೊಳಿಸಲು ಕಲಿಕಾ ಹಬ್ಬ ನಡೆಸುತ್ತಿದ್ದು.
ಎಸ್‍ಎಸ್‍ಎಲ್‍ಸಿ ಭವಿಷ್ಯದ ಶಿಕ್ಷಣಕ್ಕೆ ಬುನಾದಿಯಾಗಿದೆ. ಅಂಕಪಟ್ಟಿಯ ಶ್ರೇಣಿಗಳು ಮಾನದಂಡವಲ್ಲ ಉತ್ತಮ ಕೋರ್ಸ್ ನ ಆಯ್ಕೆ ನಿಮ್ಮದಾಗಲಿ ಎಂದು ಕಿವಿಮಾತು ಹೇಳಿದರು.

ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಮಾತನಾಡಿ,ಮಕ್ಕಳಿಗೆ ಏಕಮುಖ ಕಲಿಕಾ ಅಭ್ಯಾಸದ ಒತ್ತಡದ ಮಧ್ಯೆ ಚಟುವಟಿಕೆ ಆಧಾರಿತ ಶಿಕ್ಷಣ ಅಗತ್ಯವಿದೆ.
ಇದಕ್ಕೆ ಸ್ಪೂರ್ತಿ ಕಲಿಕಾಹಬ್ಬ ಸಾಕ್ಷಿಯಾಗಿದೆ.ಎಲ್ಲಾ ವರ್ಗದ ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳಾದ ಶಿಷ್ಯವೇತನ ಪ್ರೋತ್ಸಾಹ ಧನ, ಸದುಪಯೋಗಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು.
ಪ್ರೋಷಕರು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಬೇಕು ಎಂದು ಹೇಳಿದರು. ಸರಕಾರಿ ನೌಕರರ ಸಂಘದ ಅಧ್ಯಕ್ಷ ಮುಖ್ಯಶಿಕ್ಷಕ ಚಂದ್ರಪ್ಪ ಮಾತನಾಡಿದರು. ಇದೇ ವೇಳೆ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಶಾಲಾ ಮಕ್ಕಳಿಂದ ನೃತ್ಯ ನಡೆಸಲಾಯಿತು.
ಸಂದರ್ಭದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಜ್ಞಾನೇಂದ್ರಪ್ಪ, ಸಿಆರ್‍ಪಿ ರಾಜಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ಯಾರಿಮಾ ಬೇಗಂ, ಪೇಂಟ್ ಚನ್ನಪ್ಪ, ದೈಹಿಕ ಶಿಕ್ಷಕ ಶಿವಣ್ಣ, ಶಿಕ್ಷಕರಾದ ಶಶಿರೇಖಾ, ಟಿ.ಕವಿತಾ,ಬಿ.ಬಸವರಾಜ್, ಜೆ.ತಿಪ್ಪೇಸ್ವಾಮಿ, ಎಚ್.ಸಿ.ಶಿವರುದ್ರಮ್ಮ ಇದ್ದರು.