ತೋರಣಗಟ್ಟೆ ಗ್ರಾಮದ ಪ್ರೊ.ಎಚ್.ಲಿಂಗಪ್ಪ ಜಗಳೂರು ತಾಲೂಕು ಕಸಪಾ ಸಮ್ಮೇಳನ ಅಧ್ಯಕ್ಷ

Suddivijaya
Suddivijaya February 13, 2023
Updated 2023/02/13 at 3:16 AM

ಸುದ್ದಿವಿಜಯ, ಜಗಳೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಚಿಂತಕ, ಬರಹಗಾರ ತೋರಣಗಟ್ಟೆ ಗ್ರಾಮದ ಪ್ರೊ.ಎಚ್.ಲಿಂಗಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಜಾತಮ್ಮ ತಿಳಿಸಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ  ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು. ಹಲವು ವರ್ಷಗಳ ನಂತರ ತಾಲ್ಲೂಕಿನಲ್ಲಿ ಎರಡನೇ ಸಾಹಿತ್ಯ ಸಮ್ಮೇಳನ ನೆಡೆಸಲು ಸರ್ವ ಕನ್ನಡ ಬಳಗದ ಬಂಧುಮಿತ್ರರು ಸರ್ವಾನು ಮತದಿಂದ ಒಪ್ಪಿಗೆ ಸೂಚಿಸಿದ್ದಾರೆ ಜೊತೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಅಜೀವ ಸದಸ್ಯರು ವಿವಿದ ಸಂಘಟನೆಗಳ ಕ.ಸಾ.ಪ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ, ಚಿಂತಕ ಪೆÇ್ರ.ಎಚ್.ಲಿಂಗಪ್ಪ ಆಯ್ಕೆ ಮುಖಂಡರೊoದಿಗೆ ಈಗಾಗಲೇ ಹಲವು ಸುತ್ತಿನ ಪೂರ್ವ ಭಾವಿ ಸಭೆ ನೆಡೆಸಿ ತೀರ್ಮಾನ ಮಾಡಿ ಆಯ್ಕೆ ಮಾಡಲಾಗಿದೆ ಎಂದರು.

 ಜಗಳೂರು ತಾಲೂಕಿನ ಕಸಾಪ ಅಧ್ಯಕ್ಷರಾಗಿ ಪ್ರೊ.ಎಚ್.ಲಿಂಗಣ್ಣ ಆಯ್ಕೆ ಬಗ್ಗೆ ಕಸಾಪಾ ಅಧ್ಯರಾದ ಸುಜಾತಮ್ಮ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಜಗಳೂರು ತಾಲೂಕಿನ ಕಸಾಪ ಅಧ್ಯಕ್ಷರಾಗಿ ಪ್ರೊ.ಎಚ್.ಲಿಂಗಣ್ಣ ಆಯ್ಕೆ ಬಗ್ಗೆ ಕಸಾಪಾ ಅಧ್ಯರಾದ ಸುಜಾತಮ್ಮ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿ ಯೊಂದಿಗೆ ಒಪ್ಪಿಗೆ ಪಡೆದು ನಮ್ಮ ತಾಲ್ಲೂಕಿನವರಾದ ಪೆÇ್ರ ಲಿಂಗಪ್ಪ ಸಾಹಿತ್ಯ ಕೃಷಿ ಜೊತೆಗೆ ವಿಭಿನ್ನ ಬಹುಮುಖ ಪ್ರತಿಭೆಯಂತಿರುವ ಅವರನ್ನ ಈ ಬಾರಿ ನೆಡೆಯುವ 2023 ರ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ್ನ ಅಧ್ಯಕ್ಷರಾಗಲಿದ್ದಾರೆ. ಸರ್ವರೂ ಕೈಜೊಡಿಸಿ ಕನ್ನಡ ತೇರು ಏಳೆಯೋಣ ಎಂದು ಮನವಿ ಮಾಡಿದರು.

ಕಾರ್ಯಕಾರಿ ಸಮಿತಿ ಸದಸ್ಯ ನಾಗಲಿಂಗಪ್ಪ ಮಾತನಾಡಿ, ಪ್ರಸ್ತುತ ಆಧುನಿಕ ಸಮಾಜಕ್ಕೆ ಸಾಹಿತ್ಯ ಭಾಷೆ ಕಲೆ ಸಂಸ್ಕøತಿ ಮತ್ತು ಐತಿಹಾಸಿಕ ಪರಂಪರೆ ವಿಚಾರ ಧಾರೆಗಳನ್ನು ತಿಳಿಸುವ ಮುಖ್ಯ ಉದ್ದೇಶದಿಂದಲೇ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.

ಜಗಳೂರು ತಾಲ್ಲೂಕು ಇತಿಹಾಸ ಮತ್ತು ಪರಂಪರೆಯ ಪ್ರತಿಬಿಂಬಿಸುವಂತಹ ಚಿತ್ರಗಳನ್ನ ಒಳಗೊಂಡಂತಹ ಸಮ್ಮೇಳನ ಲಾಂಛನವನ್ನ ಸಿದ್ದ ಪಡಿಸಲಾಗಿದೆ ವಿವಿದ ಗೋಷ್ಠಿಗಳನ್ಮ ನೆಡೆಸಲು ವಿವಿದ ಪ್ರತ್ಯೇಕವಾಗಿ ಸಮಿತಿ ರಚಿಸಲಾಗಿದ್ದು ಸಾಹಿತ್ಯ ಆಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿ ಎಂದು ತಿಳಿಸಿದರು.

ಇದೇ ವೇಳೆ ಕಾರ್ಯದರ್ಶಿ ಗೀತಾ ಮಂಜು. ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯ ಆರ್ ಓಬಳೇಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಗೀತಾ ಮಂಜುನಾಥ್.ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ, ಮಹಿಳಾ ಸಾಹಿತಿ ಗೌರಮ್ಮ, ಕಾರ್ಯಕಾರಣಿ ಸಮಿತಿ ಸದಸ್ಯರಾದ ಆರ್ ಓಬಳೇಶ್, ಮುಖ್ಯ ಶಿಕ್ಷಕಿ ಶಿವಮ್ಮ, ಚಂಪಕಲಾ ಇದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!