ಸುದ್ದಿವಿಜಯ,ಜಗಳೂರು: ತಾಲೂಕಿನ ಕೊರಟಗೆರೆ ಸಮೀಪದ ಐತಿಹಾಸಿಕ ಕೊಣಚಗಲ್ ಶ್ರೀ ರಂಗನಾಥ ಸ್ವಾಮಿ ಕುದುರೆ ಮಹೋತ್ಸವಕ್ಕೆ ಭಕ್ತರು, ದೇವಸ್ಥಾನದ ಆಡಳಿತ ಮಂಡಳಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಾ.26 ರಂದು ಭಾನುವಾರ ರಾತ್ರಿ 10.30ಕ್ಕೆ ರಂಗನಾಥ ಸ್ವಾಮಿಯ ಕುದುರೆ ಮಹೋತ್ಸವ ನೆರವೇರಲಿದೆ. ಸೋಮವರದಿಂದ ರಂಗನಾಥನ ಸನ್ನಿಧಿಯಲ್ಲಿ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿವೆ. ಸೊಮವಾರ ಭೂತನ ಸೇವೆ. ಬುಧವಾರ ಮಂಗಳ ಸ್ನಾನ ಮತ್ತು ಕಂಕಣಧಾರಣೆ,
ಗುರುವಾರ ಮದಲಿಂಗ ಶಾಸ್ತ್ರ ಮತ್ತು ನವಿಲೋತ್ಸವ, ಶುಕ್ರವಾರ ಗರುಡೋತ್ಸವ, ಶನಿವಾರ ಹಿರೇಬೇಟೆ ಗಜೋತ್ಸವ ನೆರವೇರಲಿದೆ. 26 ರಂದು ಭಾನುವಾರ ಸ್ವಾಮಿಯ ಕುದುರೆ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಲಿದೆ.
ಸೋಮವಾರ ಕೋಲಾಟ, ಮಂಗಳವಾರ ಓಕುಳಿ ಮತ್ತು ಕತ್ತಿ ಪವಾಡದೊಂದಿಗೆ ಧಾರ್ಮಿಕ ವಿಧಿವಿಧಾನಗಳಿಗೆ ತೆರೆಬೀಳಲಿದೆ. ಅನ್ನ ಸಂತರ್ಪಣೆ ಕಾರ್ಯಕ್ಕೆ ಧಾನಿಗಳು ನೆರವು ನೀಡಬಹುದು ಎಂದು ಗ್ರಾಮ ಲೆಕ್ಕಾಧಿಕಾರಿ ಹಾಗೂ ಆಡಳಿತಾಧಿಕಾರಿ ಜಿ.ಯು.ನವೀನ್, ರಾಜಸ್ವ ನಿರೀಕ್ಷಕರಾದ ಧನಂಜಯ್, ಬಿಳಿಚೋಡು ವಿಭಾಗದ ಉಪತಹಶೀಲ್ದಾರ್ ಮಂಜಪ್ಪ, ಜಗಳೂರು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.