ಸುದ್ದಿವಿಜಯ, ಜಗಳೂರು: ತಾಲೂಕಿನ ಕಲ್ಲೇದೇವರಪುರ ಗ್ರಾಪಂ ನೂತನ ಅಧ್ಯಕ್ಷರಾಗಿ ನಾಗಮ್ಮ ಡಿ.ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆಗಿರುವ ತಾಪಂ ಇಓ ಚಂದ್ರಶೇಖರ್ ಬುಧವಾರ ಘೋಷಿಸಿದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಎನ್.ಜೆ.ವಸಂತಕುಮಾರಿ ಅವರ ಅವಧಿ ಒಡಂಬಡಿಕೆಯಂತೆ ಮುಕ್ತಾಯವಾದ ಹಿನ್ನೆಲೆ ಕಲ್ಲೇದೇವರಪುರ ಗ್ರಾಮದ ಎಸ್‍ಟಿ ಸಾಮಾನ್ಯ ವರ್ಗದ ಸದಸ್ಯರಾದ ನಾಗಮ್ಮ ಡಿ.ತಿಪ್ಪೇಸ್ವಾಮಿ ಅವರು ಉಳಿದ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
13 ಜನ ಗ್ರಾಪಂ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿ ನಾಗಮ್ಮ ನಾಪಪತ್ರಸಲ್ಲಿಸಿದ್ದರು. ಅವರ ವಿರುದ್ಧ ಯಾರೂ ನಾಮಪತ್ರ ಸಲ್ಲಿಸದ ಕಾರಣ ಮಧ್ಯಾಹ್ನ 1.30ರ ನಂತರ ಚುನಾವಣಾಧಿಕಾರಿ ಇಓ ಚಂದ್ರಶೇಖರ್ ಅವರು ನಾಗಮ್ಮ ಅವರನ್ನು ಗ್ರಾಪಂ ನೂತನ ಅಧ್ಯಕ್ಷೆ ಎಂದು ಘೋಷಿಸಿದರು.
ನಾಗಮ್ಮ ಅಧ್ಯಕ್ಷರಾಗುತ್ತಿದ್ದಂತೆ ಸರ್ವ ಸದಸ್ಯರು ನಾಗಮ್ಮ ಅವರಿಗೆ ಹೂವಿನ ಹಾರ, ಶಾಲು ಹಾಕಿ ಸನ್ಮಾನಿಸಿದರು. ಗ್ರಾಪಂ ಕಚೇರಿಯ ಮುಂದೆ ಪಟಾಕಿ ಸಿಡಿಸಿ, ಸಿಹಿ ತಿನಿಸಿ ಸಮಭ್ರಮಿಸಿದರು. ಈ ವೇಳೆ ತಾಪಂ ಇಓ ಚಂದ್ರಶೇಖರ್, ಮುಖಂಡರಾದ ಡಿ.ಎಸ್.ಕಲ್ಲಪ್ಪ, ನಾಗಲಿಂಗಪ್ಪ, ಕೊಟ್ಟಿಗೆ ಡಿ.ತಿಪ್ಪೇಸ್ವಾಮಿ, ಅಜ್ಜಯ್ಯ, ಕುಮಾರ್ ಎಸ್, ರಾಜಶೇಖರ್, ಎನ್.ನಾಗೇಶ್, ಮಾಜಿ ಅಧ್ಯಕ್ಷ ಎಂ.ಎಚ್ ಕೃಷ್ಣಪ್ಪ, ಪಿಡಿಓ ರಾಜೇಶ್ವರಿ, ಬಿ.ಕೆ. ನಾಗರಾಜ್, ಕಲ್ಲೇದೇವರಪುರ, ಬೆಣ್ಣೆಹಳ್ಳಿ, ಸಂಗೇನಾಹಳ್ಳಿ, ಗೌರಮ್ಮನಹಳ್ಳಿ, ಬಸಪ್ಪನಹಟ್ಟಿ ಗ್ರಾಪಂನ ಒಟ್ಟು 13 ಜನ ಸದಸ್ಯರು ಇದ್ದರು.