ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಮಕ್ಕಳ ಶಿಕ್ಷಣ ಕಲಿಕೆಗೆ ಅಡ್ಡಿ

Suddivijaya
Suddivijaya July 25, 2022
Updated 2022/07/25 at 11:54 PM

ಸುದ್ದಿವಿಜಯ,ಜಗಳೂರು: ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಮಕ್ಕಳ ಶಿಕ್ಷಣ ಕಲಿಕೆಗೆ ಅಡ್ಡಿಯಾಗುತ್ತದೆ ಆದ್ದರಿಂದ ಶಾಲೆಗಳ ಅಭಿವೃದ್ದಿ ಸರ್ಕಾರ ಒತ್ತು ನೀಡಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಕೆ.ಸಿ ರವಿಕುಮಾರ್ ಒತ್ತಾಯಿಸಿದರು.

ತಾಲೂಕಿನ ಕೆಳಗೋಟೆ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸ್ವಾತಂತ್ರö್ಯ ದಿನಾಚರಣೆ ಹಿನ್ನೆಲೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಶಾಲೆಯ180 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಅವರಿಗೆ ಶುದ್ದವಾದ ಕುಡಿಯುವ ನೀರಿಲ್ಲ, ಶೌಚಗೃಹ ವ್ಯವಸ್ಥೆ ಇಲ್ಲ, ಶಾಲಾ ಕೊಠಡಿಗಳು ಬಹುತೇಕ ದುಸ್ಥಿತಿಯಲ್ಲಿವೆ, ಇಂತಹ ಸ್ಥಿತಿಯಲ್ಲಿ ಗ್ರಾಮೀಣ ಮಕ್ಕಳು ಶಿಕ್ಷಣ ಕಲಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದ ಅವರು ನಾವೂ ಓದಿದ ಶಾಲೆಯ ಅಭಿವೃದ್ದಿಗೆ ಹಳೆಯ ವಿದ್ಯಾರ್ಥಿಗಳು, ಗ್ರಾಮದ ಹಿರಿಯರು, ಚುನಾಯಿತರು ಸಹಕರಿಸಿ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಬೇಕು ಎಂದರು.

ಸ್ವಾತಂತ್ರ್ಯ ದಿನಾಚರಣೆಗೆ ಸಾಥ್ ನೀಡಿ:
ಈ ಬಾರಿ ೭೫ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಮೃತಮಹೋತ್ಸವವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಆ.15ರ ರಾಷ್ಟ್ರೀಯ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಗ್ರಾಮಸ್ಥರು ಕೈಜೋಡಿಸಿ ಬೆಂಬಲಿಸಬೇಕು ಎಂದು ಶಾಲಾ ಮುಖ್ಯ ಶಿಕ್ಷಕ ಟಿ. ಅಂಜಿನಪ್ಪ ಮನವಿ ಮಾಡಿದರು.

ಮಳೆಗಾಲವಾಗಿರುವುದರಿಂದ ಈ ಬಾರಿ ಸ್ವಾತಂತ್ರö್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಿ ಮುಂದಿನ ಜನವರಿ ೨೬ರ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಪ್ರತಿ ಮನೆಯ ಸದಸ್ಯರು ಪಾಲ್ಗೊಂಡು ಗ್ರಾಮದಲ್ಲಿ ಹಬ್ಬದಂತೆ ಆಚರಿಸೋಣ, ಅಂದು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳನ್ನು ಆಯೋಜಿಸಿ ಮಕ್ಕಳಿಗೆ ಪ್ರೋತ್ಸಹ ನೀಡವುದರಿಂದ ಕಾರ್ಯಕ್ರಮಕ್ಕೆ ಶೋಭೆ ಬರಲಿದೆ ಎಂದು ಗ್ರಾ.ಪಂ ಸದಸ್ಯ ಶಿವಕುಮಾರ್ ತಿಳಿಸಿದರು.

