ಸುದ್ದಿವಿಜಯ, ಜಗಳೂರು: ಚುನಾವಣೆ ಹತ್ತಿರವಿದ್ದು ಎಚ್ಚರಿಕೆಯಿಂದ ಕೆಲಸ ಮಾಡಿ. ರೈತರು, ಕಾರ್ಮಿಕರನ್ನು ಸುಖಾಸುಮ್ಮನೆ ಅಲೆದಾಡಿಸಿದರೆ ಪರಿಣಾಮ ನೆಟ್ಟಗರಿಲ್ಲ ಎಂದು ಶಾಸಕ ಎಸ್.ವಿ.ರಾಮಚಂದ್ರ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಮಾರ್ಚ್ 5 ರ ಒಳಗೆ ಯಾವ ಯಾವ ಕಾಮಗಾರಿಗಳು ಅರ್ಧಕ್ಕೆ ಮುಗಿದಿವೆಯೋ ಅವೆಲ್ಲ ಪೂರ್ಣಗೊಳ್ಳಬೇಕು.
ಒಂದು ತಿಂಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತದೆ. ನನಗೆ ಅಧಿಕಾರ ಇರಲ್ಲ ಎಂದು ಮನಸೋ ಇಚ್ಛೆ ಬೇಜವಾಬ್ದಾರಿಯಿಂದ ಕೆಲಸ ಮಾಡಿದರೆ ನಾನು ಬೀದಿಗೆ ಇಳಿದು ಹೋರಾಡುತ್ತೇನೆ. ಶಾಸಕರು ಇಲ್ಲ ಎಂದು ಆಟವಾಡಿದರೆ ಸರಿಯಿರಲ್ಲ.
ಚುನಾವಣೆ ಸಮಯದಲ್ಲಿ ಯಾರ್ಯಾರ ಪರ ಪ್ರಚಾರ ಮಾಡಬೇಡಿ. ಅಧಿಕಾರಿಗಳಾಗಿ ನೀವು ನಿಮ್ಮ ಕೆಲಸ ನಿರ್ವಹಿಸಿ. ಹೇಳೋರಿಲ್ಲ ಕೇಳೋರಿಲ್ಲ ಎಂದು ರೈತರನ್ನು, ಅಸಾಯಕರನ್ನು, ಕಾರ್ಮಿಕರಿಗೆ ಅನ್ಯಾಯ ಮಾಡಿದರೆ ನನ್ನ ಹದ್ದಿನ ಕಣ್ಣು ನಿಮ್ಮ ಮೇಲೆ ಇದ್ದೇ ಇರುತ್ತದೆ.
ಅಸಡ್ಡೆ ಮಾಡಬೇಡಿ. ಅಧಿಕಾರ ಇರಲಿ ಇಲ್ಲದೇ ಇರಲಿ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ನನ್ನ ಪರವಾಗಿಯೂ ಬೇರೆಯವರ ಪರವಾಗಿಯೂ ಚುನಾವಣಾ ಕ್ಯಾಂಪೇನ್ ಮಾಡಬೇಡಿ. ನನ್ನ 5 ವರ್ಷದ ಅವಧಿಯಲ್ಲಿ ನಾನು ಪ್ರಾಮಾಣಿಕವಾಗಿ ಕಾರ್ಯಮಾಡಿದ್ದೇನೆ.
ನೀವು ಮುಖ್ಯ ಶಿಕ್ಷಕರಂತೆ ಇಲಾಖೆಯ ಕೆಲಸಗಳನ್ನು ಜವಾಬ್ದಾರಿಯಿಂದ ಮಾಡಬೇಕು. ಒಂದು ವೇಳೆ ಕೆಲಸ ಮಾಡದೇ ಇದ್ದರೆ ನನಗೆ ಗೊತ್ತು ಹೇಗೆ ಕೆಲಸ ಮಾಡಿಸಬೇಕು ಎಂದು. ಲೋಕಾಯುಕ್ತ, ಇಲ್ಲವೇ ಎಸಿಬಿ ಮೂಲಕ ನಿಮ್ಮಿಂದ ಕೆಲಸ ತೆಗೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ನನ್ನ ಅವಧಿಯ ಪ್ರಮುಖ ಯೋಜನೆಗಳಾದ 57 ಕೆರೆ ನೀರು ತಿಂಬಿಸುವ ಯೋಜನೆ, ಅಪ್ಪರ್ ಭದ್ರಾ ಮತ್ತು ಬಹುಗ್ರಾಮ ಕುಡಿಯುವ ಯೋಜನೆ ಹಣ ತರಲು ನಾನೆಷ್ಟು ಕಷ್ಟಪಟ್ಟಿದ್ದೇನೆ ಎಂದು ದೇವರಿಗೆಗೊತ್ತು. ಬರದ ನಾಡನ್ನು ಹಸಿರು ನಾಡನ್ನಾಗಿ ಮಾಡುವುದೇ ನನ್ನ ಗುರಿ.
