ಸುದ್ದಿವಿಜಯ, ಜಗಳೂರು: ಸಮಾಜಘಾತುಕ ಶಕ್ತಿಗಳ ವಿರುದ್ಧ ಮಹಿಳೆಯರು, ವಿದ್ಯಾರ್ಥಿಗಳು ದಿಟ್ಟವಾಗಿ ಎದುರಿಸುವ ಧೈರ್ಯ ಹೊಂದಬೇಕಾದರೆ ಅದಕ್ಕೆ ಕರಾಟೆ ಸ್ವಯಂ ರಕ್ಷಣಾ ಸಾಧನ ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ತಿಳಿಸಿದರು.
ಪಟ್ಟಣದ ಬಿದರಕೆರೆ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಅಡಿ ಬರುವ ಎಸ್‍ಸಿ ಮಹಿಳಾ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೋಮವಾರ ಸರಕಾರದಿಂದ ಆಯೋಜನೆ ಮಾಡಲಾಗಿರುವ ಉಚಿತ ಕರಾಟೆ ತರಬೇತಿ ಶಿಬಿರ ಹಾಗೂ ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಅವರ ಕಾಳಿಜಿಯಿಂದ ಮಹಿಳಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಕರಾಟೆ ಶಿಬಿರ ಆಯೋಜನೆ ಮಾಡಲಾಗಿದೆ.
ಎಸ್‍ಎಸ್‍ಎಲ್‍ಸಿ ಮಕ್ಕಳು ಓದಿಗೆ ಅಡ್ಡಿಯಾಗದಂತೆ ಕರಾಟೆ ಅಭ್ಯಾಸ ಮಾಡಿ. ಕಳೆದ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ತಾಲೂಕು ಪ್ರಥಮ ಸ್ಥಾನದಲ್ಲಿತ್ತು. ಈ ಬಾರಿಯೂ ಪ್ರಥಮ ಸ್ಥಾನಕ್ಕೇರಲು ಎಲ್ಲ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಅಭ್ಯಾಸ ಮಾಡಿ ಎಂದು ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ, ಕಲ್ಲೇದೇವರಪುರ ಮತ್ತು ಜಗಳೂರು ಪಟ್ಟಣದ ಎಸ್‍ಸಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕರಾಟೆ ಶಿಬಿರವನ್ನು ಆಯೋಜನೆ ಮಾಡಲಾಗಿದೆ.
ಉಚಿತವಾಗಿ ಈ ಶಿಬಿರ ವಾರಕ್ಕೆ ಎರಡು ದಿನಗಳ ಕಾಲ ನಡೆಯಲಿದೆ. ವಿದ್ಯಾರ್ಥಿನಿಯರು ಧೈಯವಾಗಿ ಓಡಾಡಬೇಕು ಎಂದರೆ ಮೊದಲು ಆತ್ಮರಕ್ಷಣೆಯ ಕಲೆಯನ್ನು ಕಲಿಯಬೇಕು. ಸ್ಕಾಲರ್‍ಶೀಪ್ ಸೇರಿದಂತೆ ಸರಕಾರದಿಂದ ಬರುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ತರಬೇತುದಾರರಾದ ಕೆ.ಎಂ.ರೇಖಾ ಮಾತನಾಡಿ, ನಾಲ್ಕು ಜನ ಪುಂಡ ಪೂಕರಿಗಳಿಗೆ ವಿದ್ಯಾರ್ಥಿಗಳು ತಮ್ಮದೇ ರೀತಿಯಲ್ಲಿ ಉತ್ತರ ಕೊಡವಷ್ಟು ಬಲಿಷ್ಠ ವಾಗಿ ಬೆಳೆಯಬೇಕಾದರೆ ಕಟ್ಟುನಿಟ್ಟಾಗಿ ಕರಾಟೆ ಕಲಿಯಿರಿ. ಮಕ್ಕಳಿಗೆ ಸಮಾಜದಲ್ಲಿ ಪ್ರಧಾನ ಭೂಬಿಕೆ ಎಂದರೆ ಅದು ಕರಾಠೆ ಎಂದು ಹೇಳಿದರು.
ಈ ವೇಳೆ ವಿದ್ಯಾರ್ಥಿನಿಯರಿಗೆ ಕರಾಠೆ ಪಟ್ಟುಗಳನ್ನು ಹೇಳಿಕೊಡಲಾಯಿತು. ಕಾರ್ಯಕ್ರಮದಲ್ಲಿ ವಾರ್ಡನ್ ರುಬಿನಾ ಬಾನು, ಹಾಲಮ್ಮ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.