ಮಕ್ಕಳ ಆರೋಗ್ಯದಲ್ಲಿ ನಿರ್ಲಕ್ಷಬೇಡ:
ತಾಲೂಕಿನಲ್ಲಿ ಈಗಾಗಲೇ ಡೆಂಘ್ಯು ಮತ್ತು ಮಲೇರಿಯಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ, ನಮ್ಮ ಗ್ರಾಮಗದಲ್ಲಿ ಯಾವೊಬ್ಬ ಮಕ್ಕಳಿಗೆ ತೊಂದರೆಯಾಗದಂತೆ ಮುಂಜಾಗ್ರತೆವಹಿಸಬೇಕು, ಶಾಲಾ ಆವರಣದ ಗುಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಬೇಕು, ಶೀತ,ಕೆಮ್ಮು, ಜ್ವರ ಕಾಣಿಸಿಕೊಂಡರೆ ತಕ್ಷಣವೇ ವೈದ್ಯರಿಂದ ಚಿಕಿತ್ಸೆ ಪಡೆದು ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಗ್ರಾ.ಪಂ ಸದಸ್ಯ ಶಿವಕುಮಾರ್ ಸಲಹೆ ನೀಡಿದರು.

ಜುಲೈ 29ಮತ್ತು30ಕ್ಕೆ ಕ್ರೀಡಾಕೂಟ:
೨೦೨೨-೨೩ನೇ ಸಾಲಿನ ಹೊಸಕೆರೆ ವಲಯ ಮಟ್ಟದ ಕ್ರೀಡಾಕೂಟ ಜು.೨೯ ಮತ್ತು ೩೦ರಂದು ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ನಡೆಯಲಿದೆ, ಮಕ್ಕಳಿಗೆ ಅಗತ್ಯವಾದ ವಸ್ತುಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ. ಮಕ್ಕಳು ಕ್ರೀಡೆ ಪೂರ್ವ ತಯಾರಿಸಿ ನಡೆಸಿಕೊಂಡು ಪ್ರಶಸ್ತಿ ಗೆಲ್ಲಲು ಸಿದ್ದರಾಗಿದ್ದಾರೆ ಎಂದು ದೈಹಿಕ ಶಿಕ್ಷಕ ಆರ್. ಮೂರ್ತಿ ತಿಳಿಸಿದರು.

ಚೆಕ್ ಮೂಲಕ ವಿದ್ಯಾರ್ಥಿಗಳಿಗೆ ಹಣ:
೨೦೨೧ನೇ ಸಾಲಿನಲ್ಲಿ ಕೋವಿಡ್‌ನಿಂದ ಶಾಲೆಗಳಿಗೆ ರಜೆ ನೀಡಿದ್ದ ಎರಡು ತಿಂಗಳು ಬಿಸಿಯೂಟ ನೀಡಿರಲಿಲ್ಲ, ಅದರ ಬದಲಾಗಿ1ರಿಂದ5ನೇ ತರಗತಿಯ ಮಕ್ಕಳಿಗೆ ೨೪೮ ಹಾಗೂ 6ರಿಂದ10ನೇ ತರಗತಿಯ ಮಕ್ಕಳಿಗೆ 372 ರೂಗಳನ್ನು ಸರ್ಕಾರ ಮಂಜೂರು ಮಾಡಿದೆ, ಈ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರ ಕಾಳಜಿಯಿಂದ ಶಾಲಾ ದಾಖಲಾತಿಯ ಶೇ.92ರಷ್ಟು ವಿದ್ಯಾರ್ಥಿಗಳಿಗೆ ಚೆಕ್ ಮೂಲಕ ವಿದ್ಯಾರ್ಥಿಗಳಿಗೆ ಹಣ ವಿತರಣೆ ಮಾಡಿ ಗಮನ ಸೆಳೆದಿದ್ದಾರೆ.

ಮಕ್ಕಳಿಗೆ ಚೆಕ್ ಮೂಲಕ ಹಣ ನೀಡಿದ ತಾಲೂಕಿನ ಪ್ರಥಮ ಶಾಲೆ ಎಂಬ ಹೆಗ್ಗಳಿಗೆ ಹೊಂದಿದೆ.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಫಾಧ್ಯಕ್ಷೆ ಅಂಜಿನಮ್ಮ, ಸದಸ್ಯರಾದ ನಂದಿನಿ, ರಾಜೇಶ್ವರಿ, ಆಶಾ, ನೇತ್ರಮ್ಮ, ರಾಜಪ್ಪ, ಮುಖಂಡರಾದ ಕೊಟ್ರೇಶ್,ತಿಮ್ಮೇಶ್, ತಿಪ್ಪೇಸ್ವಾಮಿ, ಶಿಕ್ಷಕರಾದ ರಾಜಪ್ಪ, ನಾಗರಾಜ್, ಜಿ.ಟಿ ಮಹೇಶ್ ಸೇರಿದಂತೆ ಮತ್ತಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!