ಜಗಳೂರು: ಕಸಾಪ ಸಮ್ಮೇಳನ ಯಶಸ್ವಿಗೆ ಸರ್ವರೂ ಕೈ ಜೋಡಿಸಿ!

Suddivijaya
Suddivijaya January 14, 2023
Updated 2023/01/14 at 11:26 AM

ಸುದ್ದಿವಿಜಯ, ಜಗಳೂರು: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಬೇಕಾದರೆ ಅದಕ್ಕೆ ಪ್ರತಿಯೊಬ್ಬರೂ ತನು ಮನ ಧನದಿಂದ ಕೈ ಜೋಡಿಸಿ ಎಂದು ನಿವೃತ್ತ ಪ್ರಾಂಶುಪಾಲ ಸಿದ್ದಪ್ಪ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿಯಲ್ಲಿ ಮಾತನಾಡಿದ ಅವರು ಈ ವರ್ಷ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳವನ್ನು ಬಯಲುರಂಗಮಂದಿರದ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸೋಣ. ಅದಕ್ಕೆ ಕನ್ನಡದ ಮನಸ್ಸುಗಳು ಒಂದಾಗಬೇಕು ಎಂದು ಕರೆ ನೀಡಿದರು.

ನಾನು ಉಪನ್ಯಾಸಕನಾಗಿ ನಿವೃತ್ತಿ ವರೆಗೆ 15 ಸಾವಿರ ವಿದ್ಯಾರ್ಥಿಗಳು ಪದವೀಧರರಾಗಿ ಹೊರಹೊಮ್ಮಿದ್ದಾರೆ. ವಿವಿಧ ಇಲಾಖೆಗಳಲ್ಲಿ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸಾಹಿತ್ಯಾಸಕ್ತಿ ಹೊಂದಿರುವವರು ಸ್ವಯಂಪ್ರೇರಿತವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಸಾಹಿತಿ ಎನ್.ಟಿ. ಎರ್ರಿಸ್ವಾಮಿ ಮಾತನಾಡಿ,ನಾನು ಕಥೆ ಕವನ ಯಶೋಗಾಥೆ ಬ್ಯಾಂಕಿಂಗ್ ವಿಚಾರ ಕುರಿತು 35 ಪುಸ್ತಕಗಳಲ್ಲಿ 22 ಪುಸ್ತಕಗಳು ಪ್ರಕಟಗೊಂಡಿವೆ. ಕನ್ನಡ ಸಾಹಿತ್ಯ ಓದು, ಬರಹ ಮೈಗೂಡಿಸಿಕೊಂಡು ಬಂದಿರುವೆ.

 ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಸಮ್ಮೇಳನ ಪೂರ್ವಭಾವಿ ಸಭೆ ನಡೆಯಿತು.
 ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಸಮ್ಮೇಳನ ಪೂರ್ವಭಾವಿ ಸಭೆ ನಡೆಯಿತು.

ಕನ್ನಡ ಅಭಿಮಾನಿಯಾಗಿ ನಾನು ಕನ್ನಡಾಂಬೆಯ ಸೇವೆಗೆ ಸದಾ ಸಿದ್ದನಾಗಿರುವೆ. 1996 ರಲ್ಲಿ ಜಿಲ್ಲಾ ಸಮ್ಮೇಳನ, 2002 ರಲ್ಲಿ ತಾಲೂಕು ಸಮ್ಮೇಳನ ನಡೆಸಲಾಗಿತ್ತು.ಈ ಬಾರಿ ಅಪಸ್ವರವಿಲ್ಲದೆ ಅದ್ಧೂರಿಯಾಗಿ ಸಮ್ಮೇಳನ ಆಯೋಜಿಸೋಣ ಎಂದರು.

ಕಸಾಪ ತಾಲೂಕು ಅಧ್ಯಕ್ಷೆ ಸುಜಾತಮ್ಮ ಮಾತನಾಡಿ, ಜಿಲ್ಲಾಧ್ಯಕ್ಷರಾದ ವಾಮದೇವಪ್ಪ ಅವರ ಸೂಚನೆಯಂತೆ ದಶಕಗಳ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನವನ್ನು ನಡೆಸಲಾಗುವುದು. ರೂಪರೇಶಗಳ ಬಗ್ಗೆ ಪದಾಧಿಕಾರಿಗಳು ಹಾಗೂ ಕನ್ನಡ ಪರ ಅಭಿಮಾನಿಗಳು ಹಿರಿಯರು ಸಲಹೆ ಸೂಚನೆ ನೀಡಬೇಕು ಎಂದರು.

ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ನಿವೃತ್ತ ಉಪನ್ಯಾಸಕ ರಾಜಪ್ಪ, ಹಿರಿಯ ನಾಗರಿಕ ಸಂಘದ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ವಕೀಲ ಆರ್ ಓಬಳೇಶ್, ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಪ್ಪ, ಗೌರಿಪುರ ಸತ್ಯಮೂರ್ತಿ, ಸಾಹಿತಿಗಳಾದ ಡಿಸಿ ಮಲ್ಲಿಕಾರ್ಜುನ್, ನಿವೃತ್ತ ಪ್ರಾಂಶುಪಾಲ ಪ್ರಭಾಕರ್, ವಸಂತಕುಮಾರ್, ನಿಬಗೂರು ರಾಜಪ್ಪ,

ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತೇಶ್, ಬಿಸಿಎಂ ಇಲಾಖೆ ನಿವೃತ್ತ ವಿಸ್ತರಣಾಧಿಕಾರಿ ವೆಂಕಟೇಶ್ ಮೂರ್ತಿ, ವ್ಯಾಸಗೊಂಡನಹಳ್ಳಿ ರಾಜಪ್ಪ, ಇಂದಿರಾ ಗುರುಸ್ವಾಮಿ, ಗೀತಾಮಂಜು, ಮುಖ್ಯಶಿಕ್ಷಕ ಸಿದ್ದೇಶ್, ಚಂದ್ರ ಕಾಂತ, ಅಬ್ದುಲ್ ರಜಾಕ್, ತಿಪ್ಪೇಸ್ವಾಮಿ, ಮಾದಿಹಳ್ಳಿ ಮಂಜುನಾಥ್, ಸಿದ್ದೇಶ್ ಸೇರಿದಂತೆ ಭಾಗವಹಿಸಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!