ಶಂಕುಸ್ಥಾಪನೆ ನೆರವೇರಿಸಿದ ರಸ್ತೆ, ಕುಡಿಯುವ ನೀರು, ಮೂಲ ಸೌಕರ್ಯಗಳ ಕಾರ್ಯಗಳು ಅವಧಿಯೊಳಗೆ ಮುಕ್ತಾಯಗೊಳ್ಳಬೇಕು. 10 ದಿನದಲ್ಲಿ 15 ಕೆರೆಗಳಿಗೆ ನೀರು ಬರುತ್ತದೆ. ಪೈಪ್‍ಲೈನ್ ಕಾರ್ಯ ಶರವೇಗದಲ್ಲಿ ಸಾಗುತ್ತಿದೆ ಎಂದರು.
ಪಿಡ್ಲ್ಯೂಡಿ ಎಇಇ ರುದ್ರಪ್ಪ ಮಾತನಾಡಿ, ರಸ್ತೆ ವಿಸ್ತರಣೆಗೆ ಬೆಸ್ಕಾಂ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಂದ ಸಮಸ್ಯೆಯಿದೆ ದಯವಿಟ್ಟು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಅದಕ್ಕೆ ಶಾಸಕ ಎಸ್.ವಿ.ರಾಮಚಂದ್ರ ಪ್ರತಿಕ್ರಿಯೆ ನೀಡಿ ಲೋಕೋಪಯೋಗಿ ಇಲಾಖೆಗೆ ಸಂಪೂರ್ಣ ಸಹಕಾರ ನೀಡಿ ಎಂದರು.
ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಲ್ಲಿ ಕೋಟ್ಯಾಂತರ ರೂ ಹಣವಿದೆ ಸದುಯೋಗ ಪಡಿಸಿಕೊಳ್ಳಬೇಕು. ಫಲಾನುಭವಿಗಳಿಗೆ ಯೋಜನೆ ಕೈ ಸೇರಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಬಿ.ಮಹೇಶ್ವರಪ್ಪ ಅಧಿಕಾರಿಗಳಿಗೆ ತಿಳಿಸಿದರು.
ಈ ವೇಳೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್‍ಮೂರ್ತಿ, ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್, ಪಶುಸಂಗೋಪನೆ ಇಲಾಖೆ ಅಧಿಕಾರಿ ಲಿಂಗರಾಜು, ಬೆಸ್ಕಾಂ ಎಇಇ ರಾಮಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಮಹೇಶ್ವರಪ್ಪ, ತಾಪಂ ಪ್ರಭಾರ ಇಓ ವೈ.ಎಚ್.ಚಂದ್ರಶೇಖರ್, ಟಿಎಚ್‍ಓ ನಾಗರಾಜ್, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾದಿಕ್‍ವುಲ್ಲಾ, ಬಿಸಿಎಂ ಇಲಾಖೆ ಅಧಿಕಾರಿ ಆಸ್ಮಾಬಾನು, ಜಿಪಂ ಎಇಇ ತಿಪ್ಪೇಶಪ್ಪ ಸೇರಿದಂತೆ ಅನೇಕುರು.
ಪಿಡಿಒಗಳಿಗೆ ಕ್ಲಾಸ್
ಕೆಡಿಪಿ ಸಭೆಗೆ 22 ಗ್ರಾಪಂಗಳಿಂದ ಕೇವಲ ಎಂಟು ಜನ ಪಿಡಿಓಗಳು ಹಾಜರಾಗಿದ್ದರು. ಅದಕ್ಕೆ ಗರಂ ಆದ ಶಾಸಕ ಎಸ್.ವಿ.ರಾಮಚಂದ್ರ ಸಭೆ ಮಾಡುವುದು ಆಟಕ್ಕಲ್ಲ. ಕೇವಲ ಎಂಡು ಜನ ಬಂದಿದ್ದೀರಿ. ಉಳಿದವರು ಯಾಕೆ ಬಂದಿಲ್ಲ. ಗ್ರಾಮ ಸಭೆಗಳ ನೆಪವೊಡ್ಡಿ ಕೆಡಿಪಿ ಸಭೆಗೆ ಗೈರಾದರೆ ಹೇಗೆ. ಮತ್ತೊಮ್ಮೆ ಸಭೆ ನಡೆಸುತ್ತೇನೆ ಯಾವುದೇ ಅಧಿಕಾರಿಗಳು ಗೈರಾಗುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೆಡಿಪಿ ಸಭೆಗೆ ಗೈರಾದವರು
ಪೊಲೀಸ್ ಇಲಾಖೆ, ಸಾಮಾಜಿಕ ಅರಣ್ಯ, ತಹಶೀಲ್ದಾರ್, ವಲಯ ಅರಣ್ಯ, ವನ್ಯಜೀವಿ ಅರಣ್ಯ ಇಲಾಖೆ, ಮೀನುಗಾರಿಕೆ ಸೇರಿದಂತೆ ಅನೇಕ ಅಧಿಕಾರಿಗಳು ಗೈರಾಜರಾಗಿದ್ದರು. ಅಧಿಕಾರಿಗಳ ಗೈರಾಜರಿಗೆ ಶಾಸಕ ಎಸ್.ವಿ.ರಾಮಚಂದ್ರ ಗರಂ ಆದರು.