ಸುದ್ದಿವಿಜಯ ಜಗಳೂರು.ತಾಲೂಕಿನ ಕೊಡದಗುಡ್ಡದಲ್ಲಿ ನೂತನವಾಗಿ ನಿರ್ಮಿಸಿರುವ ಭದ್ರ ಕಾಳಿಕಾಂಭ ದೇವಸ್ಥಾನ ಗೋಪುರದ ಕಳಸಾರೋಹಣ ಕಾರ್ಯಕ್ರಮ ಆ.11ರಂದು ಬೆಳಗ್ಗೆ 9.3೦ಕ್ಕೆ ನಡೆಯಲಿದೆ ಎಂದು ವೀರಭದ್ರೇಶ್ವರ ಸ್ವಾಮಿ ಟ್ರಸ್ಟ್ ಕಾರ್ಯದರ್ಶಿ ರುದ್ರಸ್ವಾಮಿ ತಿಳಿಸಿದ್ದಾರೆ.
ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಗುರುವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ವೀರಭದ್ರಸ್ವಾಮಿಗೆ ಮಹಾರುದ್ರಾಭಿಷೇಕ, ಭದ್ರ ಕಾಳಮ್ಮಗೆ ರುದ್ರಾಭಿಷೇಕ ಮತ್ತು ಕುಂಕುಮಾರ್ಚನೆ ಮತ್ತು ಗಣಹೋಮ, ದುರ್ಗಹೋಮ ಮುಂತಾದ ಪೂಜಾ ಕೈಂಕರ್ಯಗಳು ಜರುಗಲಿವೆ, ಬೆಳಗ್ಗೆ 9.3೦ಕ್ಕೆ ದೇವಸ್ಥಾನದ ಕಳಸಾರೋಹಣ ನಡೆಯಲಿದೆ ಎಂದು ತಿಳಿಸಿದ್ದಾರೆ.